ದೇಶ

65 ಲೋಕಸಭಾ ಸದಸ್ಯರು, 29 ರಾಜ್ಯಸಭಾ ಸದಸ್ಯರು ಇನ್ನೂ ಆಸ್ತಿ ಘೋಷಣೆ ಮಾಡಿಲ್ಲ!

Srinivas Rao BV
65 ಲೋಕಸಭಾ ಸದಸ್ಯರು ಹಾಗೂ 29 ರಾಜ್ಯಸಭೆಯ ಸದಸ್ಯರು ಇನ್ನೂ ಆಸ್ತಿ ಘೋಷಣೆ ಮಾಡಿಲ್ಲ ಎಂಬ ಮಾಹಿತಿ ಬಹಿರಂಗವಾಗಿದೆ. 
2014 ರಿಂದ ಲೋಕಸಭೆಯ 65 ಹಾಗೂ ರಾಜ್ಯಸಭೆಯ 29 ಸಂಸದರು ಆಸ್ತಿ ಘೋಷಣೆ ಮಾಡಬೇಕಿರುವುದು ಬಾಕಿ ಇದ್ದು, ಈ ಪೈಕಿ ಲೋಕಸಭೆಗೆ ಉಪಚುನಾವಣೆ ಮೂಲಕ ಆಯ್ಕೆಯಾಗಿರುವ 4 ಸದಸ್ಯರು ಹೊಸಬರಾಗಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತರಾದ ರಚನ ಕರ್ಲಾ ಹೇಳಿದ್ದಾರೆ. 
ಆ.14 ರ ಮಾಹಿತಿಯ ಪ್ರಕಾರ ಈ ಅಂಕಿ ಅಂಶಗಳು ದಾಖಲಾಗಿದ್ದು, ಹೊಸದಾಗಿ ಆಯ್ಕೆಯಾಗಿ ಬಂದಿರುವ ಸಂಸದರಿಗೆ ಆಸ್ತಿ ವಿವರಣೆ ಘೋಷಿಸಿಕೊಳ್ಳುವುದಕ್ಕೆ 90 ದಿನಗಳ ಕಾಲಾವಕಾಶವಿದೆ. ಹೊಸದಾಗಿ ಆಯ್ಕೆಯಾಗಿರುವವರನ್ನು ಹೊರತುಪಡಿಸಿ, ಆಸ್ತಿ ವಿವರ ಸಲ್ಲಿಸದೇ ಇರುವವರ ಪೈಕಿ ಕಾಂಗ್ರೆಸ್ ನ 9 ಸಂಸದರು, ಟಿಡಿಪಿಯ 7 ಸಂಸದರು, ತೃಣಮೂಲ ಕಾಂಗ್ರೆಸ್, ಬಿಜು ಜನತಾದಳ, ಭಾರತೀಯ ಜನತಾ ಪಕ್ಷ, ಸಮಾಜವಾದಿ ಪಕ್ಷ, ತೆಲಂಗಾಣ ರಾಷ್ಟ್ರ ಸಮಿತಿ, ಲೋಕ ಜನಶಕ್ತಿಯಿಂದ ತಲಾ 4 ಜನ ಸಂಸದರು ಆಸ್ತಿ ವಿವರ ಸಲ್ಲಿಸಿಲ್ಲ. ಈ ಪಟ್ಟಿಯಲ್ಲಿ ಆಮ್ ಆದ್ಮಿ ಪಕ್ಷದ 3 ಸಂಸದರು, ಶಿವಸೇನೆ, ಆರ್ ಜೆಡಿ, ಶಿರೋಮಣಿ ಅಕಾಲಿದಳ, ಜೆಡಿಯು, ಜಾರ್ಖಂಡ್ ಮುಕ್ತಿ ಮೋರ್ಚ ಪಕ್ಷಗಳಿಂದ ತಲಾ 2 ಸಂಸದರೂ ಇದ್ದಾರೆ. 
ಇನ್ನು ಎಐಎಡಿಎಂಕೆ, ವೈಎಸ್ ಆರ್ ಕಾಂಗ್ರೆಸ್, ಐಎನ್ಎಲ್ ಡಿ, ಎನ್ ಪಿಪಿ, ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ ಎನ್ ಡಿಪಿಪಿ, ಪೀಪಲ್ಸ್ ಡೆಮಾಕ್ರೆಟಿಕ್ ಪಕ್ಷ, ಎಐಎಂಐಎಂ, ಆಲ್ ಇಂಡಿಯಾ ಎನ್ ಆರ್ ಕಾಂಗ್ರೆಸ್ ಹಾಗೂ ರಾಷ್ಟ್ರೀಯ ಲೋಕದಳದಿಂದ ತಲಾ ಒಬ್ಬರು ಸಂಸದರು ಆಸ್ತಿ ವಿವರವನ್ನು ಇನ್ನೂ ಸಲ್ಲಿಸಬೇಕಿದೆ. 
SCROLL FOR NEXT