ದೇಶ

ದೇಶದ 13,500 ಗ್ರಾಮಗಳಲ್ಲಿ ಶಾಲೆಗಳೇ ಇಲ್ಲ!

Shilpa D
ನವದೆಹಲಿ: ಕೇಂದ್ರ ಸರ್ಕಾರ ಸಾರ್ವಜನಿಕ ಶಿಕ್ಷಣಕ್ಕಾಗಿ ವಿವಿಧ ಯೋಜನೆಗಳಡಿ ಹಲವು ಕ್ರಮ ಕೈಗೊಂಡಿದೆ, ಆದರೆ ಸುಮಾರು 13 ಸಾವಿರಕ್ಕೂ ಹೆಚ್ಚು ಗ್ರಾಮಗಳಲ್ಲಿ ಶಾಲೆಯೇ ಇಲ್ಲವಾಗಿದೆ,
ಗ್ರಾಮೀಣಾಭಿವೃದ್ಧಿ ಇಲಾಖೆ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರದೇಶದ 13,511 ಗ್ರಾಮಗಳಲ್ಲಿ ಶಾಲೆಯೇ ಇಲ್ಲ ಎಂದು ತಿಳಿದು ಬಂದಿದೆ, ಇದಕ್ಕೆ ಹಲವು ಕಾರಣಗಳಿವೆ, ಮೊದಲನೆಯದಾಗಿ  ಆಯಾ ರಾಜ್ಯ ಸರ್ಕಾರಗಳ ನೀರಸ ಮನೋಭಾವನೆಯಿಂದಾಗಿ ಹಲವು ಗ್ರಾಮಗಳಲ್ಲಿ ಶಾಲೆಯೇ ಇಲ್ಲವಾಗಿದೆ
ಹಾಗೂ ಮತ್ತೆ ಕೆಲವು ಗ್ರಾಮಗಳಲ್ಲಿ ಶಾಲೆ ತೆರೆಯಲು ಅವಶ್ಯಕವಾಗಿರುವಷ್ಟು ಜನಸಂಖ್ಯೆ ಕೊರತೆಯಿದೆ ಎಂದು ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ, ಆದರೆ ಮಿಜೋರಾಂ ನಲ್ಲಿರುವ ಎಲ್ಲಾ ಗ್ರಾಮಗಳಲ್ಲೂ ಒಂದೊಂದು ಶಾಲೆ ಇರುವುದು ಹೆಮ್ಮೆಯ ವಿಷಯ.
ಈ ವಿಯದಲ್ಲಿ ದೇಶದ ಉಳಿದ ಎಲ್ಲಾ ಭಾಗಗಳಿಗಿಂತ  ಈಶಾನ್ಯ ರಾಜ್ಯಗಳ ಉತ್ತಮ ಸಾಧನೆ ಮಾಡಿವೆ. ಮೇಘಾಲಯದ 41 ಗ್ರಾಮಗಳಲ್ಲಿ ಒಂದೇ ಒಂದು ಶಾಲೆಯಿಲ್ಲ ಎಂದು ವರದಿಯ ಮಾಹಿತಿಯಲ್ಲಿ ತಿಳಿದು ಬಂದಿದೆ, ಉತ್ತರ ಪ್ರದೇಶದಲ್ಲಿ ಅತ್ಯಂತ ಹೆಚ್ಚು ಗ್ರಾಮಗಳಲ್ಲಿ ಶಾಲೆಗಳಿಲ್ಲ, ಆದರೆ ಗೋವಾ ರಾಜ್ಯದ ಬಗ್ಗೆ ವರದಿಯಲ್ಲಿ ಮಾಹಿತಿಯಿಲ್ಲ,
ಮೊದಲನೆಯದಾಗಿ ಗ್ರಾಮೀಣ ಭಾಗದ ಜನರ ಮನಸ್ಥಿತಿ ಅರ್ಥ ಮಾಡಿಕೊಳ್ಳಬೇಕು ಎಂದು ಹೈದರಾಬಾದ್ ನ  ರಾಷ್ಟ್ರೀಯ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಪ್ರೊ. ಎಚ್.ಎಸ್ ಸೋಲಂಕಿ ಹೇಳಿದ್ದಾರೆ.
ಗ್ರಾಮಗಳಲ್ಲಿ ಶಾಲೆ ತೆರೆದು ಮಕ್ಕಳನ್ನು ಕಳುಹಿಸುವಂತೆ ಪೋಷಕರನ್ನು ಆಯಾ ರಾಜ್ಯ ಸರ್ಕಾರಗಳು ಮನವೊಲಿಸಬೇಕು,  ಆದರೆ ಅಲ್ಲಿನ ಕೆಲ ಜನರಿಗೆ ತಮ್ಮ ಗ್ರಾಮಗಳಲ್ಲಿ ಶಾಲೆ ಬದಲು ಕೈಗಾರಿಕೆ ಬಂದರೆ ತಾವು ಹಾಗೂ ಮಕ್ಕಳು ಕಾರ್ಖಾನೆ ಸೇರಿ ಹಣ ಸಂಪಾದಿಸಬಹುದು ಎಂಬ ಮನೋಸ್ಥಿತಿಯಲ್ಲಿವೆ,  ಅವರಿಗೆ ಅಂದರೆ ಗ್ರಾಮೀಣ ಭಾಗದ ಪೋಷಕರಿಗೆ ಶಿಕ್ಷಣದ  ಪ್ರಯೋಜನದ ಬಗ್ಗೆ ಅರಿವು ಮೂಡಿಸಬೇಕು ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಈ ವಿಷಯವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಪ್ರತಿಯೊಂದು  ಗ್ರಾಮದಲ್ಲಿ ಶಾಲೆನಿರ್ಮಿಸಲು ಸರ್ಕಾರ ಮುಂದಾಗಬೇಕು ಎಂದು ಅವರು ತಿಳಿಸಿದ್ದಾರೆ. 
SCROLL FOR NEXT