ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಆರ್ ಎಸ್ ಎಸ್ ಪಾಲಿಗೆ ಶಿವಲಿಂಗದ ಮೇಲಿನ ಚೇಳಿನಂತಾಗಿದ್ದಾರೆ ಎಂದು ಆರ್ ಎಸ್ಎಸ್ ನಾಯಕರ ಹೇಳಿಕೆಯನ್ನು ಉಲ್ಲೇಖಿಸಿದ್ದ ಶಶಿತರೂರ್ ಈಗ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಗೆ ನೊಟೀಸ್ ಕಳಿಸಿದ್ದಾರೆ.
ಶಶಿತರೂರ್ ತಮ್ಮ ಭಾಷಣವೊಂದರಲ್ಲಿ ಮೋದಿ ಕುರಿತ ಆರ್ ಎಸ್ ಎಸ್ ನಾಯಕರ ಹೇಳಿಕೆಯನ್ನು ಉಲ್ಲೇಖಿಸಿದ್ದರು. ಶಶಿ ತರೂರ್ ಉಲ್ಲೇಖಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ರವಿಶಂಕರ್ ಪ್ರಸಾದ್, ಶಶಿ ತರೂರ್ ಮೋದಿ ಅವರನ್ನು ಶಿವಲಿಂಗದ ಮೇಲಿನ ಚೇಳಿಗೆ ಹೋಲಿಕೆ ಮಾಡಿ ಪ್ರಧಾನಿ ಅವಮಾನ ಮಾಡಿದ್ದಕ್ಕಾಗಿ ಶಿವಭಕ್ತ ರಾಹುಲ್ ಗಾಂಧಿ ಕ್ಷಮೆ ಯಾಚಿಸಬೇಕೆಂದು ಆಗ್ರಹಿಸಿದ್ದರು.
ತಮ್ಮ ವಿರುದ್ಧ ಸುಳ್ಳು ಆರೋಪ ಮಾಡಿದ್ದಕ್ಕಾಗಿ ಶಶಿ ತರೂರ್ ರವಿಶಂಕರ್ ಪ್ರಸಾದ್ ಅವರಿಗೆ ಲೀಗಲ್ ನೊಟೀಸ್ ಕಳಿಸಿದ್ದು 48 ಗಂಟೆಗಳಲ್ಲಿ ಕ್ಷಮೆ ಯಾಚಿಸಬೇಕು ಇಲ್ಲವೇ ಕಾನೂನು ಹೋರಾಟ ನಡೆಸುವುದಾಗಿ ಎಚ್ಚರಿಸಿದ್ದಾರೆ.