ದೇಶ

ಯೋಧನ ಶಿರಚ್ಛೇದಗೊಳಿಸಿದ ಪಾಕ್ ವಿರುದ್ಧ ಗುಡುಗಿದ ಭಾರತ

Manjula VN
ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಅಂತರಾಷ್ಟ್ರೀಯ ಗಡಿಯಲ್ಲಿ ಭಾರತೀಯ ಯೋಧನ ಶಿರಚ್ಛೇದಗೊಳಿಸಿ ರಕ್ಕಸತನ ಹೊರಹಾಕಿರುವ ಪಾಕಿಸ್ತಾನದ ವಿರುದ್ಧ ಭಾರತ ಗುರುವಾರ ತೀವ್ರವಾಗಿ ಪ್ರತಿಭಟನೆ ವ್ಯಕ್ತಪಡಿಸಿದೆ. 
ಜಮ್ಮು ಮತ್ತು ಕಾಶ್ಮೀರದ ರಾಮ್'ಗಢ್ ಬಳಿ ಭಾರತೀಯ ಯೋಧನನ್ನು ಭೀಕರವಾಗಿ ಗುಂಡಿಟ್ಟು ಹತ್ಯೆಗೈದಿದ್ದ ಪಾಕಿಸ್ತಾನದ ಸೈನಿಕರು, ಬಳಿಕ ಯೋಧನ ಕತ್ತನ್ನು ಸೀಳಿದ್ದಲ್ಲದೇ, ಕಣ್ಣುಗುಡ್ಡೆಯನ್ನು ಕಿತ್ತುಹಾಕುವ ಮೂಲಕ ಅತ್ಯಂತ ಹೇಯವಾಗಿ ವರ್ತಿಸಿತ್ತು. 
ಪಾಕಿಸ್ತಾನದ ಈ ಪಾತಕೀ ಕೃತ್ಯಕ್ಕೆ ಭಾರತ ತೀವ್ರವಾಗಿ ಪ್ರತಿಭಟನೆ ವ್ಯಕ್ತಪಡಿಸಿದೆ ಎಂದು ಸೇನಾ ಮೂಲಗಳು ಮಾಹಿತಿ ನೀಡಿವೆ. 
ನಿನ್ನೆಯಷ್ಟೇ ಸೇನಾ ಕಾರ್ಯಾಚರಣೆಗಳ ನಿರ್ದೇಶಕರ ನಡುವೆ ಉನ್ನತ ಮಟ್ಟದ ಮಾತುಕತೆ ನಡೆದಿದ್ದು, ಮಾತುರತೆ ವೇಳೆ ಅಂತರಾಷ್ಟ್ರೀಯ ಗಡಿಯಲ್ಲಿ ಭಾರತೀಯ ಯೋಧರನ್ನು ಗುರಿಯಾಗಿಸುತ್ತಿರುವುದು ಹಾಗೂ ಪದೇ ಪದೇ ಕದನ ವಿರಾಮ ಉಲ್ಲಂಘನೆ ಮಾಡುತ್ತಿರುವುದರ ಕುರಿತಂತೆ ಭಾರತ ತೀವ್ರವಾಗಿ ಪ್ರತಿಭಟನೆ ವ್ಯಕ್ತಪಡಿಸಿದೆ ಎಂದು ಮೂಲಗಳು ಮಾಹಿತಿ ನೀಡಿವೆ. 
SCROLL FOR NEXT