ದೇಶ

ಕಾಶ್ಮೀರ: ಉಗ್ರರ ವಿರುದ್ಧ ಕಾರ್ಯಾಚರಣೆ. ಪ್ರತ್ಯೇಕತಾವಾದಿ ಸೇರಿ ಮೂವರು ಸಾವು

Manjula VN
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಎರಡು ಪ್ರತ್ಯೇಕ ಘಟನೆಗಳಲ್ಲಿ ಓರ್ವ ಪ್ರತ್ಯೇಕತಾವಾದಿ ಸೇರಿ ಮೂವರು ಸಾವನ್ನಪ್ಪಿರುವ ಘಟನೆ ಶನಿವಾರ ನಡೆದಿದೆ. 
ಉತ್ತರ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಸೊಪೋರ್ ಎಂಬ ಪ್ರದೇಶದಲ್ಲಿ ಭದ್ರತಾ ಪಡೆಗಳು ನಡೆಸುತ್ತಿದ್ದ ಕಾರ್ಯಾಚರಣೆ ವೇಳೆ ಗುಂಡು ತಗುಲಿ ತೆಹ್ರೀಕ್-ಇ-ಹುರಿಯತ್ ಸಂಘಟನೆಯ ಪ್ರತ್ಯೇಕತಾವಾಗಿ ಹಕಿಮ್-ಉಲ್-ರೆಹ್ಮಾನ್ ಸುಲ್ತಾನಿ ಎಂಬುವವರು ಸಾವನ್ನಪ್ಪಿದ್ದಾರೆ. 
ಅನಂತ್ ನಾಗ್ ಜಿಲ್ಲೆಯಲ್ಲಿ ಸೇನಾ ಪಡೆ ನಡೆಸಿದ್ದ ಎನ್'ಕೌಂಟರ್ ನಲ್ಲಿ ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆ ಉಗ್ರ ಅನ್ಸಾರಿ ಗಜ್ವಾತ್-ಉಲ್ ಹಿಂದ್ ಸಾವನ್ನಪ್ಪಿದ್ದಾನೆ. 
ಈ ನಡುವೆ ಶಂಕಿತ ಉಗ್ರರು ಶ್ರೀನಗರದ ಹಜ್ರತ್ಬಾಲ್ ಎಂಬ ಪ್ರದೇಶದಲ್ಲಿ ಯುವಕನೊಬ್ಬನ ಮೇಲೆ ಗುಂಡಿನ ದಾಳಿ ನಡೆಸಿದ್ದು, ಯುವಕ ಆಸೀಫ್ ನಾಜೀರ್ ದಾರ್ ಎಂಬಾತ ಸಾವನ್ನಪ್ಪಿದ್ದಾನೆ. ಮೃತಪಟ್ಟ ಯುವಕ ಆಸೀಫ್, ಜಾಕೀರ್ ಮೂಸಾ ರಚನೆ ಮಾಡಿರುವ ಅಲ್ ಖೈದಾ ಕಾಶ್ಮೀರ ಉಗ್ರ ಸಂಘಟನೆಗೆ ಸೇರಿದ ಅನ್ಸಾರಿ ಸಂಬಂಧಿಕನೆಂದು ಹೇಳಲಾಗುತ್ತಿದೆ. 
ಇದರಂತೆ ನಿನ್ನೆ ಸಂಜೆ ಪುಲ್ವಾಮ ಜಿಲ್ಲೆಯ ಜಮಿಯಾ ಮಸೀದಿ ಬಳಿಯಿದ್ದ ವಾಹನವೊಂದರ ಮೇಲೆ ಶಂಕಿತ ಉಗ್ರರು ಗುಂಡಿನ ದಾಳಿ ನಡೆಸಿದ್ದು, ಸಿಮ್ರನ್ ಜಾನ್ ಎಂಬ ಮಹಿಳೆ ಗಾಯಗೊಂಡಿದ್ದಾರೆ. 
ಇದರಂತೆ ಉತ್ತರ ಕಾಶ್ಮೀರದ ರಾಣಿಪೋರಾ ಪ್ರದೇಶದಲ್ಲಿ ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸಿ ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆಯ ಓರ್ವ ಉಗ್ರರನ್ನು ಹತ್ಯೆ ಮಾಡಿದೆ ಎಂದು ತಿಳಿದುಬಂದಿದೆ. 
SCROLL FOR NEXT