ದೇಶ

ಇಂಡೋ-ಪಾಕ್ ಮಾತುಕತೆ ರದ್ದು ಜಮ್ಮುಮತ್ತು ಕಾಶ್ಮೀರಕ್ಕೆ ಕೆಟ್ಟ ಸುದ್ದಿ: ಮುಫ್ತಿ

Manjula VN
ಶ್ರೀನಗರ: ಭಾರತ ಮತ್ತು ಪಾಕಿಸ್ತಾನದ ನಡುವಿನ ಮಾತುಕತೆ ರದ್ದುಗೊಂಡಿರುವ ವಿಚಾರ ಜಮ್ಮು ಮತ್ತು ಕಾಶ್ಮೀರಕ್ಕೆ ಕೆಟ್ಟ ಸುದ್ದಿ ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿಯವರು ಶನಿವಾರ ಹೇಳಿದ್ದಾರೆ. 
ಈ ಕುರಿತಂತ ಮಾತನಾಡಿರುವ ಅವರು, ಭಾರತ ಮತ್ತು ಪಾಕಿಸ್ತಾನದ ವಿದೇಶಾಂಗ ಸಚಿವರ ನಡುವೆ ನಡೆಯಬೇಕಿದ್ದ ಮಾತುಕತೆ ರದ್ದುಗೊಂಡಿರುವುದು ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ಕೆಟ್ಟ ಸುದ್ದಿಯಾಗಿದೆ. ರಾಜ್ಯದ ಜನತೆಗಾಗಿ ಉಭಯ ರಾಷ್ಟ್ರಗಳು ಮಾತುಕತೆ ನಡೆಸುವಂತೆ ಮನವಿ ಮಾಡಿಕೊಳ್ಳುತ್ತೇವೆಂದು ಹೇಳಿದ್ದಾರೆ. 
ಉಭಯ ರಾಷ್ಟ್ರಗಳ ನಾಯಕರು ಮಾಧ್ಯಮಗಳ ಮೂಲಕವಲ್ಲದೆ, ನೇರ ನೇರ ಮಾತುಕತೆನಡೆಸಬೇಕಿದೆ. ಮಾಧ್ಯಮಗಳೇ ಹೊರತು ಎನ್'ಡಿಎ ಸರ್ಕಾರ ನಾಯಕತ್ವ ಯಾವುದೇ ಅಜೆಂಡಾವನ್ನು ಮುಂದಕ್ಕೆ ತರುತ್ತಿಲ್ಲ ಎಂದು ಟ್ವಿಟರ್ ನಲ್ಲಿ ಮುಫ್ತಿ ಬರೆದುಕೊಂಡಿದ್ದಾರೆ. 
ಉಗ್ರರು ಕಾಶ್ಮೀರ ಪೊಲೀಸರ ಅಹಪರಣ ಮಾಡಿ ಕೊಂದು ಪೈಶಾಚಿಕ ಕೃತ್ಯವೆಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತನ್ನ ವಿರೋಧದ ಪ್ರತಿಕ್ರಿಯೆಯಾಗಿ ವಿಶ್ವಸಂಸ್ಥೆಯಲ್ಲಿ ನಡೆಯಬೇಕಿದ್ದ ಇಂಡೋ-ಪಾಕ್ ವಿದೇಶಾಂಗ ಸಚಿವರ ಭೇಟಿಯನ್ನು ಭಾರತ ರದ್ದುಗೊಳಿಸಿತ್ತು. 
SCROLL FOR NEXT