ದೇಶ

ಬಿಹಾರ ಮುಖ್ಯಮಂತ್ರಿಯ ಆರೋಗ್ಯ ಕುರಿತಂತೆ ವೈದ್ಯಕೀಯ ಬುಲೆಟಿನ್ ಕೇಳಿದ ತೇಜಸ್ವಿ ಯಾದವ್

Raghavendra Adiga
ಪಾಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ದೇಹಾರೋಗ್ಯ ಪರಿಸ್ಥಿತಿ ಕುರಿತು ವೈದ್ಯಕೀಯ ಬುಲೆಟಿನ್ ಬಿಡುಗಡೆಗೊಳಿಸಬೇಕೆಂದು ರಾಷ್ಟ್ರೀಯ ಜನತಾ ದಳ (ಆರ್ಜೆಡಿ) ನಾಯಕ ಮತ್ತು ಮಾಜಿ ಉಪಮುಖ್ಯಮಂತ್ರಿ ತೇಜಶ್ವಿ ಯಾದವ್ ಒತ್ತಾಯಿಸಿದ್ದಾರೆ.
ಟ್ವಿಟ್ಟರ್ ನಲ್ಲಿ ಮುಖ್ಯಮಂತ್ರಿಗಳ ಆರೋಗ್ಯ ಕುರಿತಾಗಿ ಬುಲೆಟಿನ್ ಹೊರಡಿಸಲು ಕೇಳಿದ ಯಾದವ್ ಜನತಾ ದಳ ಯುನೈಟೆಡ್ (ಜೆಡಿಯು) ನಾಯಕ ನಿತೀಶ್ ಕುಮಾರ್ ಕಳೆದ ಏಳು ದಿನಗಳಿಂದ ಆರೋಗ್ಯದ ತೊಂದರೆ ಅನುಭವಿಸುತ್ತಿದ್ದಾರೆ. ಅವರು ಮತ್ತೆ ಆರೋಗ್ಯವಾಗಬೇಕು ಎಂದು ಹೇಳಿದ್ದಲ್ಲದೆ ರಾಜ್ಯದ ಜನರಿಗೆ ಅವರ ಆರೋಗ್ಯ ಸ್ಥಿತಿಯ ಬಗ್ಗೆ ತಿಳಿಸಬೇಕು ಎಂದು ಕೇಳಿದ್ದಾರೆ.
"ಕಳೆದ 7 ದಿನಗಳಿಂದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಆರೋಗ್ಯ ಚೆನ್ನಾಗಿಲ್ಲ. ಎಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ. ರಾಜ್ಯದ ಜನತೆಗೆ ಮುಖ್ಯಮಂತ್ರಿಗಳ ಅನಾರೋಗ್ಯ ಹಾಗೂ ಆರೋಗ್ಯ ಸ್ಥಿತಿ ಸಂಬಂಧ ವೈದ್ಯಕೀಯ ಬುಲೆಟಿನ್ ಬಿಡುಗಡೆ  ಮಾಡುವಂತೆ ಒತ್ತಾಯಿಸುತ್ತೇವೆ" ಟ್ವಿಟ್ಟರ್ ನಲ್ಲಿ ತೇಜಸ್ವಿ ಯಾದವ್ ಬರೆದುಕೊಂಡಿದ್ದಾರೆ.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಆರೋಪಿಸಿದ ಯ್ದವ್ ಮುಖ್ಯಮಂತ್ರಿ ನಿತೀಶ್ ಹಾಗೂ ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಅವರ ರಾಜೀನಾಮೆಗೆ ಒತ್ತಾಯಿಸಿದ 15 ದಿನಗಳ ಬಳಿಕ ಈ ಟ್ವೀಟ್ ಮಡಲಾಗಿದೆ.
ಮುಜಫರ್ ಪುರ್ ಆಶ್ರಯ ಮನೆ ಲೈಂಗಿಕ ಕಿರುಕುಳ ಳ ಪ್ರಕರಣವನ್ನು ಉಲ್ಲೇಖಿಸಿ ಯಾದವ್ ನಿತೀಶ್ ರಾಜೀನಾಮೆ ಕೇಳಿದ್ದರು
SCROLL FOR NEXT