ಲಖನೌ : 2019ರ ಲೋಕಸಭಾ ಚುನಾವಣೆಯಲ್ಲಿ ಪ್ರತಿಪಕ್ಷಗಳು ಬಲವಾದ ಮೈತ್ರಿ ಮಾಡಿಕೊಳ್ಳುವ ಮೂಲಕ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವುದಾಗಿ ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಹಾಗೂ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪ್ರತಿಪಕ್ಷಗಳು ಮಾತ್ರವಲ್ಲ, ದೇಶದ ಜನರು ಕೂಡಾ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ಬಯಸಿದ್ದು, ಅವರು ಮತ ನೀಡಲ್ಲ , ಮುಂದಿನ ದಿನಗಳಲ್ಲಿ ಸದೃಢ ಮಹಾಘಟಬಂಧನ ವನ್ನು ನೀವು ನೋಡುವಿರಿ ಎಂದರು.
ಉತ್ತರ ಪ್ರದೇಶದಲ್ಲಿ ನ್ಯಾಯೋಚಿತವಾಗಿ ಸ್ಥಾನ ಹೊಂದಾಣಿಕೆ ಏರ್ಪಟ್ಟರೆ ಮಾತ್ರ ಪ್ರತಿಪಕ್ಷಗಳ ಮೈತ್ರಿ ಸೇರುವುದಾಗಿ ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಹೇಳಿಕೆ ನೀಡಿದ್ದ ಬೆನ್ನಲ್ಲೇ ಅಖಿಲೇಶ್ ಯಾದವ್ ಈ ರೀತಿ ಹೇಳಿದ್ದಾರೆ.