ರಾಹುಲ್ ಗ್ರಾಮೋಫೋನ್ ನಂತೆ , ಆತನ ಬಾಲಿಶ ಹೇಳಿಕೆಗಳನ್ನು ಜನರು ಸ್ವೀಕರಿಸುವುದಿಲ್ಲ- ಮೋದಿ
ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದನ್ನು ಪದೇ ಪದೇ ಹೇಳುವ ಗ್ರಾಮೋಪೋನ್ ಇದ್ದ ಹಾಗೆ, ಆತನ ಬಾಲಿಶ ಹೇಳಿಕೆಯನ್ನೂ ಯಾರೂ ಕೂಡಾ ಸ್ವೀಕರಿಸುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ವ್ಯಂಗ್ಯವಾಡಿದ್ದಾರೆ.
ನವದೆಹಲಿ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದನ್ನು ಪದೇ ಪದೇ ಹೇಳುವ ಗ್ರಾಮೋಪೋನ್ ಇದ್ದ ಹಾಗೆ, ಆತನ ಬಾಲಿಶ ಹೇಳಿಕೆಯನ್ನೂ ಯಾರೂ ಕೂಡಾ ಸ್ವೀಕರಿಸುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ವ್ಯಂಗ್ಯವಾಡಿದ್ದಾರೆ.
ಐದು ರಾಜ್ಯಗಳ ವಿಧಾನಸಭಾ ಚುನಾವಣೆ ಪ್ರಚಾರ ಸಾಗಿರುವಂತೆ ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರೊಂದಿಗೆ ವಿಡಿಯೋ ಸಂವಾದ ನಡೆಸಿದ ಪ್ರಧಾನಿ, ಅಭಿವೃದ್ಧಿ, ಕ್ಷಿಪ್ರ ಅಭಿವೃದ್ದಿ ಹಾಗೂ ಎಲ್ಲರಿಗಾಗಿ ಅಭಿವೃದ್ದಿ ಎಂಬ ಅಂಶದ ಆಧಾರದ ಮೇಲೆ ಜನತೆಯ ಬಳಿಗೆ ತೆರಳುವಂತೆ ಸೂಚಿಸಿದರು.
ಇತ್ತೀಚಿಗೆ ಶಶಿ ತರೂರು ನೀಡಿದ್ದ ಚೇಳು ಹೇಳಿಕೆಯನ್ನು ಕಾರ್ಯಕರ್ತರು ಪ್ರಸ್ತಾಪಿಸಿದಾಗ, ಅಂತಹ ಹೇಳಿಕೆಯಿಂದ ಅವರು ಏನು ಪಡೆದರು ಎಂದು ಹೇಳಿದ ಪ್ರಧಾನಿ, ರಾಹುಲ್ ಗಾಂಧಿ ಈ ಹಿಂದೆ ಬಳಸುತ್ತಿದ್ದ ಗ್ರಾಮೋಪೋನ್ ಇದ್ದ ಹಾಗೆ ಹೇಳಿದ್ದನ್ನು ಪದೇ ಪದೇ ಹೇಳುತ್ತಾರೆ. ಅವರ ಹೇಳಿಕೆಯನ್ನು ಯಾರೂ ಕೇಳುವುದಿಲ್ಲ, ನೀವೂ ಕೇಳಿ ಸಂತೋಷಪಡಿ ಆದರೆ, ಉದ್ವೇಗಗೊಳಗಾಗಬೇಡಿ ಎಂದರು.