ದೇಶ

ಪಿಎನ್ಬಿ ವಂಚನೆ: ನೀರವ್ ಮೋದಿ ಸೋದರಿ ವಿರುದ್ಧ ರೆಡ್ ಕಾರ್ನರ್ ನೋಟೀಸ್ ಜಾರಿ

Raghavendra Adiga
ಮುಂಬೈ: 13 ಸಾವಿರ ಕೋಟಿ ವಂಚನೆ ಪ್ರಕರಣದಲ್ಲಿ ಪ್ರಮುಖ ಆರೋಪಿ ನೀರವ್ ಮೋದಿ ಸೋದರಿ ಪೂರ್ವಿ ಮೋದಿ ವಿರುದ್ಧ ಇಂಟರ್ಪೋಲ್ ರೆಡ್ ಕಾರ್ನರ್ ನೋಟೀಸ್ ಜಾರಿಗೊಳಿಸಿದೆ.
ಅಂತರರಾಷ್ಟ್ರೀಯ ಬಂಧನ ವಾರಂಟ್ ಆಗಿ ಕಾರ್ಯನಿರ್ವಹಿಸುವ ರೆಡ್ ಕಾರ್ನರ್ ನೋಟೀಸ್ ಅನ್ನು ಪೂರ್ವಿ ಮೋದಿ ವಿರುದ್ಧ ಹೊರಡಿಸಲಾಗಿದ್ದು ಅಕಮ ಹಣ ವರ್ಗಾವಣೆ ಆರೋಪದಲ್ಲಿ ಭಾಗಿಯಾಗಿರುವ ಈಕೆಯ ವಿರುದ್ಧ ಇದರ ಅಗತ್ಯ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಜಾರಿ ನಿರ್ದೇಶನಾಲಯವು ಪೂರ್ವಿ ಮೋದಿ ವಿರುದ್ಧ ರೆಡ್ ಕಾರ್ನರ್ ನೋಟೀಸ್ ಹೊರಡಿಸಲು ಮನವಿ ಮಾಡಿತ್ತು. ಆಕೆಯನ್ನು ತಮ್ಮ ಮುಂದಿನ ತನಿಖೆಗೆ ಒಳಪಡಿಸುವ ಸಲುವಾಗಿ ಈಕ್ರಮ ಗತ್ಯವಿದೆ ಎಂದು ಜಾರಿ ನಿರ್ದೇಶನಾಲಯ ಅಧಿಕಾರಿಗಳು ಹೇಳಿದ್ದರು.
ಇಂಟರ್ಪೋಲ್ ನೋಟಿಸ್ ಪ್ರಕಾರ,ಬೆಲ್ಜಿಯಂ ರಾಷ್ಟ್ರೀಯತೆ ಹ್ಪ್ಂದಿರುವ ಪೂರ್ವಿ  ಇಂಗ್ಲಿಷ್, ಗುಜರಾತಿ ಮತ್ತು ಹಿಂದಿ ಮಾತನಾಡುತ್ತಾರೆ 
ಒಮ್ಮೆ ಓರ್ವ ವ್ಯಕ್ತಿಯ ವಿರುದ್ದ ರೆಡ್ ಕಾರ್ನರ್ ನೋಟೀಸ್ ಜಾರಿಯಾದರೆ ಇಂಟರ್ಪೋಲ್ ಅದರ 192 ಸದಸ್ಯ ರಾಷ್ಟ್ರಗಳಿಗೆ ಆ ವ್ಯಕ್ತಿಯನ್ನು ಪತ್ತೆ ಮಾಡಿ ಬಂಧಿಸಿ ಅಥವಾ ವಶಕ್ಕೆ ತೆಗೆದುಕೊಳ್ಳಲು ಕೇಳುತ್ತದೆ.
ಹಣದ ವರ್ಗಾವಣೆ ಆರೋಪದಲ್ಲಿ ನೀರವ್ ಮೋದಿಯ ಯುಎಸ್ ವ್ಯವಹಾರ ಕಾರ್ಯನಿರ್ವಾಹಕನಾಗಿದ್ದ ಮಿಹಿರ್ ಆರ್ ಬನ್ಸಾಲಿ ವಿರುದ್ಧ ಸಹ ಇಂಟರ್ಪೋಲ್ ಇದಕ್ಕೆ ಮುನ್ನ ರೆಡ್ ಕಾರ್ನರ್ನೊತೀಸ್ ಜಾರಿಗೊಳಿಸಿತ್ತು.
ಪಿಎನ್ಬಿ ಪ್ರಕರಣದಲ್ಲಿ ಇಡಿ ಮತ್ತು ಸಿಬಿಐ ಜಂಟಿ ತನಿಖೆ ನಡೆಸುತ್ತಿದ್ದು ನೀರವ್ ಮೋದಿ ವಿರುದ್ಧ ಸಹ ಇಂತಹುದೇ ನೋಟೀಸ್ ಜಾರಿಯಲ್ಲಿದೆ. ನೀರವ್ ಮೋದಿ ಹಾಗೂ ಆತ್ನ ಚಿಕ್ಕಪ್ಪ ವಜ್ರದ ವ್ಯಾಪಾರಿ ಮೆಹುಲ್ ಚೋಕ್ಸಿ ಇಬ್ಬರೂ 2 ಬಿಲಿಯನ್ ಡಾಲರ್ (ರೂ. 13,000 ಕೋಟಿ) ಮೌಲ್ಯದ ನಕಲಿ ಸಾಲಪತ್ರಗಳನ್ನು ಪಡೆದು ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ವಂಚಿಸಿದ್ದಾರೆ.
SCROLL FOR NEXT