ಶ್ರೀನಗರ: ಪತ್ರಕರ್ತರ ಸೋಗಿನಲ್ಲಿ ಕಳೆದ ಸೋಮವಾರ ಟೆರಿಟೋರಿಯಲ್ ಆರ್ಮಿ(ಟಿಎ)ಯ ಯೋಧನ ಮನೆಗೆ ನುಗ್ಗಿದ ಉಗ್ರರು ನಿರಾಯುಧನಾಗಿದ್ದ ಯೋಧನನ್ನು ಹೊರಗೆಳೆದು ಗುಂಡಿಟ್ಟು ಹತ್ಯೆ ಮಾಡಿ ನೀಚ ಕೃತ್ಯ ಎಸಗಿದ್ದರು.
ಮೃತ ಯೋಧನನ್ನು ಮುಖ್ತಾರ್ ಅಹಮ್ಮದ್ ಮಲಿಕ್ ಅವರು ಮಗ ಸಾವಿನ ಸುದ್ದಿ ಕೇಳಿದ ಆಘಾತದಲ್ಲಿ ಮನೆಗೆ ಬಂದಿದ್ದರು. ಮಗನನ್ನು ಕಳೆದುಕೊಂಡ ಶೋಕದಲ್ಲಿದ್ದ ಯೋಧನ ಹತ್ಯೆ ಮಾಡುವ ಮೂಲಕ ಉಗ್ರರು ತಮ್ಮ ಪರಾಕ್ರಮ ಮೆರೆದಿದ್ದಾರೆ.
ಮಲಿಕ್ ಪುತ್ರ ಕೆಲ ದಿನಗಳ ಹಿಂದೆ ಕುಲ್ಗಾಂನಲ್ಲಿ ನಡೆದ ಭೀಕರ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದು ಮೂರು ದಿನಗಳ ಹಿಂದೆ ಮೃತಪಟ್ಟಿದ್ದ. ಇದರಿಂದಾಗಿ ಮಗನ ಅಂತ್ಯಕ್ರಿಯೆಗಾಗಿ ಮಲಿಕ್ ರಜೆಯಲ್ಲಿ ಮನೆಗೆ ಬಂದಿದ್ದರು.
ಮಲಿಕ್ ರ ಕುಟುಂಬಸ್ಥರ ಪ್ರಕಾರ ಮನೆಗೆ ಬಂದಿದ್ದ ಮಲಿಕ್ ರನ್ನು ಭೇಟಿ ಮಾಡಬೇಕು ಎಂದು ಹೇಳಿಕೊಂಡು ಪತ್ರಕರ್ತರ ಸೋಗಿನಲ್ಲಿ ಉಗ್ರರು ಬಂದಿದ್ದರು. ಮನೆಯೊಳಗೆ ಹೋಗುತ್ತಿದ್ದಂತೆ ತಮ್ಮ ಬಳಿಯಿದ್ದ ಬಂದೂಕಿನಿಂದ ಮಲಿಕ್ ರನ್ನು ಪೈಂಟ್ ಬ್ಲಾಂಕ್ ನಲ್ಲಿ ಗುಂಡಿಟ್ಟು ಹತ್ಯೆ ಮಾಡಿದ್ದಾರೆ ಎಂದು ಹೇಳಿದ್ದಾರೆ.