ದೇಶ

ಕೇರಳ ನನ್ ಅತ್ಯಾಚಾರ ಪ್ರಕರಣ: ಬಿಷಪ್ ಫ್ರಾಂಕೊ ಮುಲಕ್ಕಲ್ ಬಂಧನ

Lingaraj Badiger
ಕೊಚ್ಚಿ: ಕೇರಳದ ಕ್ರೈಸ್ತ ಸನ್ಯಾಸಿನಿ ಮೇಲೆ ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿರುವ ಜಲಂಧರ್'ನ ರೋಮನ್ ಕ್ಯಾಥೋಲಿಕ್ ಬಿಷಪ್ ಫ್ರಾಂಕೊ ಮುಲಕ್ಕಲ್ ಅವರನ್ನು ಶುಕ್ರವಾರ ಪೊಲೀಸರು ಬಂಧಿಸಿದ್ದಾರೆ. ಇದರೊಂದಿಗೆ ನನ್ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಬಂಧನಕ್ಕೊಳಗಾದ ಮೊದಲ ಕ್ಯಾಥೋಲಿಕ್ ಬಿಷಪ್ ಎಂಬ ಕುಖ್ಯಾತಿ ಪಡೆದರು.
ಬಿಷಪ್ ಅವರು ಪೊಲೀಸರು ಕಳೆದ ಮೂರು ದಿನಗಳ ವಿಚಾರಣೆ ನಡೆಸುತ್ತಿದ್ದರು. ವಿಚಾರಣೆ ವೇಳೆ ಬಿಷಪ್ ಅವರು ಕೆಲವು ಅಸಮಂಜಸ ಹೇಳಿಕೆಗಳನ್ನು ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಅವರನ್ನು ಬಂಧಿಸಿದ್ದಾರೆ.
ನಿನ್ನೆಯಷ್ಟೇ ವ್ಯಾಟಿಕನ್ ಪೋಪ್, ಫ್ರಾಂಕೊ ಮುಲಕ್ಕಲ್ ಅವರನ್ನು ಜಲಂಧರ್'ನ ರೋಮನ್ ಕ್ಯಾಥೋಲಿಕ್ ಬಿಷಪ್ ಹುದ್ದೆಯಿಂದ ತಾತ್ಕಾಲಿಕವಾಗಿ ತೆರವುಗೊಳಿಸಿದ್ದರು.
ಮುಲಕ್ಕಲ್ ಅವರು 2014ರಿಂದ 2016ರ ಅವಧಿಯಲ್ಲಿ 44 ವರ್ಷದ ಕ್ರೈಸ್ತ ಸನ್ಯಾಸಿನಿ ಮೇಲೆ ಪದೇ ಪದೇ ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿದ್ದಾರೆ.
SCROLL FOR NEXT