ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ
ಭೋಪಾಲ್: ಭಾರತೀಯ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರ ರನ್ ಗಳಂತಿರುತ್ತದೆ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ಘೋಷಣೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಸೋಮವಾರ ವ್ಯಂಗ್ಯವಾಡಿದ್ದಾರೆ.
ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಮಧ್ಯಪ್ರದೇಶದಲ್ಲಿ ಈಗಾಗಲೇ ಕಾಂಗ್ರೆಸ್ ರೋಡ್ ಶೋ ಆರಂಭಿಸಿದ್ದು, ನಿನ್ನೆ ಸಾರ್ವಜನಿಸ ಸಭೆಯೊಂದರಲ್ಲಿ ಮಾತನಾಡಿರುವ ಅವರು, ಮಧ್ಯಪ್ರದೇಶ ಮುಖ್ಯಮಂತ್ರಿಗಳ ಘೋಷಣೆ ಕುರಿತು ವ್ಯಂಗ್ಯವಾಡಿದ್ದಾರೆ.
ಸಚಿನ ತೆಂಡೂಲ್ಕರ್ ಬಗ್ಗೆ ನಿಮಗೆಲ್ಲರಿಗೂ ಗೊತ್ತಿರುತ್ತದೆ. ಯಾವುದೇ ಇನ್ನಿಂಗ್ಸ್ ಆಡಲು ಮೈದಾನಕ್ಕೆ ಇಳಿದರೂ ಅವರು ಕನಿಷ್ಟ 50, 60, 70 ಅಥವಾ 100 ರನ್ ಗಳನ್ನು ಹೊಡೆಯುತ್ತಾರೆ. ಇದೇ ರೀತಿ ಮಧ್ಯಪ್ರದೇಶ ಮುಖ್ಯಮಂತ್ರಿಗಳೂ ರನ್ ಮಷಿನ್ ಇದೆ. ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಕೂಡ ಇದೇ ರೀತಿ ಘಷಣೆಗಳನ್ನು ಮಾಡುತ್ತಾರೆ. ಈ ವರೆಗೂ ಚೌಹಾಣ್ ಅವರೂ 21,000 ಘೋಷಣೆಗಳನ್ನು ಮಾಡಿದ್ದಾರೆ. ಆದರೂ ಏನೂ ಪ್ರಯೋಜನವಾಗಿಲ್ಲ.
ಈ ವರೆಗೂ ನಾವೇನನ್ನೂ ಪಡೆದಿದ್ದೀರಿ? ಅತ್ಯಾಚಾರ, ನಿರುದ್ಯೋಗ, ಅಪೌಷ್ಠಿಕತೆ ಹಾಗೂ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ಮಧ್ಯಪ್ರದೇಶ ಮೊದಲ ಸ್ಥಾನದಲ್ಲಿದೆ ಎಂದು ಆರೋಪಿಸಿದ್ದಾರೆ.