ನವದೆಹಲಿ: ರಾಹುಲ್ 'ಬಫೂನ್ ರಾಜ' ಎಂಬ ಅರುಣ್ ಜೇಟ್ಲಿ ಹೇಳಿಕೆಗೆ ಕಾಂಗ್ರೆಸ್ ತಿರುಗೇಟು ನೀಡಿದ್ದು, ಜೇಟ್ಲಿ ಆಸ್ಥಾನ ವಿದೂಷಕ, ಅಪ್ರಯೋಜಕ ಬ್ಲಾಗರ್ ಎಂದು ಹೇಳಿದೆ.
ಜೇಟ್ಲಿ ವಿರುದ್ಧ ವಾಗ್ದಾಳಿ ನಡೆಸುವುದಕ್ಕೆ ಟ್ವಿಟರ್ ನ್ನು ಆಯ್ದುಕೊಂಡಿರುವ ಕಾಂಗ್ರೆಸ್ ವಕ್ತಾರ ರಣ್ದೀಪ್ ಸುರ್ಜೇವಾಲ, ಅರುಣ್ ಜೇಟ್ಲಿ ಅವರು ಆಸ್ಥಾನ ವಿದೂಷಕರಿದ್ದಂತೆ, ಅವರ ಬ್ಲಾಗ್ ಗಳು ನಿಷ್ಪ್ರಯೋಜಕವಾಗಿದ್ದು, ಸುಳ್ಳು ಕಾರ್ಯಸೂಚಿಗಳಿಂದ ಕೂಡಿರುತ್ತವೆ ಎಂದು ಹೇಳಿದ್ದಾರೆ.
ಈ ಟ್ವೀಟ್ ನಲ್ಲೇ ಅರುಣ್ ಜೇಟ್ಲಿಗೆ ಸುರ್ಜೇವಾಲ ಕೆಲವೊಂದು ಪ್ರಶ್ನೆಗಳನ್ನು ಕೇಳಿದ್ದಾರೆ, ರಾಫೆಲ್ ಡೀಲ್ ನಲ್ಲಿ 41,000 ಕೋಟಿ ನಷ್ಟ ಉಂಟಾಗಿದ್ದರೂ ಉತ್ತರ ಏಕೆ ನೀಡುತ್ತಿಲ್ಲ, ಹೆಚ್ಎಎಲ್ ಸಂಸ್ಥೆಯನ್ನು ಸೂಪರ್ ಸೀಡ್ ಮಾಡಿದ್ದೇಕೆ ಎಂದು ಪ್ರಶ್ನಿಸಿದ್ದಾರೆ.