ದೇಶ

ಲೋಕಸಭಾ ಚುನಾವಣೆ: ರಾಜಕೀಯ ಬದಲಾವಣೆಗೆ ದೇಶ ಸಾಕ್ಷಿಯಾಗಲಿದೆ-ಮಮತಾ

Nagaraja AB

ಕೋಲ್ಕತ್ತಾ: 2019ರ ಲೋಕಸಭಾ  ಚುನಾವಣೆಯಲ್ಲಿ  ಜನತೆ ಬಿಜೆಪಿಯನ್ನುಸೋಲಿಸಲಿದ್ದು,  ದೇಶ ಮಹತ್ವದ ರಾಜಕೀಯ ಬದಲಾವಣೆಗೆ ಸಾಕ್ಷಿಯಾಗಲಿದೆ  ಎಂದು  ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

2014ರ ಲೋಕಸಭಾ ಚುನಾವಣೆಯಲ್ಲಿ ಶೇಕಡವಾರು 31 ರಷ್ಟು ಮತ ಗಳಿಕೆಯಿಂದ  ಅಧಿಕಾರದ ಬಂದಿದ್ದ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದಿಲ್ಲ ಎಂದರು.

ಪ್ರಧಾನಿ ನರೇಂದ್ರಮೋದಿ ನೇತೃತ್ವದ ಸರ್ಕಾರ ವಿರುದ್ಧ ಜನತೆ ಅಸಮಾಧಾನಗೊಂಡಿದ್ದು,  ಬಿಜೆಪಿ ಹಠಾವೋ, ದೇಶ ಬಚಾವೋ ಮುಂದಿನ ಚುನಾವಣೆಗೆ ತಮ್ಮ ಘೋಷವಾಕ್ಯವಾಗಿದೆ ಎಂದು ಪುನರ್ ಉಚ್ಚರಿಸಿದರು.

 2014ರಲ್ಲಿ ಮಾಡಿದ ಭರವಸೆಗಳನ್ನು ಬಿಜೆಪಿ ಈಡೇರಿಸಿಲ್ಲ , 2019ರ ಲೋಕಸಭಾ ಚುನಾವಣೆಗೆ ಕೇಸರಿ ಪಕ್ಷಕ್ಕೆ ಯಾರೂ ಮತ ನೀಡುವುದಿಲ್ಲ, ಯಾರೂ ಸದೃಢರಾಗಿರುತ್ತಾರೋ ಅಂತಹವರಿಗೆ  ಮತ ನೀಡಲಿದ್ದಾರೆ. ಬಲವಾದ ಪಕ್ಷ ಕೇಂದ್ರದಲ್ಲಿ ಅಧಿಕಾರಕ್ಕೆ ಬರಲಿದೆ. ಪ್ರಧಾನಮಂತ್ರಿ ಅಭ್ಯರ್ಥಿಯನ್ನು ನಂತರ ಘೋಷಣೆ ಮಾಡಲಾಗುವುದು ಎಂದರು.

ಬಿಜೆಪಿ ವಿರೋಧಿಸುವ ಎಲ್ಲಾ ಪಕ್ಷಗಳು ಒಟ್ಟಿಗೆ ಸ್ಪರ್ಧಿಸಲಿದ್ದು,  ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಮರಳಿ ತರುವ ನಿಟ್ಟಿನಲ್ಲಿ ಪಶ್ಚಿಮ ಬಂಗಾಳ  ಸಕಾರಾತ್ಮಕ ಪಾತ್ರ ನಿರ್ವಹಿಸಲಿದೆ . ಒಂದು ವೇಳೆ 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದರೆ ದೇಶಕ್ಕೆ ಅಪಾಯ ತಪ್ಪಿದ್ದಲ್ಲ ಎಂದು ಮಮತಾ ಬ್ಯಾನರ್ಜಿ ಎಚ್ಚರಿಕೆ ನೀಡಿದರು.

SCROLL FOR NEXT