ಸಾಂದರ್ಭಿಕ ಚಿತ್ರ 
ದೇಶ

2016ರಲ್ಲಿ ಭಾರತದಲ್ಲಿ ಒಂದು ಲಕ್ಷಕ್ಕೂ ಅಧಿಕ ಮಕ್ಕಳು ವಾಯುಮಾಲಿನ್ಯದಿಂದ ಸಾವು: ವಿಶ್ವ ಆರೋಗ್ಯ ಸಂಸ್ಥೆ

2016ರಲ್ಲಿ 5 ವರ್ಷಕ್ಕಿಂತ ಕೆಳಗಿನ ಒಂದು ಲಕ್ಷಕ್ಕೂ ಅಧಿಕ ಮಕ್ಕಳು ಕಲುಷಿತ ಗಾಳಿ ಸೇವಿಸಿ ಭಾರತದಲ್ಲಿ ಮೃತಪಟ್ಟಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಹೊಸ ...

ನವದೆಹಲಿ: 2016ರಲ್ಲಿ 5 ವರ್ಷಕ್ಕಿಂತ ಕೆಳಗಿನ ಒಂದು ಲಕ್ಷಕ್ಕೂ ಅಧಿಕ ಮಕ್ಕಳು ಕಲುಷಿತ ಗಾಳಿ ಸೇವಿಸಿ ಭಾರತದಲ್ಲಿ ಮೃತಪಟ್ಟಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಹೊಸ ಅಧ್ಯಯನ ತಿಳಿಸಿದೆ. ಕಡಿಮೆ ಮತ್ತು ಮಧ್ಯಮ ಪ್ರಮಾಣದ ಆದಾಯ ಹೊಂದಿರುವ ದೇಶಗಳಲ್ಲಿ ಇದೇ ವಯಸ್ಸಿನ ಶೇಕಡಾ 98ರಷ್ಟು ಮಕ್ಕಳು ವಾಯುಮಾಲಿನ್ಯಕ್ಕೆ ತುತ್ತಾಗುತ್ತಾರೆ ಎಂದು ಅಧ್ಯಯನ ತಿಳಿಸಿದೆ.

ವಾಯುಮಾಲಿನ್ಯ ಮತ್ತು ಮಕ್ಕಳ ಆರೋಗ್ಯ: ಸ್ವಚ್ಛ ವಾತಾವರಣ ಎಂಬ ಶೀರ್ಷಿಕೆಯಲ್ಲಿ 15 ವರ್ಷಕ್ಕಿಂತ ಕೆಳಗಿನ ಸುಮಾರು 6 ಲಕ್ಷ ಮಕ್ಕಳು 2016ರಲ್ಲಿ ಮನೆಯ ಒಳಗಿನ ಮತ್ತು ಮನೆಯ ಹೊರ ವಾತಾವರಣದ ವಾಯುಮಾಲಿನ್ಯಗಳಿಗೆ ತುತ್ತಾಗುತ್ತಿದ್ದಾರೆ. ಜಾಗತಿಕವಾಗಿ ವಿಶ್ವದ 18 ವರ್ಷಕ್ಕಿಂತ ಕೆಳವಯಸ್ಸಿನ ಶೇಕಡಾ 93ರಷ್ಟು ಮಕ್ಕಳಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ವಾಯುಗುಣಮಟ್ಟದ ಮಾರ್ಗಸೂಚಿ ಪ್ರಕಾರ ವಾತಾವರಣದಲ್ಲಿ ಸುತ್ತುವರಿದ ಸೂಕ್ಷ್ಮ ಕಣ (PM2.5) ಮಟ್ಟಗಳು 5 ವರ್ಷಕ್ಕಿಂತ ಕೆಳಗಿನ ಮಕ್ಕಳಲ್ಲಿ 630 ಮಿಲಿಯನ್ ಮತ್ತು 15 ವರ್ಷಕ್ಕಿಂತ ಕೆಳಗಿನ ಮಕ್ಕಳಲ್ಲಿ 1.8 ಬಿಲಿಯನ್ ಆಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ನಿನ್ನೆ ಬಿಡುಗಡೆ ಮಾಡಿರುವ ಅಧ್ಯಯನದಲ್ಲಿ ಹೇಳಿದೆ.

ಗ್ರೀನ್ ಪೀಸ್ ಎಂಬ ಸಂಸ್ಥೆ ಬಿಡುಗಡೆ ಮಾಡಿರುವ ಇನ್ನೊಂದು ವರದಿಯಲ್ಲಿ ಭಾರತದ ಮಾಲಿನ್ಯ ಮಟ್ಟವನ್ನು ಸೂಚಿಸುತ್ತದೆ. ವಿಶ್ವದ PM2.5 ಮತ್ತು ಓಝೋನ್ ರಚನೆಗೆ ಕಾರಣವಾಗುವ ಸಾರಜನಕ ಆಕ್ಸೈಡ್  ದೆಹಲಿ-ಎನ್ ಸಿಆರ್ ಪ್ರದೇಶಗಳಲ್ಲಿ ಹೆಚ್ಚಾಗಿದೆ. ಉತ್ತರ ಪ್ರದೇಶದ ಸೋನಭದ್ರ, ಮಧ್ಯ ಪ್ರದೇಶದ ಸಿಂಗ್ರೌಲಿ ಮತ್ತು ಒಡಿಶಾದ ಟಲ್ಚರ್-ಅಂಗುಲ್ ಹೆಚ್ಚು ಮಾಲಿನ್ಯದ ಪ್ರದೇಶಗಳೆಂದು ವರದಿಯಲ್ಲಿ ಗುರುತಿಸಲಾಗಿದೆ.

