ದೇಶ

ವಿದೇಶ ಪ್ರವಾಸಗಳಲ್ಲಿ ಪ್ರಧಾನಿ ಜೊತೆಗೂಡಿದ್ದ ಖಾಸಗಿ ವ್ಯಕ್ತಿಗಳ ಹೆಸರನ್ನು ಬಹಿರಂಗಪಡಿಸಿ: ಎಂಇಎಗೆ ಸಿಐಸಿ

Nagaraja AB

ನವದೆಹಲಿ: ವಿದೇಶ ಪ್ರವಾಸಗಳಲ್ಲಿ ಪ್ರಧಾನಿ ನರೇಂದ್ರಮೋದಿ ಜೊತೆಗೂಡಿದ್ದ ಖಾಸಗಿ ವ್ಯಕ್ತಿಗಳ ಹೆಸರನ್ನು ಬಹಿರಂಗಪಡಿಸುವಂತೆ ಕೇಂದ್ರ ಮಾಹಿತಿ ಆಯೋಗ  ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ನಿರ್ದೇಶಿಸಿದೆ.

ಪ್ರಧಾನಿ ನರೇಂದ್ರಮೋದಿ 2015-16 ಮತ್ತು  2016-17 ಅವಧಿಯಲ್ಲಿ ವಿದೇಶಕ್ಕೆ ತೆರಳಿದ್ದಾಗ ಅವರ ಜೊತೆಗೂಡಿದ್ದ ಖಾಸಗಿ ವ್ಯಕ್ತಿಗಳ ಹೆಸರು ಜೊತೆಗೆ ವೆಚ್ಚದ ಬಗ್ಗೆ  ಮಾಹಿತಿ ನೀಡುವಂತೆ  ಕಳೆದ ಅಕ್ಬೋಬರ್ ನಲ್ಲಿ ಕರಾಬಿ ದಾಸ್  ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ಆದರೆ, ತೃಪ್ತಿಕರವಾದ ಮಾಹಿತಿ ದೊರೆತಿಲ್ಲವಾದ್ದರಿಂದ ಅವರು ಮಾಹಿತಿ ಆಯೋಗಕ್ಕೆ ಮನವಿ ಸಲ್ಲಿಸಿದ್ದರು. ಮಾಹಿತಿ ಪಡೆಯಲು  ಅರ್ಜಿದಾರರು  224 ರೂ. ಪಾವತಿಸುವಂತೆ ಸಚಿವಾಲಯ ಬೇಡಿಕೆ ಹಾಕಿದೆ ಎಂದು ವಿಚಾರಣೆ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತರು ಹೇಳಿದ್ದಾರೆ   ಎಂದು ಮುಖ್ಯ ಮಾಹಿತಿ ಆಯುಕ್ತ ಆರ್. ಕೆ. ಮಥೂರ್  ತಿಳಿಸಿದರು.

ಪ್ರಧಾನಿ ನರೇಂದ್ರಮೋದಿ ಅವರ ವಿದೇಶ  ಪ್ರವಾಸಕ್ಕೆ ಸಂಬಂಧಿಸಿದ ದಿನಾಂಕ, ವೇಳೆ ಮತ್ತು ವಿಮಾನಗಳ  ವೆಚ್ಚ ಹೊರತುಪಡಿಸಿದರೆ ಉಳಿದ ಯಾವುದೇ ಮಾಹಿತಿ ಇಲ್ಲ ಎಂದು ವಿಚಾರಣೆ ಸಂದರ್ಭದಲ್ಲಿ ಸಚಿವಾಲಯ ಹೇಳಿದೆ.

224 ರೂ ಪಾವತಿ ವಿಚಾರಕ್ಕೆ ಸಂಬಂಧಿಸಿದಂತೆ ಗಮನ ಹರಿಸಲಾಗುವುದು ಮತ್ತು   ಹೊಸ ಮಾಹಿತಿಯನ್ನು  ನೀಡುವುದಾಗಿ  ವಿದೇಶಾಂಗ ವ್ಯವಹಾರಗಳ ಸಚಿವಾಲಯ ಕೇಂದ್ರ ಮಾಹಿತಿ ಆಯೋಗಕ್ಕೆ ತಿಳಿಸಿದೆ.

SCROLL FOR NEXT