ಸಂಸದನ ಪಾದ ತೊಳೆದು ನೀರು ಕುಡಿದ ಬಿಜೆಪಿ ಕಾರ್ಯಕರ್ತ: ಇದರಲ್ಲಿ ತಪ್ಪೇನಿದೆ ಎಂದ ಸಂಸದ 
ದೇಶ

ಸಂಸದನ ಪಾದ ತೊಳೆದು ನೀರು ಕುಡಿದ ಬಿಜೆಪಿ ಕಾರ್ಯಕರ್ತ: ತಪ್ಪೇನಿದೆ ಎಂದ ಸಂಸದ

ಸಾರ್ವಜನಿಕ ಕಾರ್ಯಕ್ರಮಕ್ಕ ಆಗಮಿಸಿದ್ದ ಬಿಜೆಪಿ ಸಂಸದರೊಬ್ಬರ ಕಾಲು ತೊಡೆದ ಪಕ್ಷದ ಕಾರ್ಯಕರ್ತನೊಬ್ಬ ನಂತರ ಕಾಲು ತೊಳೆದ ನೀರು ಕುಡಿದ ಘಟನೆ ಜಾರ್ಖಾಂಡ್ ನಲ್ಲಿ ನಡೆದಿದ್ದು, ಇದಕ್ಕೆ ತೀವ್ರ ಟೀಕೆಗಳು ವ್ಯಕ್ತವಾಗತೊಡಗಿವೆ...

ಗೊಡ್ಡ: ಸಾರ್ವಜನಿಕ ಕಾರ್ಯಕ್ರಮಕ್ಕ ಆಗಮಿಸಿದ್ದ ಬಿಜೆಪಿ ಸಂಸದರೊಬ್ಬರ ಕಾಲು ತೊಡೆದ ಪಕ್ಷದ ಕಾರ್ಯಕರ್ತನೊಬ್ಬ ನಂತರ ಕಾಲು ತೊಳೆದ ನೀರು ಕುಡಿದ ಘಟನೆ ಜಾರ್ಖಾಂಡ್ ನಲ್ಲಿ ನಡೆದಿದ್ದು, ಇದಕ್ಕೆ ತೀವ್ರ ಟೀಕೆಗಳು ವ್ಯಕ್ತವಾಗತೊಡಗಿವೆ. 
ಜಾರ್ಖಾಂಡ್'ನ ಗೊಡ್ಡ ಸಂಸದ ನಿಶಿಕಾಂತ್ ದುಬೆ ಅವರು ನಿನ್ನೆ ಸಾರ್ವಜನಿಕ ಕಾರ್ಯಕ್ರಮವೊಂದಕ್ಕೆ ತೆರಳಿದ್ದಾರೆ. ಈ ವೇಳೆ ಸ್ಥಳದಲ್ಲಿದ್ದ ಕಾರ್ಯಕರ್ತ ಪವನ್ ಸಿಂಗ್ ಎಂಬುವವರು ನಿಶಿಕಾಂತ್ ಅವರ ಪಾದ ತೊಳೆದು, ಪಾದವನ್ನು ಒರೆಸಿದ್ದಾರೆ. ಬಳಿಕ ಕಾಲು ತೊಳೆದ ನೀರನ್ನು ಕುಡಿದಿದ್ದಾರೆ. 
ಘಟನೆಯ ವಿಡಿಯೋವನ್ನು ಸ್ವತಃ ನಿಷಿಕಾಂಗ್ ಅವರೇ ತಮ್ಮ ಅಧಿಕೃತ ಫೇಸ್ ಬುಕ್ ಕಾತೆಯಲ್ಲಿ ಹಂಚಿಕೊಂಡಿದ್ದು, ವಿಡಿಯೋ ನೋಡಿದ ಸಾರ್ವಜನಿಕ ತೀವ್ರ ಟೀಕೆಗಳನ್ನು ವ್ಯಕ್ತಪಡಿಸಿದ್ದಾರೆ.
ಕಾರ್ಯಕ್ರಮವೊಂದಕ್ಕೆ ನನ್ನನ್ನು ಅತಿಥಿಯಾಗಿ ಆಹ್ವಾನ ನೀಡಲಾಗಿತ್ತು. ಈ ವೇಳೆ ಪಕ್ಷದ ಹಿರಿಯ ಕಾರ್ಯಕರ್ತ ಪವನ್ ಸಿಂಗ್ ಅವರು ಸಾವಿರಾರು ಜನರ ಸಮ್ಮುಖದಲ್ಲಿ ನನ್ನ ಪಾದವನ್ನು ತೊಳೆಯರು. ಪಕ್ಷದ ಕಾರ್ಯಕರ್ತರ ಪಾದ ತೊಳೆದು, ಆ ನೀರನ್ನು ಕುಡಿಯುವ ಅವಕಾಶ ಕೂಡ ಮತ್ತೊಂದು ದಿನ ನನಗೆ ಸಿಗಲಿ ಎಂದು ಬಯಸುತ್ತೇನೆಂದು ಹೇಳಿದ್ದರು. ಇದಕ್ಕೆ ಸಾವಿರಾರು ಜನರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. 
ಟೀಕೆಗಳು ವ್ಯಕ್ತವಾದ ಹಿನ್ನಲೆಯಲ್ಲಿ ಘಟನೆಯನ್ನು ಸಮರ್ಥಿಸಿಕೊಂಡಿರುವ ನಿಷಿಕಾಂತ್ ಅವರು, ಇದೇನು ಅಂತಹ ದೊಡ್ಡ ವಿಚಾರವಲ್ಲ. ತಮ್ಮ ಇಚ್ಛೆಯಂತೆ ಅವರು ಕಾಲು ತೊಳೆದಿದ್ದಾರೆ. ಇದಕ್ಕೆ ರಾಜಕೀಯ ಬಣ್ಣವನ್ನೇಕೆ ನೀಡಲಾಗುತ್ತಿದೆ? ಅತಿಥಿಗಳ ಪಾದ ತೊಳೆಯುವುದರಲ್ಲಿ ತಪ್ಪೇನಿದೆ?ಮಹಾಭಾರತ ಕಥೆಗಳನ್ನು ಓದಿ ಎಂದು ತಿಳಿಸಿದ್ದಾರೆ. 
ಇದೇ ವೇಳೆ ತಮ್ಮ ಜಾತಿ ಕುರಿತಂತೆ ಹೇಳಿಕೊಂಡಿರುವ ಅವರು, ನಾನೊಬ್ಬ ಬ್ರಾಹ್ಮಣ ಎಂಬ ಸತ್ಯವನ್ನು ಹೇಗೆ ಬದಲಿಸಲು ಸಾಧ್ಯ? ಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿದ್ದಕ್ಕೆ ನನ್ನ ಪೋಷಕರನ್ನು ನಿಂದಿಸಬೇಕೆ? ಈ ಕಾರಣದಿಂದ ನನ್ನ ತಂದೆ-ತಾಯಿಯನ್ನು ಬದಲಿಸಬೇಕೆ? ಎಂದು ಪ್ರಶ್ನಿಸಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಜ್ಯದಲ್ಲಿ ಸಿಎಂ ಗದ್ದುಗೆ ಗುದ್ದಾಟ: ಎಲ್ಲ ಗೊಂದಲಗಳಿಗೆ ಹೈಕಮಾಂಡ್ ತೆರೆ ಎಳೆಯಬೇಕು- ಸಿಎಂ ಸಿದ್ದರಾಮಯ್ಯ

ಸ್ಮೃತಿ ಮಂಧಾನ ಮದುವೆ ಮುಂದೂಡಿಕೆಗೆ ಅಸಲಿ ಕಾರಣ? ಪರಸ್ತ್ರೀ ಮೋಹ, ನಂಬಿಕೆ ದ್ರೋಹ: ಬಯಲಾಯ್ತು ಪಲಾಶ್'ನ ಅಸಲಿ ರಂಗಿನಾಟ!

ಪಶ್ಚಿಮ ಬಂಗಾಳದಲ್ಲಿ ವಿವಾದಿತ SIR ಕುರಿತು ಮಾತುಕತೆಗೆ ಟಿಎಂಸಿಗೆ ಚುನಾವಣಾ ಆಯೋಗ ಆಹ್ವಾನ

ಇದು ಕೇವಲ ಧ್ವಜವಲ್ಲ ಭಾರತೀಯ ನಾಗರಿಕತೆಯ ಪುನರ್‌ ಜಾಗೃತಿಯ ಧ್ವಜ, ಶತಮಾನಗಳಷ್ಟು ಹಳೆಯ ಗಾಯ ಈಗ ವಾಸಿಯಾಗುತ್ತಿದೆ: ಪ್ರಧಾನಿ ಮೋದಿ

SCROLL FOR NEXT