ನವದೆಹಲಿ: ಭಾರತ ಮತ್ತು ಫ್ರಾನ್ಸ್ ನಡುವಿನ ರಫೆಲ್ ಫೈಟರ್ ಜೆಟ್ ವ್ಯವಹಾರಕ್ಕೆ ತಡೆ ಕೋರಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್ ಸಮ್ಮತಿಸಿದೆ. ಅರ್ಜಿ ವಿಚಾರಣೆ ಮುಂದಿನ ವಾರ ನಡೆಸುವುದಾಗಿ ಕೋರ್ಟ್ ಹೇಳಿದೆ.
ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾಯಮೂರ್ತಿ ಎ ಎಂ ಖಾನ್ವಿಲ್ಕರ್ ಮತ್ತು ಡಿ.ಯು. ಚಂದ್ರಚೂಡ್ರ ಅವರನ್ನೊಳಗೊಂಡ ಪೀಠವು ಮೊಕದ್ದಮೆಯ ತುರ್ತು ವಿಚಾರಣೆಗೆ ಸಮ್ಮತಿಸಿದೆ.
ವಕೀಲ ಎಂ.ಎಲ್.ಶರ್ಮಾ ಈ ಅರ್ಜಿ ಸಲ್ಲಿಸಿದ್ದು ರಫ್ಲೆ ಯುದ್ಧ ವಿಮಾನ ಖರೀದಿ ವ್ಯವಹಾರ ಪಾರದರ್ಶಕವಾಗಿಲ್ಲ. 36 ರಫೆಲ್ ಫೈಟರ್ ಜೆಟ್ ಖರೀದಿಯ ಹಿಂದೆ "ಭ್ರಷ್ಟಾಚಾ" ಇದೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ, ಮಾಜಿ ರಕ್ಷಣಾ ಸಚಿವ ಮತ್ತು ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್, ಉದ್ಯಮಿ ಅನಿಲ್ ಅಂಬಾನಿ ಮತ್ತು ಫ್ರೆಂಚ್ ಶಸ್ತ್ರಾಸ್ತ್ರಗಳ ಸಂಸ್ಥೆ ಡಸ್ಸಾಲ್ಟ್ ಅವರ ಮೇಲೆ ಎಫ್ಐಆರ್ ಮತ್ತು ಕಾನೂನು ಕ್ರಮ ಜರುಗಿಸಬ್ಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.
ಇದೇ ಮಾರ್ಚ್ ನಲ್ಲಿ ಸಹ ರಫೆಲ್ ಒಪ್ಪಂದ ಸಂಬಂಧ ಸುಪ್ರೀಂ ಕೋರ್ಟ್ ಗೆ ಅರ್ಜಿ ಹಾಕಲಾಗಿತ್ತು. ಆ ಅರ್ಜಿಯಲ್ಲಿ ರಫೆಲ್ ಒಪ್ಪಂದದ ಕುರಿತು ಸ್ವತಂತ್ರ ತನಿಖೆ ನಡೆಸಬೇಕು ಮತ್ತು ಸಂಸತ್ತಿನ ಮುಂದೆ ಒಪ್ಪಂದದ ವೆಚ್ಚವನ್ನು ಬಹಿರಂಗಪಡಿಸಬೇಕು ಎಂದು ಕೇಳಲಾಗಿತ್ತು.
ಯುಪಿಎ ಸರಕಾರದ ಅವಧಿಯಲ್ಲಿ 126 ರಫೇಲ್ ವಿಮಾನ ಖರೀದಿಯ ಒಪ್ಪಂದವಾಗಿದ್ದರೂ 2015ರಲ್ಲಿ ಕೇಂದ್ರ ರಕ್ಷಣಾ ಸಚಿವರಾಗಿದ್ದ ಮನೋಹರ ಪರಿಕ್ಕರ್ ವೆಚ್ಚ ಹೆಚ್ಚಳವಾಗಲಿದೆ ಎನ್ನುವ ಕಾರಣ ಒಡ್ಡಿ 36 ಯುದ್ಧ ವಿಮಾನ ಖರೀದಿಗಷ್ಟೇ ಒಪ್ಪಿಗೆ ಸೂಚಿಸಿದ್ದರು.