ದೇಶ

ನನ್ನ ಚಿಕಾಗೋ ಕಾರ್ಯಕ್ರಮ ರದ್ದುಗೊಳಿಸಲು ರಾಮಕೃಷ್ಣ ಮಿಷನ್ ಗೆ ಒತ್ತಡ ಹೇರಲಾಗಿತ್ತು: ಮಮತಾ ಬ್ಯಾನರ್ಜಿ

Srinivas Rao BV
ಕೋಲ್ಕತ್ತಾ: ಸ್ವಾಮಿ ವಿವೇಕಾನಂದರ ಐತಿಹಾಸಿಕ ಭಾಷಣದ 125 ನೇ ವಾರ್ಷಿಕೋತ್ಸವದ ಅಂಗವಾಗಿ ಚಿಕಾಗೋದಲ್ಲಿ ನಡೆಯಬೇಕಿದ್ದ ಕಾರ್ಯಕ್ರಮದಲ್ಲಿ ನಾನು ಪಾಲ್ಗೊಳ್ಳದಂತೆ ಕೆಲವು ದುಷ್ಟ ಶಕ್ತಿಗಳು ತಡೆದಿವೆ ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದಾರೆ. 
ಚಿಕಾಗೋದಲ್ಲಿ ನಡೆಯಲಿದ್ದ ಕಾರ್ಯಕ್ರಮದ್ಲಲಿ ನಾನು ಭಾಗವಹಿಸುವುದನ್ನು ಕೆಲವು ದುಷ್ಟಶಕ್ತಿಗಳು ಸಹಿಸಲಿಲ್ಲ, ಬಹುಶಃ ಆದ್ದರಿಂದ ಚಿಕಾಗೋದಲ್ಲಿ ನಡೆಯಬೇಕಿದ್ದ ಕಾರ್ಯಕ್ರಮವನ್ನು ರದ್ದುಗೊಳಿಸುವಂತೆ ರಾಮಕೃಷ್ಣಾಶ್ರಮಕ್ಕೆ ಬೆದರಿಕೆ ಹಾಕಲಾಗಿದೆ ಆದ್ದರಿಂದ ಕಾರ್ಯಕ್ರಮ ರದ್ದುಗೊಂಡಿದೆ ಎಂದು ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ. 
ಈ ಬೆಳವಣಿಗೆಯಿಂದಾಗಿ ನನಗೆ ತುಂಬಾ ನೋವುಂಟಾಗಿದೆ ಎಂದು ರಾಮಕೃಷ್ಣಾಶ್ರಮದ ಮುಖ್ಯ ಕಚೇರಿ ಬೇಲೂರು ಮಠದಲ್ಲಿ ಹೇಳಿದ್ದಾರೆ. ಚಿಕಾಗೋದಲ್ಲಿ ನಡೆದ ಕಾರ್ಯಕ್ರಮ ರದ್ದುಗೊಂಡಿರುವುದಕ್ಕೆ ನಾನು ರಾಮಕೃಷ್ಣಾಶ್ರಮವನ್ನು ದೂಷಿಸುವುದಿಲ್ಲ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ. 
SCROLL FOR NEXT