ಕೈಗಾರಿಕೆಗಳು, ಮನೆಗಳು, ಕಾರು ಮತ್ತು ಟ್ರಕ್ ಗಳಿಂದ ಹೊರಸೂಸುವ ಹೊಗೆ ವಾತಾವರಣದಲ್ಲಿ ಸೇರಿಕೊಂಡು ಕಲುಷಿತವಾಗುತ್ತದೆ. 2016ರಲ್ಲಿ ಮನೆಗಳಿಂದ ಬಂದ ಹೊಗೆ, ಧೂಳುಗಳಿಂದ 5 ವರ್ಷಕ್ಕಿಂತ ಕೆಳಗಿನ ಸುಮಾರು 66,890 ಮಕ್ಕಳು ಮೃತಪಟ್ಟಿದ್ದು ಅವುಗಳಲ್ಲಿ 36,073 ಹೆಣ್ಣುಮಕ್ಕಳು ಮತ್ತು 30,817 ಬಾಲಕರಾಗಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಸಂಸ್ಥೆಯ ಈ ವರದಿಯು ಮುಂದಿನ ದಿನಗಳಲ್ಲಿ ಮಕ್ಕಳ ಆರೋಗ್ಯದ ಬಗ್ಗೆ ವಹಿಸಬೇಕಾಗ ಎಚ್ಚರಿಕೆ ಮೇಲೆ ಬೆಳಕು ಚೆಲ್ಲುತ್ತದೆ. ಕಲುಷಿತ ಹೊಗೆ ಮತ್ತು ಗಾಳಿ ಪ್ರತಿವರ್ಷ ಲಕ್ಷಾಂತರ ಮಕ್ಕಳನ್ನು ಬಲಿತೆಗೆದುಕೊಳ್ಳುತ್ತಿದ್ದು ಇದರಿಂದ ಜನಜೀವನವೇ ಹಾಳಾಗುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮಹಾ ನಿರ್ದೇಶಕ ಡಾ ಟೆಡ್ರೊಸ್ ಅತಾನೊಮ್ ಘೆಬ್ರೈಸಸ್ ಹೇಳಿದ್ದಾರೆ.

ಇಂತಹ ಪರಿಸ್ಥಿತಿಯನ್ನು ಎದುರಿಸಿಕೊಂಡು ಜೀವನ ನಡೆಸುವುದು ಕಷ್ಟ.
ಪ್ರತಿ ಮಗು ಶುದ್ಧ ಗಾಳಿಯನ್ನು ಉಸಿರಾಡುವಂತಾದರೆ ಮಾತ್ರ ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢರಾಗಲು ಸಾಧ್ಯ ಎಂದು ಅವರು ಹೇಳುತ್ತಾರೆ.

ವಿಶ್ವ ಆರೋಗ್ಯ ಸಂಸ್ಥೆಯ ಸಾರ್ವಜನಿಕ ಆರೋಗ್ಯ ಇಲಾಖೆಯ ನಿರ್ದೇಶಕಿ ಡಾ ಮರಿಯಾ ನೈರಾ,
ವಾಯು ಮಾಲಿನ್ಯವು ನಮ್ಮ ಮಕ್ಕಳ ಮಿದುಳಿನ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತಿದೆ, ನಾವು ಊಹೆ ಮಾಡುವುದಕ್ಕಿಂತ ಹೆಚ್ಚಿನ ಮಟ್ಟದಲ್ಲಿ ವಾಯುಮಾಲಿನ್ಯ ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ.ಆದರೆ ಅಪಾಯಕಾರಿ ಮಾಲಿನ್ಯಕಾರಕಗಳ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಹಲವು ನೇರ-ಮಾರ್ಗಗಳಿವೆ ಎನ್ನುತ್ತಾರೆ ಅವರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮೈಸೂರು ರಾಜಮನೆತನ ಹೊರಗಿಟ್ಟು ಕರ್ನಾಟಕ ಇತಿಹಾಸ ಊಹಿಸುವುದು ಕಷ್ಟ': ಗವಿಸಿದ್ಧೇಶ್ವರ ಶ್ರೀಗಳು; Video

ಮೈಸೂರು ದಸರಾಕ್ಕೆ ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳಿಂದ ಅಧಿಕೃತ ಚಾಲನೆ

4 ಜನರಿಗೆ ಒಂದೇ ಟಿಕೆಟ್! ಸಾರಿಗೆ ಇಲಾಖೆಯಲ್ಲಿ ಡೀಸೆಲ್ ಬೆನ್ನಲ್ಲೇ ಟಿಕೆಟ್ ರೋಲ್ ಕೊರತೆ

ದೆಹಲಿಯಲ್ಲಿ ಹೈಡ್ರಾಮಾ: ವಿಮಾನ ನಿಲ್ದಾಣದಲ್ಲಿ ಬಂಧನಕ್ಕೊಳಗಾಗಿದ್ದ CJP ನಾಯಕರಾದ ದೀಪ್ಕೆ, ರಾಂಕಾ, ದಾಸ್ ಕೊನೆಗೂ ಬಿಡುಗಡೆ, 1 ವರ್ಷ ಶಾಂತಿ ಕಾಪಾಡುವಂತೆ ಷರತ್ತು..!

Riyadh ವಿಮಾನ ನಿಲ್ದಾಣದ ಮೇಲೆ ಕ್ಷಿಪಣಿ ದಾಳಿ: 12 ಮಂದಿ ಸಾವು, 300ಕ್ಕೂ ಹೆಚ್ಚು ಜನರಿಗೆ ಗಾಯ