ಹರ್ಯಾಣ ಗ್ಯಾಂಗ್ ರೇಪ್: ಮಾಡೋದೆಲ್ಲಾ ಮಾಡಿ ಯುವತಿಯ ಸ್ಥಿತಿ ಬಗ್ಗೆ ಭಯಗೊಂಡು ವೈದ್ಯರಿಗೆ ಕರೆ ಮಾಡಿದ್ದ ಆರೋಪಿಗಳು! 
ದೇಶ

ಹರ್ಯಾಣ ಗ್ಯಾಂಗ್ ರೇಪ್: ಮಾಡೋದೆಲ್ಲಾ ಮಾಡಿ ಯುವತಿಯ ಸ್ಥಿತಿ ಬಗ್ಗೆ ಭಯಗೊಂಡು ವೈದ್ಯರಿಗೆ ಕರೆ ಮಾಡಿದ್ದ ಆರೋಪಿಗಳು!

ಹರ್ಯಾಣದಲ್ಲಿ 19 ವರ್ಷದ ವಿದ್ಯಾರ್ಥಿನಿಯನ್ನು ಅಪಹರಿಸಿ ಅತ್ಯಾಚಾರವೆಸಗಿದ್ದ ಆರೋಪಿಗಳು ಆಕೆಯ ಆರೋಗ್ಯದ ಸ್ಥಿತಿ ಕಂಡು ಆತಂಕಕ್ಕೊಳಗಾಗಿದ್ದರು ಎಂಬ ಮಾಹಿತಿ ಈಗ ಬಹಿರಂಗವಾಗಿದೆ.

