ಕೇಂದ್ರ ಸಚಿವ ಗಿರಿರಾಜ್ ಸಿಂಗ್
ನವದೆಹಲಿ: ಒಡಕುಂಟು ಮಾಡುತ್ತಿರುವ ಶಕ್ತಿಗಳಿಂದ ಭಾರತದ ಪ್ರಜಾಪ್ರಭುತ್ವವನ್ನು ರಕ್ಷಣೆ ಮಾಡಬೇಕಾದರೆ, ಜನಸಂಖ್ಯೆ ನಿಯಂತ್ರಿಸಲು ಸರ್ಕಾರ ಕಾನೂನು ರೂಪಿಸಲೇಬೇಕು ಎಂದು ಬಿಜೆಪಿ ನಾಯಕ ಹಾಗೂ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಅವರು ಭಾನುವಾರ ಹೇಳಿದ್ದಾರೆ.
1947 ರಲ್ಲಿ ದೇಶದ ಜನಸಂಖ್ಯೆ 33 ಕೋಟಿಗಳಿತ್ತು. 2018ರ ವೇಳೆಗೆ ಇದರ ಸಂಖಅಯೆ 135 ಕೋಟಿಗೇರಿದೆ. ಹಿಂದೂಗಳ ಸಂಖ್ಯೆ ಕ್ಷೀಣಿಸುತ್ತಿದೆ. ಜನಸಂಖ್ಯೆಯನ್ನು ನಿಯಂತ್ರಣಕ್ಕೆ ತರದೇ ಹೋದರೆ ಸಾಮಾಜಿಕ ಸಮಾನತೆಯಾಗಲೀ ಅಥವಾ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ನಡೆಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಕೆಲ ದೇಶಗಳನ್ನು ಬಿಟ್ಟರೆ ಹಲವಾರು ದೇಶಗಳಲ್ಲಿ ಜನಸಂಖ್ಯೆಗೆ ಕಾನೂನುಗಳಿವೆ. ಭಾರತದಲ್ಲಿ ಮಾತ್ರ ಇದು ಸಾಧ್ಯವಾಗುತ್ತಿಲ್ಲ. ಇದಕ್ಕೆ ಕಾರಣ ವೋಟ್ ಬ್ಯಾಂಕ್ ರಾಜಕೀಯ. ಪ್ರಜಾಪ್ರಭುತ್ವನ್ನು ರಕ್ಷಣೆ ಮಾಡಬೇಕಾದರೆ ಸರ್ಕಾರ ಜನಸಂಖ್ಯೆ ನಿಯಂತ್ರಿಸಲು ಕಾನೂನು ರೂಪಿಸಲೇಬೇಕು ಎಂದು ತಿಳಿಸಿದ್ದಾರೆ.
ಧರ್ಮದ ಆಧಾರದ ಮೇಲೆ ದೇಶ 1947ರಲ್ಲಿ ಇಬ್ಭಾಗವಾಗಿತ್ತು. 2047ರಲ್ಲಿಯೂ ಇಂತಹದ್ದೇ ಪರಿಸ್ಥಿತಿ ಎದುರಾಗಲಿದೆ. 33 ಕೋಟಿಯಿಂದ 135.7ಕೋಟಿಗೆ ಜನಸಂಖ್ಯೆ ಏರಿಕೆಯಾಗಿದೆ. ಇದರಂತೆ ಒಡಕುಂಟು ಮಾಡುತ್ತಿರುವ ಶಕ್ತಿಗಳು ಕೂಡ ಹೆಚ್ಚಾಗಿವೆ. ಪ್ರಸ್ತುತ ವಿಧಿ 35ಎ ಕುರಿತಂತೆ ಚರ್ಚೆಗಳು ನಡೆಯುತ್ತಿವೆ. ಮುಂದಿನ ದಿನಗಳಲ್ಲಿ ಭಾರತ ಎಂದು ಕರೆಯುವುದೂ ಕೂಟ ಅಸಾಧ್ಯವಾಗಿ ಹೋಗುತ್ತದೆ ಎಂದಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos