ಸಾಂದರ್ಭಿಕ ಚಿತ್ರ 
ದೇಶ

ವರದಕ್ಷಿಣೆ ಕಿರುಕುಳ: ಪೂರ್ವ ಬಂಧನಕ್ಕೆ ಮುನ್ನ ಸಮಿತಿಯಿಂದ ತನಿಖೆ ಅಗತ್ಯವಿಲ್ಲ: ಸುಪ್ರೀಂ

ವರದಕ್ಷಿಣೆ ಪ್ರಕರಣಕ್ಕೆ ಸಂಬಂಧಿಸಿ ತನ್ನ ಮೊದಲಿನ ಆದೇಶವನ್ನು ಮಾರ್ಪಡಿಸಿದ ಸುಪ್ರೀಂ ಕೋರ್ಟ್ ಶುಕ್ರವಾರ ಈ ಕುರಿತಂತೆ ಮಹತ್ವದ ತೀರ್ಮಾನ ಘೋಷಿಸಿದೆ.

ನವದೆಹಲಿ: ವರದಕ್ಷಿಣೆ ಪ್ರಕರಣಕ್ಕೆ ಸಂಬಂಧಿಸಿ ತನ್ನ ಮೊದಲಿನ ಆದೇಶವನ್ನು ಮಾರ್ಪಡಿಸಿದ ಸುಪ್ರೀಂ ಕೋರ್ಟ್ ಶುಕ್ರವಾರ ಈ ಕುರಿತಂತೆ ಮಹತ್ವದ ತೀರ್ಮಾನ ಘೋಷಿಸಿದೆ.
ವರದಕ್ಷಿಣೆ ಕಿರುಕುಳ ಆರೋಪಕ್ಕೆ ಸಿಕ್ಕವರನ್ನು ಬಂಧಿಸುವ ಮುನ್ನ ಅದಕ್ಕಾಗಿ ರಚಿಸಲಾದ ವಿಶೇಷ ಸಮಿತಿಯೊಂದರ ಮೂಲಕ ತನಿಖೆ ಕೈಗೊಳ್ಳಬೆಕೆಂಬ ಅದೇಶ ಮಾರ್ಪಾಡಾಗಿದೆ/
ವರದಕ್ಷಿಣೆ ವಿರೋಧಿ ಕಾನೂನನ್ನು ದುರ್ಬಲಗೊಳಿಸುವ ಆರೋಪ ಕೇಳಿ ಬಂದಿದ್ದು ಈ ಸಂಬಂಧ ತೀರ್ಪನ್ನು ಮರುಪರಿಶೀಲನೆಗೆ ಕೇಳಲಾಗಿತ್ತು. ಇದಕ್ಕೆ ಸಂಬಂಧಿಸಿದ ಅರ್ಜಿಗಳ ವಿಚಾರಣೆ ನಡೆಸಿದ್ದ ನ್ಯಾಯಾಲಯ ಏ. 23ರಂದು ಅಂತಿಮ ತೀರ್ಪನ್ನು ಕಾಯ್ದ್ರಿಸಿ ಆದೇಶಿಸಿತ್ತು.
"ವರದಕ್ಷಿಣೆ ಕಿರುಕುಳ ಪ್ರಕರಣಗಳಲ್ಲಿ ನಾವು ಕ್ಷಿಪ್ರ ಬಂಧನ ಅಥವಾ ಪೂರ್ವ ಬಂಧನಗಳನ್ನು ಅಲ್ಲದೆ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಕೆಯ ಪ್ರಕರಣ ಹೆಚ್ಚುವುದನ್ನು ತಡೆದಿದ್ದೇವೆ." ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾಮೂರ್ತಿಗಳಾದ ಎ.ಎಂ ಖಾನ್ವಿಲ್ಕರ್ ಮತ್ತು ಡಿ.ವೈ. ಚಂದ್ರಚೂಡ್ ಅವರನ್ನೊಳಗೊಂಡ ಪೀಠ ಹೇಳಿದೆ.
ಮಹಿಳೆಯರಿಗೆ ಅವರ ಲಿಂಗದ ಆಧಾರದಲ್ಲಿ ನ್ಯಾಯ ದೊರಕಬೇಕು, ಆದರೆ ವರದಕ್ಷಿಣೆ ಎನ್ನುವುದು ಒಂದೆಡೆ ವಿವಾಹದ ಮೇಲೆ ಪರಿಣಾಮ ಬೀರಲಿದೆ, ಇನ್ನೊಂದೆಡೆ  ಮನುಷ್ಯನ ಜೀವನ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಮೇಲೆಯೂ ಪರಿಣಾಮ ಉಂಟುಮಾಡಲಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಮಹಾರಾಷ್ಟ್ರದ ಅಹಮದ್ ನಗರ ಜಿಲ್ಲೆಗೆ ಸೇರಿದ ಮಹಿಳಾ ವಕೀಲರ ಸಂಘಟನೆ ರಚಿಸಿದ್ದ ಎನ್ ಜಿಓ "ನ್ಯಾಯಾಧಾರ್"  ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಸುಪ್ರೀಂ ನಲ್ಲಿ ನಡೆದಿತ್ತು ವರದಕ್ಷಿಣೆ ವಿರೋಧಿ ಕಾನೂನನ್ನು ದುರ್ಬಲವಾಗಲು ಬಿಡಬಾರದು ಎಂದು ವಾದಿಸಿದ್ದ ಎನ್ ಜಿಓ ಸ<ವಿಧಾನದ 498 ಎ ವಿಭಾಗದ ಕುರಿತ ತೀಕ್ಷ್ಣತೆಯ ಪ್ರಶ್ನೆ ಮಾಡಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

RSS Song Controversy: ಡಿಕೆಶಿ ಆರ್‌ಎಸ್‌ಎಸ್‌ ಗೀತೆ ಹಾಡಿದ್ದು ತಪ್ಪು, ಕ್ಷಮೆ ಕೇಳಿದ್ದರಿಂದ ಎಲ್ಲವೂ ಮುಗಿದಿದೆ; ಮಲ್ಲಿಕಾರ್ಜುನ ಖರ್ಗೆ

Street Dog attack: ಬೀದಿ ನಾಯಿ ಸಮಸ್ಯೆಗೆ ಉಪಾಯ ಕಂಡುಕೊಂಡ ಗದಗ ಜನತೆ, ಕಾಟದಿಂದ ಮುಕ್ತಿಗೆ ಬಣ್ಣ ನೀರಿನ ಪ್ರಯೋಗ..!

ನಮ್ಮವರು ಬೇರೆ ಧರ್ಮದವರ ಪ್ರಾರ್ಥನೆ ಸ್ಥಳಗಳಿಗೆ ಹೋಗುವುದಿಲ್ಲವೇ? ಯದುವೀರ್ ಬಿಜೆಪಿ ಜೊತೆ ಸೇರಿ ಇತಿಹಾಸ ಮರೆತಿದ್ದಾರೆ: DKS

ಕಸದ ರಾಶಿಯಲ್ಲಿ ಮನುಷ್ಯನ ತಲೆ ಬುರುಡೆ, ಮೂಳೆಗಳು ಪತ್ತೆ: ಆತಂಕದಲ್ಲಿ ಜನತೆ

SCROLL FOR NEXT