'ಅಮ್ಮ, ಐ ಲವ್ ಯೂ, ನಾನು ಸಾಯಬಹುದು ಧೈರ್ಯವಾಗಿರು': ಸಾವು ಕಣ್ಣಮುಂದಿದ್ದರೂ ಹೆತ್ತವಳಿಗೆ ಸಂದೇಶ ರವಾನಿಸಿದ ಪತ್ರಕರ್ತ 
ದೇಶ

'ಅಮ್ಮ, ಐ ಲವ್ ಯೂ, ನಾನು ಸಾಯಬಹುದು ಧೈರ್ಯವಾಗಿರು': ಸಾವು ಕಣ್ಣಮುಂದಿದ್ದರೂ ಹೆತ್ತವಳಿಗೆ ಸಂದೇಶ ರವಾನಿಸಿದ ಪತ್ರಕರ್ತ

'ಅಮ್ಮ ಐ ಲವ್ ಯೂ, ಈ ದಾಳಿಯಲ್ಲಿ ನಾನು ಸಾಯಬಹುದು ಧೈರ್ಯವಾಗಿರು' ನಕ್ಸಲರು ದಾಳಿ ನಡೆಸಿದ ಸಂದರ್ಭದಲ್ಲಿ ಸಾವಿನಂಚಿನಲ್ಲಿದ್ದ ಪತ್ರಕರ್ತ ತನ್ನ ಹೆತ್ತ ತಾಯಿಗೆ ರವಾನಿಸಿದ ಸಂದೇಶವಿದು...

