ಫಾರೂಖ್ ಅಬ್ದುಲ್ಲಾ 
ದೇಶ

ಕಾಶ್ಮೀರ ವಿಚಾರದಲ್ಲಿ ಕೇಂದ್ರ ಸಾಕಷ್ಟು ತಪ್ಪು ಮಾಡಿದೆ: ಫಾರೂಖ್ ಅಬ್ದುಲ್ಲಾ

ಕಾಶ್ಮೀರ ವಿಚಾರದಲ್ಲಿ ಕೇಂದ್ರ ಸರ್ಕಾರ ಸಾಕಷ್ಟು ತಪ್ಪು ಮಾಡಿದೆ. ಈಗಲಾದರೂ, ಕಾಶ್ಮೀರಿಗರ ಹೃದಯ ಗೆಲಲ್ಲು ನಿರ್ಧಾರಗಳನ್ನು ಕೈಗೊಳ್ಳಬೇಕಿದೆ ಎಂದು ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ ಹಾಗೂ ಸಂಸದ ಫಾರೂಖ್ ಅಬ್ದುಲ್ಲಾ ಅವರು ಶನಿವಾರ ಹೇಳಿದ್ದಾರೆ...

ಶ್ರೀನಗರ: ಕಾಶ್ಮೀರ ವಿಚಾರದಲ್ಲಿ ಕೇಂದ್ರ ಸರ್ಕಾರ ಸಾಕಷ್ಟು ತಪ್ಪು ಮಾಡಿದೆ. ಈಗಲಾದರೂ, ಕಾಶ್ಮೀರಿಗರ ಹೃದಯ ಗೆಲಲ್ಲು ನಿರ್ಧಾರಗಳನ್ನು ಕೈಗೊಳ್ಳಬೇಕಿದೆ ಎಂದು ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ ಹಾಗೂ ಸಂಸದ ಫಾರೂಖ್ ಅಬ್ದುಲ್ಲಾ ಅವರು ಶನಿವಾರ ಹೇಳಿದ್ದಾರೆ. 
ಶೆರ್-ಇ-ಕಾಶ್ಮೀರ್ ಇಂಟರ್ ನ್ಯಾಷನಲ್ ಕಾನ್ಫರೆನ್ಸ್ ಕೇಂದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಂವಿಧಾನದ 35(ಎ) ವಿಧಿಯನ್ನು ಹಿಂತೆಗೆದುಕೊಳ್ಳುವುದರ ಕುರಿತಂತೆ ಎಲ್ಲಿಯೇ ಚರ್ಚೆ ನಡೆದರೂ ಆ ಬಗ್ಗೆ ಕಾಶ್ಮೀರಿಗರಿಗೆ ನೋವಾಗುತ್ತದೆ ಎಂದು ಹೇಳಿದ್ದಾರೆ. 
ಕಾಶ್ಮೀರ ವಿಚಾರದಲ್ಲಿ ದೆಹಲಿ ಯಾವುದೇ ತಪ್ಪು ಮಾಡಿಲ್ಲ ಎಂದಲ್ಲ. ಕಾಶ್ಮೀರ ವಿಚಾರದಲ್ಲಿ ದೆಹಲಿ ಸಾಕಷ್ಟು ತಪ್ಪುಗಳನ್ನು ಮಾಡಿದೆ. ಸಂವಿಧಾನದ (35) ವಿಧಿಯನ್ನು ಹಿಂಪಡೆದುಕೊಳ್ಳುವ ಅಗತ್ಯವೇನಿದೆ? ಇಂತಹ ವಿಚಾರಗಳಿಂದ ಕಾಶ್ಮೀರಿಗರು ನೋವು ಪಡುತ್ತಿದ್ದಾರೆ. ಕಾಶ್ಮೀರಿಗರೊಂದಿಗೆ ಹೃದಯದಿಂದ ಸಂಬಂಧ ಹೊಂದಲು ಬಯಸಿದರೆ, ಹೃದಯ ಗೆಲ್ಲುವ ಕೆಲಸಗಳನ್ನು ಮಾಡಿ. ಇದನ್ನು ಬಿಟ್ಟರೆ, ಬೇರಾವುದೇ ಮಾರ್ಗಗಳಿಲ್ಲ ಎಂದು ತಿಳಿಸಿದ್ದಾರೆ. 
ಇದೇ ವೇಳೆ ಯಾರೊಬ್ಬರ ಹೆಸರನ್ನೂ ತೆಗೆದುಕೊಳ್ಳದೆ ಮಾತನಾಡಿದ ಅಬ್ದುಲ್ಲಾ ಅವರು, ಅಧಿಕಾರದಲ್ಲಿರುವ ಕೆಲವರು ಕಾಶ್ಮೀರ ಶಾಂತಿಯುತವಾಗಿರಲು ಬಯಸುತ್ತಿಲ್ಲ. ಒಂದಲ್ಲಾ ಒಂದು ದಿನ ಒಂದು ನಿರ್ಧಾರವನ್ನು ತೆಗೆದುಕೊಳ್ಳಲಾಗುತ್ತದೆ. ಅಲ್ಲಿಯವರೆಗೂ ನಾವು ನಮ್ಮ ಕಾಲಿನ ಮೇಲೆ ನಾವು ನಿಂತಿರುತ್ತೇವೆ. ನಿರ್ಧಾರ ತೆಗೆದುಕೊಳ್ಳುವುದು ಅಷ್ಟು ಸುಲಭವಲ್ಲ. ಕೆಲವರು ಅದನ್ನು ಬಿಡುವುದೂ ಇಲ್ಲ. ನಮ್ಮ ರಕ್ತದ ಶ್ರಮದ ಪರಿಣಾಮ ಅಧಿಕಾರದಲ್ಲಿರುವವರು ಕಾಶ್ಮೀರ ಶಾಂತಿಯುತವಾಗಿರುವುದನ್ನು ಬಯಸುತ್ತಿಲ್ಲ. ಶಾಂತಿ ನಮ್ಮಿಂದ ದೂರಾಗಬೇಕೆಂದು ಬಯಸುತ್ತಿದ್ದಾರೆ ಎಂದಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್ ಮಾಡಿ ಟ್ರ್ಯಾಪ್​ ಮಾಡಲು ಯತ್ನ': ಡಿ ಕೆ ಶಿವಕುಮಾರ್ ಸ್ಫೋಟಕ ಆರೋಪ; Video

