ನವದೆಹಲಿ: ಪರಿಸರ ಮಾಲಿನ್ಯ ಆಗುತ್ತಿರುವುದನ್ನು ಪರಿಗಣಿಸಿ ಪಟಾಕಿ ಸಿಡಿಸಲು ಸಮಯವನ್ನು ನಿಗದಿ ಮಾಡಿದ್ದ ಸುಪ್ರೀಂಕೋರ್ಟ್ ಇದೀಗ ತಮಿಳುನಾಡು ಸರ್ಕಾರದ ಮನವಿಯನ್ನು ಪರಿಗಣಿಸಿ ರಾಜ್ಯದಲ್ಲಿ ಪಟಾಕಿ ಸಿಡುವ ಸಮಯವನ್ನು ವಿಸ್ತರಣೆ ಮಾಡಿದೆ.
ದೀಪಾವಳಿ ಸೇರಿ ಇತರೆ ಹಬ್ಬಗಳಂದು ಇಡೀ ದಿನ ಪಟಾಕಿ ಸಿಡಿಸುವ ಸ್ವಾತಂತ್ರ್ಯಕ್ಕೆ ಈ ಹಿಂದೆ ಕಡಿವಾಣ ಹಾಕಿದ್ದ ಸುಪ್ರೀಂಕೋರ್ಟ್, ಪಟಾಕಿ ಸಿಡಿತದಿಂದ ಭಾರೀ ಪರಿಸರ ಮಾಲಿನ್ಯ ಆಗುತ್ತಿರುವುದನ್ನು ಪರಿಗಣಿಸಿ, ಪಟಾಕಿ ನಿರ್ಬಂಧಿ ಕಡಿಮೆ ಮಾಲಿನ್ಯಕಾರಕ ಹಸಿರು ಪಟಾಕಿ ಮಾರಾಟಕ್ಕೆ ಅನುಮತಿ ನೀಡಿತ್ತು. ಇತರ ಹಬ್ಬಾಚರಣೆ ವೇಳೆ ರಾತ್ರಿ 8ರಿಂದ 10ರವರೆಗೆ ಮಾತ್ರ ಪಟಾಕಿ ಸಿಡಿಸಬೇಕೆಂದು ನಿಬಂಧನೆಯನ್ನೂ ವಿಧಿಸಿತ್ತು.
ಸುಪ್ರೀಂಕೋರ್ಟ್ ಈ ಆದೇಶ ಕುರಿತಂತೆ ಅಸಮಾಧಾನ ವ್ಯಕ್ತಪಡಿಸಿದ್ದ ತಮಿಳುನಾಡು ಸರ್ಕಾರ ಪಟಾಕಿ ಸಿಡಿಸುವ ಸಮಯವನ್ನು ವಿಸ್ತರಣೆ ಮಾಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿತ್ತು.
ಇದೀಗ ಈ ಮನವಿಯನ್ನು ಪರಿಗಣಿಸಿರುವ ನ್ಯಾಯಾಲಯ ದೀಪಾವಳಿ ಹಬ್ಬದ ದಿನದಂದು 4.30ರಿಂದ 6.30ರವರೆಗೂ ಪಟಾಕಿ ಸಿಡಿಸಲು ಅವಕಾಶ ಮಾಡಿಕೊಟ್ಟಿದೆ.