ಮುಂಬೈ: ಸ್ವಾತಂತ್ರ್ಯಾನಂತರ ಭಾರತದ ಮೊದಲ ಮಹಿಳಾ ಐಎಎಸ್ ಅಧಿಕಾರಿ ಅನ್ನಾ ರಾಜಮ್ ಮಲ್ಹೋತ್ರಾ ಸೋಮವಾರ ಮುಂಬೈನ ಅಂಧೇರಿಯ ನಿವಾಸದಲ್ಲಿ ನಿಧನ ಹೊಂದಿದ್ದಾರೆ ಅವರಿಗೆ 91 ವರ್ಷ ವಯಸ್ಸಾಗಿತ್ತು.
ಜುಲೈ 1927 ರಲ್ಲಿ ಕೇರಳದ ಎರ್ನಾಕುಲಂ ಜಿಲ್ಲೆಯಲ್ಲಿ ಜನಿಸಿದ ಅನ್ನಾ ರಾಜಮ್ ಜಾರ್ಜ್ ಕೋಳಿಕ್ಕೋಡ್ ನಲ್ಲಿ ಶಾಲಾ ಶಿಕ್ಷಣ ಮುಗಿಸಿ ಮದ್ರಾಸ್ ವಿಶ್ವವಿದ್ಯಾನಿಲಯದಲ್ಲಿ ಉನ್ನತ ಶಿಕ್ಷಣವನ್ನು ಪಡೆಯಲು ಚೆನ್ನೈಗೆ ಬಂದು ನೆಲೆಸಿದ್ದರು/
1951 ರಲ್ಲಿ ಸಿವಿಲ್ ಸರ್ವೀಸ್ ಪರೀಕ್ಷೆ ಉತ್ತೀರ್ಣರಾದ ಮಲ್ಹೋತ್ರಾನಾಗರಿಕ ಸೇವೆಗೆ ಸೇರ್ಪಡೆಯಾಗಿದ್ದರು.ಮದ್ರಾಸ್ ಕೇಡರ್ ಗೆ ಆಯ್ಕೆಯಾಗಿದ್ದ ಮಲ್ಹೋತ್ರಾ ಮದ್ರಾಸ್ ರಾಜ್ಯದಲ್ಲಿ ಮುಖ್ಯಮಂತ್ರಿ ಸಿ. ರಾಜಗೋಪಾಲಾಚಾರಿ ಅವರ ಆಡಳಿತದಡಿ ಸೇವೆ ಸಲ್ಲಿಸಿದ್ದರು.
1985 ರಿಂದ 1990 ರವರೆಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಗವರ್ನರ್ ಆಗಿದ್ದ ಆರ್ ಎನ್ ಮಲ್ಹೋತ್ರಾರನ್ನು ವಿವಾಹವಾಗಿದ್ದ ಅನ್ನಾ ರಾಜಮ್ ಮುಂಬೈ ಸಮೀಪದ ದೇಶದ ಆಧುನಿಕ ಬಂದರು ಜವಾಹರಲಾಲ್ ನೆಹರು ಪೋರ್ಟ್ ಟ್ರಸ್ಟ್ ಸ್ಥಾಪನೆಗೆ ನೀಡಿದ ಕೊಡುಗೆ ಮಹತ್ವದ್ದಾಗಿತ್ತು.
1989 ರಲ್ಲಿ,ಇವರಿಗೆ ಪದ್ಮಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಮಲ್ಹೋತ್ರಾ ತಮಿಳುನಾಡಿನ ಏಳು ಮುಖ್ಯಮಂತ್ರಿಗಳ ಅಡಿಯಲ್ಲಿ ಕೆಲಸ ಮಾಡಿದ್ದರು ಇವರು ರಾಜೀವ್ ಗಾಂಧಿ ಇನ್ ಚಾರ್ಜ್ ಆಗಿದ್ದ 1982 ರ ದೆಹಲಿಯ ಏಷ್ಯನ್ ಕ್ರೀಡಾಕೂಟದಲ್ಲಿ ಗಾಂಧಿ ಅವರ ಜೊತೆ ನಿಕಟವಾಗಿ ಕೆಲಸ ಮಾಡಿದ್ದರು. ಕೇಂದ್ರೀಯ ಸೇವೆಯಲ್ಲಿದ್ದಾಗ ಅವರು ಕೇಂದ್ರ ಗೃಹ ಸಚಿವಾಲಯದ ಸಿಬ್ಬಂದಿ ವಿಭಾಗದಲ್ಲಿ ಸೇವೆ ಸಲ್ಲಿಸಿದ್ದರು ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.
ನಿವೃತ್ತಿಯ ನಂತರ, ಹೋಟೆಲ್ ಲೀಲಾ ವೆಂಚರ್ ಲಿಮಿಟೆಡ್ ನ ನಿರ್ದೇಶಕರಾಗಿ ಮಲ್ಹೋತ್ರಾ ಸೇವೆ ಸಲ್ಲಿಸುತ್ತಿದ್ದರು.