ದೇಶ

ಮಧ್ಯಪ್ರದೇಶ: ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ, ಅನಾಥಾಶ್ರಮ ಮಾಲೀಕ ಸೇರಿ ಮೂವರ ಬಂಧನ

Raghavendra Adiga
ಭೋಪಾಲ್: ಎರಡು ಅನಾಥಾಶ್ರಮಗಳಲ್ಲಿನ ಕಿವುಡ ಹಾಗೂ ಮೂಕ ಮಕ್ಕಳ ಲೈಂಗಿಕ ದುರ್ಬಳಕೆ ಆರೋಪದಡಿಯಲ್ಲಿ ಅನಾಥಾಶ್ರಮದ ಮುಖ್ಯಸ್ಥ ಮತ್ತು ಇನ್ನೂ ಇಬ್ಬರನ್ನು ಬಂಧಿಸಿರುವ ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದೆ.
ಮೂರು ಪ್ರಕರಣದಲ್ಲಿ ಆರೋಪಿಗಳಾಗಿರುವ ಆಶ್ರಯ ಮನೆ ಮುಖ್ಯಸ್ಥ ಎಂಪಿ ಅವಾಶಿ (70)ಮತ್ತು ಅವರ ಸೋದರ  ವಿಜಯ್ ಸಹಾಯಕ ರಾಕೇಶ್ ಅವರುಗಳನ್ನು ಪೋಲೀಸರು ಬಂಧಿಸಿದ್ದಾರೆ.
"ಟಿಟಿ ನಗರ ಪೊಲೀಸ್ ಠಾಣೆಯ ಇವರ ವಿರುದ್ಧ ಎರಡು ಪ್ರಕರಣ ದಾಖಲಾಗಿದ್ದವು. ಹೋಶಂಗಾಬಾದ್ ಜಿಲ್ಲಾ ಪೋಲೀಸರು ಹಾಗೂ ಭೋಪಾಲ್ ನ ಖಾಜುರಿ ಪೋಲೀಸ್ ಠಾಣೆ ಪೋಲೀಸರು ಈ ಕುರಿತಂತೆ ತನಿಖೆ ಕೈಗೊಂಡಿದ್ದಾರೆ ಎಂದು ಭೋಪಾಲ್ ಡಿಐಜಿ  ಧರ್ಮೇಂದ್ರ ಚೌಧರಿ ತಿಳಿಸಿದ್ದಾರೆ
ಇಬ್ಬರು ಬಾಲಕಿಯರ ದೂರಿನ ಮೇರೆಗೆ ಇವರ ಮೇಲೆ ಪ್ರಕರಣ ದಾಖಲಿಸಲಾಗಿದೆ.ಈ ಮೂವರೂ ಬಾಲಕಿಯರನ್ನು ಲೈಂಗಿಕವಾಗಿ ದುರುಪಯೋಗಪಡಿಸಿಕೊಂಡಿದ್ದಾರೆ ದೂರು ನೀಡಲಾಗಿದೆ.ಸಮಾಜ ಕಲ್ಯಾಣ ಇಲಾಖೆ ದೂರಿನ ಮೇಲೆ ಖಾಜುರಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶನಿವಾರ, ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ 12 ವರ್ಷ ವಯಸ್ಸಿನ ಮಕ್ಕಳ ಅತ್ಯಾಚಾರ ಅಪರಾಧಿಗಳಿಗೆ ಇತ್ತೀಚೆಗೆ ತಿದ್ದುಪಡಿ ಮಾಡಿದ ಕ್ರಿಮಿನಲ್ ಕಾನೂನಿನ ವ್ಯಾಪ್ತಿಯೊಳಗೆ  ಗರಿಷ್ಠ ಶಿಕ್ಷೆ ವಿಧಿಸುವುದಾಗಿ ಪ್ರತಿಪಾದಿಸಿದ್ದರು.
ಈ ಮೇಲಿನ ಪ್ರಕರಣದಲ್ಲಿ ಕಿರುಕುಳ ಹಾಗೂ ದೌರ್ಜನ್ಯಕ್ಕೊಳಗಾದ ಎಲ್ಲಾ ಬಾಲಕಿಯರೂ ಅಪ್ರಾಪ್ತೆಯರೇ ಆಗಿದ್ದಾರೆ.
ಆರೋಪಿ ಅವಾಶಿ ಸಮಾಜ ಕಲ್ಯಾಣ ಇಲಾಖೆ ಅನುಮತಿಯ ಮೇರೆಗೆ ರು ಮಲ್ಖೇಡಿ (ಹೋಶಂಗಾಬಾದ್) ಮತ್ತು ಬೈರಗಢ್ (ಭೋಪಾಲ್)  ಗಳಲ್ಲಿ 1991ರಿಂದಲೂ ಅನಾಥಾಶ್ರಮಗಳನ್ನು ನಡೆಸುತ್ತಿದ್ದಾರೆ 
ಕಳೆದ ವರ್ಷ ಹೋಶಂಗಾಬಾದ್ ಅನಾಥಾಶ್ರಮದ ನಿವಾಸಿಗಳು ಲೈಂಗಿಕ ದುರುಪಯೋಗದ ದೂರು ಸಲ್ಲಿಸಿದಾಗಲೂ ಜಿಲ್ಲಾಡಳಿತ ಪೋಲೀಸ್ ಕಾರ್ಯಾಚರಣೆ ನಡೆಸುವ ಬದಲು ಅನಾಥಾಶ್ರಮವನ್ನೇ ಮುಚ್ಚಿಸಿತ್ತು.
SCROLL FOR NEXT