ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ 
ದೇಶ

ಅಲಹಾಬಾದಿನಲ್ಲಿ 10 ರೂ. ಗೆ 'ಯೋಗಿ ಥಾಲಿ'

ಉತ್ತರ ಪ್ರದೇಶದ ಅಲಹಾಬಾದಿನಲ್ಲಿ 10 ರೂಪಾಯಿಗೆ ಕಡಿಮೆ ದರದಲ್ಲಿ ಊಟ , ಉಪಹಾರ ಒದಗಿಸುವ ಯೋಗಿ ಥಾಲಿ ಯೋಜನೆಗೆ ಮೇಯರ್ ಅಭಿಲಾಷ್ ಗುಪ್ತ ಚಾಲನೆ ನೀಡಿದ್ದಾರೆ.

ಅಲಹಾಬಾದ್: ಉತ್ತರ ಪ್ರದೇಶದ ಅಲಹಾಬಾದಿನಲ್ಲಿ 10 ರೂಪಾಯಿಗೆ ಕಡಿಮೆ ದರದಲ್ಲಿ ಊಟ, ಉಪಹಾರ ಒದಗಿಸುವ  ಯೋಗಿ ಥಾಲಿ ಯೋಜನೆಗೆ ಮೇಯರ್ ಅಭಿಲಾಷ್ ಗುಪ್ತ  ಚಾಲನೆ ನೀಡಿದ್ದಾರೆ.

ಇತರರ ಸಹಯೋಗದೊಂದಿಗೆ ಖಾಸಗಿ  ವ್ಯಕ್ತಿ ಈ ವ್ಯವಸ್ಥೆಯನ್ನು ಆರಂಭಿಸಿದ್ದಾರೆ. ಈ ಯೋಜನೆ ಜಾರಿಗೊಳಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅಭಿಲಾಷ್ ಗುಪ್ತಾ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೆಸರಲ್ಲಿ ಇದನ್ನು ಸ್ಥಾಪಿಸಲಾಗಿದ್ದು, ಬಡವರಿಗೆ 10 ರೂ. ನಲ್ಲಿ ಊಟ ಒದಗಿಸಲಾಗುತ್ತಿದೆ. ಇದರಿಂದ ಸಾಕಷ್ಟು ಜನರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.

ಥಾಲಿ ಯೋಜನೆ ಆರಂಭಿಸಿರುವ ಖಾಸಗಿ ವ್ಯಕ್ತಿ ದಿಲೀಪ್ ಮಾತನಾಡಿ, ಯಾರೊಬ್ಬರು ಹೊಟ್ಟೆ ಹಸಿವಿನಿಂದ ಬಳಲಬಾರದು ಎಂಬ ಉದ್ದೇಶದಿಂದ ಇದನ್ನು  ಸ್ಥಾಪಿಸಲಾಗಿದೆ. ಜನರಿಗಾಗಿ ಸೇವೆ ಮಾಡುತ್ತಿರುವ ಮುಖ್ಯಮಂತ್ರಿ ಅವರ ಹೆಸರನ್ನೆ ಇಡಲಾಗಿದೆ ಎಂದು ಹೇಳಿದರು.

ಅಲಹಾಬಾದಿನ ಅಟ್ಟರ್ಸುನಿಯಾ ಪ್ರದೇಶದಲ್ಲಿ ಯೋಗಿ ಥಾಲಿ ಯೋಜನೆ ಕಾರ್ಯಾರಂಭವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್

ನಂದಿಗ್ರಾಮದಲ್ಲಿ 1.22 ಲಕ್ಷ ಮತ, ಅಸ್ಸಾಂನಲ್ಲಿ BJPಗೆ ಗೆಲುವು; 2 ಕ್ಷೇತ್ರ ಗೆದ್ದ TVK: ಕಾಂಗ್ರೆಸ್, ದೀದಿಗೆ ಮುಖಭಂಗ!

ಉಪಚುನಾವಣೆಯಲ್ಲಿ ಗೆಲುವು, ಜನರೊಂದಿಗೆ NDA ಆಳವಾದ ನಂಟಿನ ಪ್ರತೀಕ: ಪ್ರಧಾನಿ ಮೋದಿ

ಮತಗಳ್ಳತನವೇ ಆಗಿದ್ದರೆ ಕೇರಳ Congress CM, ತಮಿಳುನಾಡು CM ಕೂಡ ಮತಗಳ್ಳರೇ: ಚೇತನ್ ಅಹಿಂಸಾ

'ಅಸಹ್ಯ, ಅತಿರೇಕ.. ನಿಮ್ಮನ್ನು ಈ ರೀತಿ ನೋಡಲು ಇಚ್ಛಿಸುವುದಿಲ್ಲ, BiggBoss ಶೋ ಬಿಟ್ಟು ಹೊರಬನ್ನಿ': Kichcha Sudeepಗೆ ಪತ್ರ