ದೇಶ

ಮಧ್ಯಪ್ರದೇಶ: ಸಾಮಾಜಿಕ ಜಾಲತಾಣಗಳಲ್ಲಿ ಅತಿ ಹೆಚ್ಚು ಅನುಯಾಯಿಗಳಿದ್ದವರಿಗೆ ಮಾತ್ರ ಟಿಕೆಟ್!

Srinivas Rao BV
ಸಾಮಾಜಿಕ ಜಾಲತಾಣಗಳ ಮೂಲಕ ಚುನಾವಣೆ ಗೆಲ್ಲುವುದು 2014 ರಲ್ಲಿ ಬಿಜೆಪಿ ಪ್ರಯೋಗಿಸಿದ್ದ ಅಸ್ತ್ರ. ಈಗ ಅದೇ ಅಸ್ತ್ರವನ್ನು ಬಳಸಿಕೊಂಡು ಕಾಂಗ್ರೆಸ್ ಮಧ್ಯಪ್ರದೇಶದ ಚುನಾವಣೆಯನ್ನು ಗೆಲ್ಲಲು ಹೊರಟಿರುವಂತಿದೆ. 
ಮಧ್ಯಪ್ರದೇಶದ ಕಾಂಗ್ರೆಸ್ ಗೆ ಹೈಕಮಾಂಡ್ ಸ್ಪಷ್ಟ ಸಂದೇಶ ರವಾನೆ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದು ಹೆಚ್ಚು ಅನುಯಾಯಿಗಳಿರುವವರಿಗೆ ಮಾತ್ರ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ನೀಡಬೇಕೆಂದು ಸೂಚನೆ ನೀಡಲಾಗಿದೆ. 
ಫೇಸ್ ಬುಕ್ ನಲ್ಲಿ ಕನಿಷ್ಠ 15000 ಲೈಕ್ ಗಳು, ಟ್ವಿಟರ್ ವಾಟ್ಸ್ ಆಪ್ ಗ್ರೂಪ್ ಗಳಲ್ಲಿ ಕನಿಷ್ಠ 5000 ಅನುಯಾಯಿಗಳು ಇರಬೇಕು ಟಿಕೆಟ್ ಆಕಾಂಕ್ಷಿಗಳು ಮಧ್ಯಪ್ರದೇಶ ಕಾಂಗ್ರೆಸ್ ನ ಪೋಸ್ಟ್ ಗಳನ್ನು ತಮ್ಮ ನಡುವೆ ಹಂಚಿಕೊಳ್ಳಬೇಕೆಂಬ ನಿಯಮಗಳನ್ನೂ  ಹೈಕಮಾಂಡ್ ವಿಧಿಸಿದೆ. 
ಟಿಕೆಟ್ ನೀಡುವುದಕ್ಕೆ ಹೆಸರುಗಳನ್ನು ಪರಿಗಣಿಸಬೇಕೆಂದು ಅಪೇಕ್ಷಿಸುವವರು ತಮ್ಮ ಸಾಮಾಜಿಕ ಜಾಲತಾಣದ ವಿವರಗಳ ಸಹಿತ ಸೆ.15 ರೊಳಗೆ ಮಧ್ಯಪ್ರದೇಶ ಕಾಂಗ್ರೆಸ್ ಸಮಿತಿಗೆ ಪತ್ರ ನೀಡಬೇಕಿದೆ.
SCROLL FOR NEXT