ಲೆಫ್ಟಿನೆಂಟ್ ಪ್ರಸಾದ್ ಶ್ರೀಕಾಂತ್ ಪುರೋಹಿತ್
ನವದೆಹಲಿ: 2008 ರ ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ಅಪಹರಣ, ಅಕ್ರಮ ಬಂಧನ ಮತ್ತು ಕ್ರೂರ ಚಿತ್ರಹಿಂಸೆ ನಿಡಿದ ವಿಶೇಷ ತನಿಖಾ ತಂಡ (ಎಸ್ ಐಟಿ)ವಿರುದ್ಧ ನ್ಯ್ಯಾಲಯ ಮೇಲ್ವಿಚಾರಣಾ ತನಿಖೆ ನಡೆಸಬೇಕೆಂದು ಕೋರಿ ಲೆಫ್ಟಿನೆಂಟ್ ಪ್ರಸಾದ್ ಶ್ರೀಕಾಂತ್ ಪುರೋಹಿತ್ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ತಳ್ಳಿ ಹಾಕಿದೆ.
ನ್ಯಾಯಾಧೀಶರಾದ ರಂಜನ್ ಗೊಗೊಯ್ ನವೀನ್ ಸಿನ್ಹಾ ಮತ್ತು ಕೆ.ಎಂ. ಜೋಸೆಫ್ ಅವರನ್ನೊಳಗೊಂಡ ಪೀಠ ಈ ಹಂತದಲ್ಲಿ ಅರ್ಜಿಯನ್ನು ವಿಚಾರಣೆಗೆ ತೆಗೆದುಕೊಂಡಲ್ಲಿ ಇದು ಪ್ರಕರಣದ ತನಿಖೆ ಮೇಲೆ ಪ್ರಭಾವ ಬೀರಬಹುದು ಎಂದು ಅಭಿಪ್ರಾಯಪಟ್ಟಿದೆ.
ಏತನ್ಮಧ್ಯೆ ಸ್ಪೋಟದ ಪ್ರಕರಣ ಸಂಬಂಧ ಪುರೋಹಿತ್ ಮತ್ತು ಇತರರ ವಿರುದ್ಧ ಕೆಳ ನ್ಯಾಯಾಲಯದಲ್ಲಿ ಸಲ್ಲಿಕೆಯಾಗಿರುವ ಆರೋಪ ಪಟ್ಟಿಗೆ ತಡೆ ನಿಡಲು ಬಾಂಬೆ ಹೈಕೋರ್ಟ್ ನಿರಾಕರಿಸಿದೆ. ಆದರೆ ಪುಓಹಿತ್ ಅವರಿಗೆ ವಿಚಾರಣೆ ನ್ಯಾಯಾಲಯಕ್ಕೆ ಮುಂಚಿತವಾಗಿ ತನ್ನ ವಿವಾದಗಳ ಕುರಿತು ವಿಚಾರ ಮಂಡಿಸಲು ಅವಕಾಶ ನೀಡಿದೆ.ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆ ಅಡಿಯಲ್ಲಿ ಲೆಫ್ಟಿನೆಂಟ್ ಕರ್ನಲ್ ಪುರೋಹಿಟ್ ವಿರುದ್ಧದ ಪ್ರಕರಣವನ್ನು ವಿಚಾರಣಾ ನ್ಯಾಯಾಲಯವು ನಿರ್ಧರಿಸಬೇಕು ಎಂದು ನ್ಯಾಯಾಲಯ ಹೇಳಿದೆ.
ಪ್ರಕರಣ ಸಂಬಂಧ ವಿಚಾರಣೆ ಎದುರಿಸುತ್ತಿರುವ ಪುರೋಹಿತ್ ಗೆ ಕಳೆದ ವರ್ಷ ಸುಪ್ರೀಂ ಕೋರ್ಟ್ ಜಾಮೀನು ನೀಡಿ ಬಿಡುಗಡೆ ಮಾಡಿತ್ತು.
ಸೆಪ್ಟೆಂಬರ್ 29, 2008 ರಂದು ನಡೆದ ಮಾಲೆಗಾಂವ್ ಸ್ಫೋಟದಲಿ ಆರು ಮಂದಿ ಸತ್ತು ಹಲವ್ರು ಗಾಯಗೊಂಡಿದ್ದರು.