ಸಾಂದರ್ಭಿಕ ಚಿತ್ರ 
ದೇಶ

ಎಚ್ ಐ ವಿ, ಏಡ್ಸ್ ಕಾಯ್ದೆ- 2017 ಅನುಷ್ಠಾನ ಜಾರಿ

2017ರ ಎಚ್ ಐವಿ, ಏಡ್ಸ್ ಕಾಯ್ದೆ ಅನುಷ್ಠಾನಗೊಂಡಿದೆ. ನಿನ್ನೆಯಿಂದ ಈ ಕಾಯ್ದೆಯು ಅನುಷ್ಠಾನವಾಗಿರುವುದಾಗಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.

ನವದೆಹಲಿ: 2017ರ ಎಚ್ ಐವಿ, ಏಡ್ಸ್ ಕಾಯ್ದೆ ಅನುಷ್ಠಾನಗೊಂಡಿದೆ. ನಿನ್ನೆಯಿಂದ  ಈ ಕಾಯ್ದೆಯು ಅನುಷ್ಠಾನವಾಗಿರುವುದಾಗಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ  ಸಚಿವಾಲಯ ತಿಳಿಸಿದೆ.

ಈ ಕಾಯ್ದೆಯ ಪ್ರಕಾರ 12 ರಿಂದ 18 ವರ್ಷದೊಳಗಿನ ಒಬ್ಬ ವ್ಯಕ್ತಿ  ತನ್ನ ಎಚ್ಐವಿ ಅಥವಾ ಏಡ್ಸ್-ಪೀಡಿತ ಕುಟುಂಬವನ್ನು ಅರ್ಥಮಾಡಿಕೊಂಡು ರಕ್ಷಕನಾಗಿ ವರ್ತಿಸಬೇಕು, 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಇತರರನ್ನು ಪೋಷಕರಂತೆ ಪಾಲನೆ ಮಾಡಬೇಕೆಂದು ಹೇಳುತ್ತದೆ.

ಶಿಕ್ಷಣ ಸಂಸ್ಥೆ ದಾಖಲು, ಬ್ಯಾಂಕ್ ಖಾತೆ ನಿರ್ವಹಣೆ, ಆಸ್ತಿ ನಿರ್ವಹಣೆ, ಕಾಳಜಿ, ಚಿಕಿತ್ಸೆ ಮತ್ತಿತರ ಎಲ್ಲಾ ವಿಷಯಗಳಿಗೆ ಈ ಅವಕಾಶ ಅನ್ವಯವಾಗುತ್ತದೆ. ಎಚ್ ಐವಿ, ಏಡ್ಸ್ ಪೀಡಿತ ವ್ಯಕ್ತಿಗಳ ವಿರುದ್ಧ ಶೋಷಣೆಗೆ ಎರಡು ವರ್ಷ ಜೈಲು ಶಿಕ್ಷೆ ಹಾಗೂ 1 ಲಕ್ಷ ರೂ. ದಂಡ ವಿಧಿಸಲಾಗುತ್ತದೆ.

ಎಚ್ ಐವಿ, ಏಡ್ಸ್ ಪೀಡಿತ ವ್ಯಕ್ತಿಗಳಿಗೆ ಚಿಕಿತ್ಸೆ ನೀಡದಿರುವುದು, ಉದ್ಯೋಗ ಮತ್ತು ಕೆಲಸ ಮಾಡುವ ಸ್ಥಳದಲ್ಲಿ ತಾರತಾಮ್ಯ ತಡೆಗಟ್ಟಲು ಏಪ್ರಿಲ್ 20. 2017 ರಂದು ಈ ಕಾಯ್ದೆ ಜಾರಿಯಾಗಿತ್ತು.

ನ್ಯಾಯಾಲಯದ ಆದೇಶದ ಹೊರತಾಗಿ ಉದ್ಯೋಗ ಅಥವಾ ಸೇವೆ ಪಡೆಯುವ ಸಂದರ್ಭದಲ್ಲಿ ಯಾವುದೇ ವ್ಯಕ್ತಿ  ಎಚ್ ಐವಿ  ಬಗ್ಗೆಯೂ ವಿವರ ಹಂಚಿಕೊಳ್ಳಬಾರದೆಂದು ಕಾಯ್ದೆ ಹೇಳುತ್ತದೆ.

ಎಚ್ ಐವಿ ಮತ್ತು ಏಡ್ಸ್ ಸಂಬಂದಿತ  ಪ್ರಯೋಗಾಲಯ ಸವಲತ್ತು ಪಡೆಯಲು ಅಗತ್ಯ ಮಾರ್ಗದರ್ಶಿಸೂತ್ರಗಳನ್ನು ಕೇಂದ್ರ ಸರ್ಕಾರ ಹೊರಡಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜನಪ್ರಿಯ ಪ್ಯಾಲೆಸ್ತೀನ್ ನಾಯಕ ಮರ್ವಾನ್ ಬರ್ಘೌಟಿ ಬಿಡುಗಡೆಗೆ ಇಸ್ರೇಲ್ ನಕಾರ: 250 ಕೈದಿಗಳ ಪಟ್ಟಿ ಸಿದ್ಧ

'ನಮ್ಮ ಪಾತ್ರವಿಲ್ಲ': ಆಫ್ಘನ್ ಸಚಿವರ ಸುದ್ದಿಗೋಷ್ಠಿ ವೇಳೆ ಮಹಿಳಾ ಪತ್ರಕರ್ತೆಯರಿಗೆ ನಿರ್ಬಂಧ ಕುರಿತು 'ಕೇಂದ್ರ' ಸ್ಪಷ್ಟನೆ

'ನಂಗೇ ಕೊಡಿ ಎಂದು ನಾನೇನು ಕೇಳಿಲ್ಲ..': ನೊಬೆಲ್ ಶಾಂತಿ ಪ್ರಶಸ್ತಿ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತು!

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

2nd test, Day 2: 518 ರನ್ ಗಳಿಗೆ ಭಾರತ ಇನ್ನಿಂಗ್ಸ್ ಡಿಕ್ಲೇರ್!

SCROLL FOR NEXT