'Evil Dead': ನಟ ನಾನಾ ಪಾಟೇಕರ್ ಸಾವು, #MeToo ಆರೋಪ ಮಾಡಿದ್ದ ನಟಿ ತನುಶ್ರೀ ದತ್ತಾ ಹೇಳಿದ್ದೇನು? ವಿಚಿತ್ರ ಪೋಸ್ಟ್!

'ವಿರಾಟ್ ಕೊಹ್ಲಿ ಬೇಗ ಔಟಾದರೆ ನನಗೆ ಊಟವೇ ಸೇರಲ್ಲ': ಸ್ಟಾರ್ ಬ್ಯಾಟರ್ ಬಗ್ಗೆ ನಾನಾ ಪಾಟೇಕರ್ ಹೇಳಿಕೆಯ ಹಳೆಯ ವಿಡಿಯೋ ವೈರಲ್

ಬೆಂಗಳೂರಿನಲ್ಲಿ CJP ಪ್ರತಿಭಟನೆ: ಪ್ರಕಾಶ್ ರಾಜ್, YouTuber ಧ್ರುವ್ ರಾಠಿ ಭಾಗಿ; CEC ರಾಜೀನಾಮೆಗೆ ಬಿಗಿಪಟ್ಟು..!

ಹಿರಿಯ ನಟ ನಾನಾ ಪಾಟೇಕರ್ ಇನ್ನಿಲ್ಲ