ದೇಶ

ದುರ್ಗಾ ಪೂಜೆಗೆ ಮಮತಾ ಬ್ಯಾನರ್ಜಿ ಗಿಫ್ಟ್: ಪ್ರತಿ ಪೂಜಾ ಸಮಿತಿಗೆ 10 ಸಾವಿರ ರೂ.!

Nagaraja AB
ಕೊಲ್ಕತ್ತಾ :  2019 ರ ಲೋಕಸಭಾ ಚುನಾವಣೆ ಮೇಲೆ ಕಣ್ಣಿಟ್ಟಿರುವ ಪಶ್ಟಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮೃಧು ಹಿಂದುತ್ವ ಧೋರಣೆ  ತಾಳಿದ್ದು, ದುರ್ಗಾಪೂಜೆಗೆ  ಪ್ರತಿ ಪೂಜಾ ಸಮಿತಿಗೆ  ಭರ್ಜರಿ  10 ಸಾವಿರ ರೂ.  ಗಿಪ್ಟ್ ನೀಡುತ್ತಿದ್ದಾರೆ.
ಕೊಲ್ಕತ್ತಾದಲ್ಲಿ 3 ಸಾವಿರ ಸೇರಿದಂತೆ  ಸೇರಿದಂತೆ   ರಾಜ್ಯಾದ್ಯಂತ 28 ಸಾವಿರ  ದುರ್ಗಾ ಪೂಜಾ ಸಮಿತಿಗಳಿಗೆ  ಮಮತಾ ಬ್ಯಾನರ್ಜಿ ಕೊಡುಗೆ ನೀಡುತ್ತಿದ್ದಾರೆ.
ದುರ್ಗಾ ಪೂಜೆ ಸಂದರ್ಭದಲ್ಲಿ  ಶಾಂತಿ ಕಾಪಾಡಲು ಎಲ್ಲಾ ಧರ್ಮಗಳ ಪ್ರತಿನಿಧಿಗಳನ್ನೊಳಗೊಂಡ ಸಮನ್ವಯ ಸಮಿತಿಯನ್ನು ದುರ್ಗಾ ಪೂಜಾ ಸಮಿತಿಯಲ್ಲಿ ರಚಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮಮತಾ ಬ್ಯಾನರ್ಜಿ  ನಿರ್ದೇಶನ ನೀಡಿದ್ದಾರೆ.
2019ರ ಲೋಕಸಭಾ ಚುನಾವಣೆಯಲ್ಲಿ ಹಿಂದೂಗಳ ಮತಗಳು ಬಿಜೆಪಿಗೆ ಹೋಗುವುದನ್ನು ತಡೆಯುವ ನಿಟ್ಟಿನಲ್ಲಿ ಮಮತಾ ಬ್ಯಾನರ್ಜಿ ಹೊಸ ಘೋಷಣೆಯನ್ನು ಹೊರಡಿಸಿದ್ದಾರೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ  ಶೇ, 68 ರಷ್ಟು ಮತದಾರರು ಗ್ರಾಮೀಣ ಪ್ರದೇಶದವರಾಗಿದ್ದು,  1990ರಿಂದಲೂ ರಾಜಕೀಯ ಇತಿಹಾಸ ಗಮನಿಸಿದ್ದರೆ  ಪಂಚಾಯತ್ ಚುನಾವಣೆಯೂ ಮುಂದಿನ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರುತ್ತದೆ. 2016ರಿಂದ ಪೈಪೋಟಿ ನೀಡುತ್ತಿರುವ ಬಿಜೆಪಿಯ ಭಯದಿಂದಾಗಿ ಮಮತಾ ಬ್ಯಾನರ್ಜಿ ಈ ಘೋಷಣೆ ಮಾಡಿದ್ದಾರೆ ಎಂದು  ರಾಜಕೀಯ ತಜ್ಞ ಸುಖೇಂದು ಬ್ಯಾನರ್ಜಿ ಹೇಳುತ್ತಾರೆ.
SCROLL FOR NEXT