ದಂತೇವಾಡ: 'ಅಮ್ಮ ಐ ಲವ್ ಯೂ, ಈ ದಾಳಿಯಲ್ಲಿ ನಾನು ಸಾಯಬಹುದು ಧೈರ್ಯವಾಗಿರು' ನಕ್ಸಲರು ದಾಳಿ ನಡೆಸಿದ ಸಂದರ್ಭದಲ್ಲಿ ಸಾವಿನಂಚಿನಲ್ಲಿದ್ದ ಪತ್ರಕರ್ತ ತನ್ನ ಹೆತ್ತ ತಾಯಿಗೆ ರವಾನಿಸಿದ ಸಂದೇಶವಿದು. 
ಛತ್ತೀಸ್ಗಢದ ದಂತೇವಾಡದಲ್ಲಿ ನಕ್ಸಲರು ನಡೆಸಿದ ಭಯಾನದ ದಾಳಿಯನ್ನು ಕಣ್ಣಾರೆ ನೋಡಿದ ದೂರದರ್ಶನದ ಪತ್ರಕರ್ತ ಸಾವು ಕಣ್ಣ ಮುಂದೆ ಇದ್ದರೂ ವಿಡಿಯೋ ಮಾಡಿ, ತಮ್ಮ ಅನುಭವ ಹಾಗೂ ತಾಯಿಯ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. 
ನಿನ್ನೆಯಷ್ಟೇ ದಂತೇವಾಡದಲ್ಲಿ ನಕ್ಸಲರು ದಾಳಿ ನಡೆಸಿದ್ದರು. ಡಿಡಿನ್ಯೂಸ್ ವರದಿಗಾರ ಧೀರಜ್ ಕುಮಾರ್, ಸಹಾಯಕ ಮೊರ್ಮುಕ್ತ ಹಾಗೂ ಕ್ಯಾಮೆರಾಮ್ಯಾನ್ ಸಾಹು ಅವರು ಚುನಾವಣಾ ವರದಿಗಾರಿಕೆಗಾಗಿ ಛತ್ತೀಸ್ಗಢಕ್ಕೆ ತೆರಳಿದ್ದರು. ರಾಜಧಾನಿ ರಾಯಪುರದಿಂದ ಸುಮಾರು 450 ಕಿ.ಮೀ ದೂರದಲ್ಲಿರುವ ನಿಲವಾಯ ಎಂಬ ಗ್ರಾಮದ ಬಳಿ ಈ ಸಿಬ್ಬಂದಿ ಎರಡು ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಈ ನಡುವೆ ಇವರ ಕಾರಿನ ಮುಂದೆ ಪೊಲೀಸರ ಗಸ್ತು ಬೈಕ್ ಗಳು ಹೋಗಿವೆ. ಆ ಸಂದರ್ಭದಲ್ಲಿ 100ಕ್ಕೂ ಹೆಚ್ಚು ಸಂಖ್ಯೆಯಲ್ಲಿದ್ದ ನಕ್ಸಲರು ಏಕಾಏಕಾ ದಾಳಿ ನಡೆಸಿದ್ದಾರೆ. 
ಈ ವೇಳೆ ಪೊಲೀಸರು ಪ್ರತಿ ದಾಳಿ ನಡೆಸಿದ್ದು, ಬರೋಬ್ಬರಿ 1 ಗಂಟೆಗೂ ಹೆಚ್ಚು ಗುಂಡಿನ ಚಕಮಕಿ ನಡೆದಿದೆ. ಈ ಚಕಮಕಿ ವೇಳೆ ದೂರದರ್ಶನದ ಪ್ರತಕರ್ತರು ಗಾಯಗೊಂಡಿದ್ದರು. ಛಾಯಾಗ್ರಾಹಕ ಸಾಹು ಘಟನೆಯಲ್ಲಿ ಮೃತಪಟ್ಟಿದ್ದರು. ಪೊಲೀಸರ ದಾಳಿ ಹೆಚ್ಚಾದ ಹಿನ್ನಲೆಯಲ್ಲಿ ನಕ್ಸಲರು ಸಮೀಪದ ಗ್ರಾಮಕ್ಕೆ ಓಡಿದ್ದರು. ಘಟನೆಯಲ್ಲಿ ಇಬ್ಬರು ಯೋಧರು ಹುತಾತ್ಮರಾಗಿದ್ದರು, ಅಲ್ಲದೆ, ಮತ್ತಿಬ್ಬರು ಪೊಲೀಸರು ಗಂಭೀರವಾಗಿ ಗಾಯಗೊಂಡಿದ್ದರು. 
ಗುಂಡು ಬಿದ್ದಿದ್ದರೂ ಸಾವು ಕಣ್ಣ ಮುಂದೆಯೇ ಇದ್ದರು, ಪತ್ರಕರ್ತ ಮೊರ್ಮುಕ್ತ ಅವರು ವಿಡಿಯೋ ಮಾಡಿದ್ದು, ತಾಯಿ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ಅದೃಷ್ಟವಶಾತ್ ಮೊರ್ಮುಕ್ತ ಅವರು ಬದುಕುಳಿದಿದ್ದಾರೆ. 
ನಕ್ಸಲರ ಬಳಿ ಗ್ರೆನೇಡ್, ಸ್ಫೋಟಕ ಸಾಮಾಗ್ರಿಗಳಿದ್ದವು. ನಾವು ನಮ್ಮ ವಾಹಿನಿಯ ಲೋಗೋ ತೋರಿಸುವ ಪ್ರಯತ್ನ ಮಾಡಿದ್ದೆವು. ಆದರೆ, ಕ್ಷಣ ಕ್ಷಣಕ್ಕೂ ಗುಂಡಿನ ದಾಳಿ ಹೆಚ್ಚಾಗುತ್ತಲೇ ಹೋಯಿತು. ಅಷ್ಟೇ ಅಲ್ಲ. ನನಗೆ ಗುಂಡೇಟು ಬಿದ್ದಿದೆ. ನಾನು ಈ ದಾಳಿಯಲ್ಲಿ ಸಾಯಲೂ ಬಹುದು. ನನಗೆ ನನ್ನ ತಾಯಿ ಎಂದರೆ, ಬಹಳ ಇಷ್ಟ. ಅಮ್ಮ ನಾನು ನಿನ್ನನ್ನು ತುಂಬಾ ಪ್ರೀತಿಸುತ್ತೇನೆ. ದಾಳಿಯಲ್ಲಿ ನಾನು ಬದುಕದೇ ಹೋಗಬಹುದು, ನೀನು ಧೈರ್ಯವಾಗಿರು. ಸಾವಿಗೆ ನಾನು ಹೆದರುವುದಿಲ್ಲ ಎಂದು ಮೊರ್ಮುಕ್ತಾ ಅವರು ಹೆತ್ತ ತಾಯಿಗೆ ಮನಕಲುಕುವ ಸಂದೇಶವನ್ನು ರವಾನಿಸಿದ್ದಾರೆ. 
ಮೊರ್ಮುಕ್ತ ಅವರು ಮಾಡಿರುವ ಈ ವಿಡಿಯೋವನ್ನು ದೂರದರ್ಶನ ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT