ಪ್ರಧಾನಿ ಮೋದಿ ಜನ್ಮದಿನದಂದು ಜನಿಸಿದ 1,200 ಜನರಿಂದ ಸಾಮೂಹಿಕ ಹುಟ್ಟುಹಬ್ಬ ಆಚರಣೆ: ವಿಶ್ವದಾಖಲೆ
ಸೂರತ್: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಜನ್ಮದಿನದಂದೇ ಹುಟ್ಟಿದ ಸುಮಾರು 1,200 ಜನರು ಸೋಮವಾರ ಸಾಮೂಹಿಕ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವ ಮೂಲಕ ಗಿನ್ನಿಸ್ ದಾಖಲೆ ಮಾಡಿದ್ದಾರೆ.
ಸೂರತ್'ನ ಸರ್ಸಾನ ಎಕ್ಸಿಬಿಷನ್ ಸೆಂಟರ್ ನಲ್ಲಿ ಸೇರಿದ ಸಾವಿರಾರು ಜನರು, ಒಂದೇ ಸೂರಿನಡಿ ಕೇಕ್ ಕಟ್ ಮಾಡುವ ಮೂಲಕ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಇದು ವಿಶ್ವದ ಅತೀದೊಡ್ಡ ಸಮಾನ ಹುಟ್ಟುಹಬ್ಬ ಸಮ್ಮಿಲನ ಎಂಬ ವಿಶ್ವದಾಖಲೆ ನಿರ್ಮಾಣ ಮಾಡಿದೆ.
ಈ ಹಿಂದೆ ಈ ವಿಶ್ವದಾಖಲೆ ನೆದರ್ ಲ್ಯಾಂಡ್ ಮಾಡಿತ್ತು. ಅಲ್ಲಿ ಒಟ್ಟು 200 ಮಂದಿ ಒಟ್ಟಿಗೆ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು.
ಅತುಲ್ ಬೇಕರಿ ಈ ವಿಭಿನ್ನ ಕಾರ್ಯಕ್ರಮವನ್ನು ಆಯೋಜನೆ ಮಾಡಿತ್ತು. ಸೆ.17 ರಂದು ಜನಸಿದ ಹವಾರು ಮಕ್ಕಳು, ವಯಸ್ಕರು ಹಾಗೂ ಯುವಕ, ಯುವತಿಯರು ಕೇಕ್ ಕಟ್ ಮಾಡಿ, ಹುಟ್ಟುಹಬ್ಬದ ಹಾಡು ಹಾಡಿ ಸಂಭ್ರಮವನ್ನಾಚರಿಸಿದರು.
ಹುಟ್ಟುಹಬ್ಬದ ದಿನದ ಸಂಭ್ರಮದಲ್ಲಿದ್ದ ಜನರನ್ನು 20 ಗುಂಪುಗಳನ್ನಾಗಿ ವಿಂಗಡನೆ ಮಾಡಲಾಗಿತ್ತು. ಪ್ರತೀ ಗುಂಪಲ್ಲಿ ಸುಮಾರು 50 ಮಂದಿ ಇದ್ದರು. ಈ ಗುಂಪುಗಳಿಗೆ ಮೋದಿ ಯೋಜನೆಗಳ ಹೆಸರಿಟ್ಟಿದ್ದು ಮತ್ತೊಂದು ವಿಶೇಷವಾಗಿತ್ತು.
ಯುವತಿಯರ ಗುಂಪಿಗೆ ಸುಕನ್ಯಾ ಯೋಜನೆ ಎಂದು ಹೆಸರಿಟ್ಟಿದ್ದರೆ, ಪುಟಾಣಿ ಹೆಣ್ಣು ಮಕ್ಕಳ ಗುಂಪಿಗೆ ಬೇಟಿ ಪಡಾವೋ, ಬೇಟಿ ಬಚಾವೋ ಎಂದು ಹೆಸರಿಸಲಾಗಿತ್ತು. ವಯಸ್ಸಾದವರ ಗುಂಪಿಗೆ ಅಟಲ್ ಪೆನ್ಶನ್ ಯೋಜನೆ ಎಂದು ಹೆಸರಿಡಲಾಗಿತ್ತು. ಇನ್ನು ಯುವಕರ ತಂಡಕ್ಕೆ ಸ್ಕಿಲ್ ಇಂಡಿಯಾ, ಡಿಜಿಟಲ್ ಇಂಡಿಯಾ ಹೆಸರಿಡಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics