ದೇಶ

ತಮಿಳರಂತೆ ಕನ್ನಡಿಗರು ಸಹ 'ಮೂರ್ಖರು', ಸುಬ್ರಮಣಿಯನ್ ಸ್ವಾಮಿ ಹೇಳಿಕೆಗೆ ತೀವ್ರ ಆಕ್ರೋಶ!

Vishwanath S
ಬೆಂಗಳೂರು: ಹಿಂದಿ ಭಾಷೆಯನ್ನು ವಿರೋಧಿಸುವ ಮೂಲಕ ಕನ್ನಡಪರ ಹೋರಾಟಗಾರರು ತಮಿಳರಂತೆ ಮೂರ್ಖರು ಎಂದು ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. 
ಹಿಂದಿ ದಿವಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಂವಿಧಾನದಲ್ಲಿ ಹಿಂದಿ ಕೂಡ ಒಂದು ಭಾಷೆ. ಹಿಂದಿ ಬೆಳೆಯುವುದರಿಂದ ಕನ್ನಡ ಕೆಳಗೆ ಇಳಿಯುತ್ತದೆ ಎಂಬ ಭಾವನೆ ಬೇಕಿಲ್ಲ. ಹಿಂದಿ ಭಾಷೆ ವಿರೋಧಿಸುವವರು ತಮಿಳುನಾಡಿನ ಜನರಂತೆ ಮೂರ್ಖರು, ತಮಿಳರು ಮಾಡಿದಂತೆ ಕನ್ನಡಿಗರು ಮಾಡುತ್ತಿದ್ದಾರೆ ಎಂದರು. 
ಹಿಂದಿ ಭಾಷೆಯನ್ನು ವಿರೋಧಿಸಿ ತಮಿಳಿಗರು ಇಂದು ಉದ್ಯೋಗಾವಕಾಶ ಇಲ್ಲದೆ ಬಳಲುತ್ತಿದ್ದಾರೆ. ಇನ್ನು ದೇಶಾದ್ಯಂತ ತಿರುಗಾಡಲಾಗದ ಸ್ಥಿತಿಯಲ್ಲಿದ್ದಾರೆ. ತಮಿಳುನಾಡಿನ ಜನರು ಮಾಡಿದ ಮೂರ್ಖ ಕೆಲಸವನ್ನು ಕನ್ನಡಿಗರು ಮಾಡದಿರಲಿ ಎಂದು ಸುಬ್ರಮಣಿಯನ್ ಸ್ವಾಮಿ ಹೇಳಿದರು. 
ಸುಬ್ರಮಣಿಯನ್ ಸ್ವಾಮಿ ಹೇಳಿಕೆಯನ್ನು ಖಂಡಿಸಿರುವ ಕನ್ನಡ ಚಳವಳಿ ವಾಟಾಳ್ ಪಕ್ಷದ ನಾಯಕ ವಾಟಾಳ್ ನಾಗರಾಜ್ ಅವರು ಸುಬ್ರಮಣಿಯನ್ ಸ್ವಾಮಿ ಅವರು ಮಾನಸಿಕ ಸೀಮಿತ ಕಳೆದುಕೊಂಡಿದ್ದಾರೆ ಎಂದು ಟೀಕಿಸಿದ್ದಾರೆ.
SCROLL FOR NEXT