ರೆವಾರಿ: ಹರ್ಯಾಣದಲ್ಲಿ 19 ವರ್ಷದ ವಿದ್ಯಾರ್ಥಿನಿಯನ್ನು ಅಪಹರಿಸಿ ಅತ್ಯಾಚಾರವೆಸಗಿದ್ದ ಆರೋಪಿಗಳು ಆಕೆಯ ಆರೋಗ್ಯದ ಸ್ಥಿತಿ ಕಂಡು ಆತಂಕಕ್ಕೊಳಗಾಗಿದ್ದರು ಎಂಬ ಮಾಹಿತಿ ಈಗ ಬಹಿರಂಗವಾಗಿದೆ. 
ಅತ್ಯಾಚಾರವೆಸಗಿದ ಬಳಿಕ ಆಕೆಯ ಸ್ಥಿತಿಯನ್ನು ಕಂಡ ಆರೋಪಿಗಳು ತಕ್ಷಣವೇ ವೈದ್ಯರನ್ನು ಸಂಪರ್ಕಿಸಿದ್ದಾರೆ. ಅತಿಯಾದ ಪ್ರಮಾಣದಲ್ಲಿ ಮತ್ತು ಬರುವ ವಸ್ತುವನ್ನು ಸೇವಿಸಿದ್ದರಿಂದ ಹಾಗೂ ಸತತ 8 ಗಂಟೆಗಳ ಕಾಲ ಆಕೆಯ ಮೇಲೆ ಅತ್ಯಾಚಾರ ನಡೆದಿದ್ದರಿಂದ ಆಕೆಯ ಆರೋಗ್ಯ ಚಿಂತಾಜನಕವಾಗಿತ್ತು. 
ಎಫ್ಐಆರ್ ನಲ್ಲಿ ಕೇವಲ ಮೂವರ ಹೆಸರು ದಾಖಲಾಗಿದೆಯಾದರೂ ಯುವತಿಯ ಮೇಲೆ 12 ಜನ ಅತ್ಯಾಚಾರವೆಸಗಿದ್ದಾರೆ ಎಂದು ಹೇಳಲಾಗುತ್ತಿದೆ.  ಆರೋಪಿಗಳು ಯುವತಿಯ ಆರೋಗ್ಯದ ಬಗ್ಗೆ ಆತಂಕಕ್ಕೊಳಗಾಗಿ ವೈದ್ಯರನ್ನು ಸಂಪರ್ಕಿಸಿದ್ದಾರೆ. ಆದರೆ ರಕ್ತದೊತ್ತಡ ತೀವ್ರವಾಗಿ ಕಡಿಮೆಯಾಗಿದ್ದರಿಂದ ಆಕೆ ಸಾವನ್ನಪ್ಪಬಹುದು ಎಂದು ವೈದ್ಯರು ತಿಳಿಸಿದ್ದಾರೆ. ಇದರಿಂದ ಮತ್ತಷ್ಟು ಆತಂಕಕ್ಕೊಳಗಾದ ಆರೋಪಿಗಳು ಆಕೆಯನ್ನು ಅವರಿದ್ದ ಸ್ಥಳದಿಂದ 40 ಕಿಮೀ ದೂರದಲ್ಲಿದ್ದ ಮಹೇಂದ್ರಘಢ ಬಸ್ ನಿಲ್ದಾಣದ ಬಳಿ ಕರೆದೊಯ್ದು ಬಿಟ್ಟಿದ್ದಾರೆ  ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮೂಲಕ ತಿಳಿದುಬಂದಿದೆ. 
ಬಸ್ ನಿಲ್ದಾಣದಲ್ಲಿ ಯುವತಿಯನ್ನು ಬಿಟ್ಟ ನಂತರ, ಎಫ್ಐಆರ್ ನಲ್ಲಿ ದಾಖಲಿಸಿರುವ ಮನೀಶ್ ಎಂಬಾತ ಯುವತಿಯ ತಂದೆಗೆ ಕರೆ ಮಾಡಿ ಅರೆ ಪ್ರಜ್ಞೆಯಲ್ಲಿರುವುದನ್ನು ತಿಳಿಸಿದ್ದಾನೆ. ಪಂಕಜ್, ಸೇನಾ ಯೋಧ, ನಿಶು, ಮನೀಶ್ ಎಲ್ಲರೂ ರೆವಾರಿ ಗ್ರಾಮದವರೇ ಆಗಿದ್ದು, ಅತ್ಯಾಚಾರಕ್ಕೊಳಗಾದ ಯುವತಿ ಹಾಗೂ ಆಕೆಯ ಕುಟುಂಬ ಸದಸ್ಯರ ಪರಿಚಯ ಹೊಂದಿದ್ದಾರೆ. ಪ್ರಕರಣದಲ್ಲಿ ವೈದ್ಯರ ಹೇಳಿಕೆ ಮುಖ್ಯವಾಗಿದ್ದು, ಪೊಲೀಸರು ವೈದ್ಯರಿಗೆ ಭದ್ರತೆ ಒದಗಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕರ್ನಾಟಕ ಸೇರಿ ದೇಶಾದ್ಯಂತ Pakನ ISI ಬೆಂಬಲಿತ ಗ್ಯಾಂಗಸ್ಟರ್ ಶಹಜಾದ್ ಭಟ್ಟಿ ಜಾಲದ 200ಕ್ಕೂ ಹೆಚ್ಚು ಜನರ ಬಂಧನ: ಅಮಿತ್ ಶಾ

ಸಚಿವ ನಾಗೇಂದ್ರ ರಾಜೀನಾಮೆಗೆ ಬಿಜೆಪಿ ಬಿಗಿಪಟ್ಟು: ವಿಧಾನಸಭೆಯಲ್ಲಿ ಪ್ರತಿಭಟನೆ, ಗದ್ದಲ, ಕಲಾಪಕ್ಕೆ ಅಡ್ಡಿ!

'ಸ್ವಲ್ಪ ತಾಳ್ಮೆಯಿಂದ ಕಾಯಿರಿ' ಪಾಕಿಸ್ತಾನ, ಬಾಂಗ್ಲಾದೇಶ, ಅಪ್ಘಾನಿಸ್ತಾನ ಮತ್ತೆ ಭಾರತಕ್ಕೆ ಸೇರಿಕೊಳ್ಳುವ ದಿನ ಬರುತ್ತದೆ- ಬಾಬಾ ರಾಮದೇವ್!

ಆಪ್ ಕಿ ಅದಾಲತ್‌ನಲ್ಲಿ 'ಗಡ್ಡದ ಹಿಂದಿನ ಕಥೆ ಬಿಚ್ಚಿಟ್ಟ ಸೂಪರ್ ಸ್ಟಾರ್ ಯಶ್! Video

BJYM: Tejasvi Surya ಸ್ಥಾನಕ್ಕೆ ನೂತನ ನೇಮಕ; ಯಾರು ಈ ಡಾ. ಹೇಮಾಂಗ್ ಜೋಶಿ?