ಸರ್ಜಿಕಲ್ ಸ್ಟ್ರೈಕ್ ಅಚ್ಚರಿಯ ಶಸ್ತ್ರ, ಅದು ಹಾಗೆಯೇ ಇರಲಿ ಬಿಡಿ: ಸೇನಾ ಮುಖ್ಯಸ್ಥ ರಾವತ್
ನವದೆಹಲಿ: ಪಾಕಿಸ್ತಾನಕ್ಕೆ ಎಚ್ಚರಿಕೆ ಸಂದೇಶ ನೀಡಿರುವ ಸೇನಾ ಮುಖ್ಯಸ್ಥ ಬಿಪಿನ್ ರಾವತ್, ಸರ್ಜಿಕಲ್ ಸ್ಟ್ರೈಕ್ ಎನ್ನುವುದು ಅಚ್ಚರಿಯ ಅಸ್ತ್ರ, ಹಾಗೂ ಅದು ಹಾಗೆಯೇ ಇರಬೇಕು ಎಂದು ಹೇಳಿದ್ದಾರೆ.
ಇದೇ ವೇಳೆ ಭಾರತ ಪಾಕಿಸ್ತಾನದೊಂದಿಗೆ ದ್ವಿಪಕ್ಷೀಯ ಮಾತುಕತೆಯನ್ನು ರದ್ದುಗೊಳಿಸಿದ ನಿರ್ಧಾರವನ್ನು ಸ್ವಾಗತಿಸಿರುವ ಬಿಪಿನ್ ರಾವತ್, ಭಯೋತ್ಪಾದನೆ ಹಾಗೂ ಮಾತುಕತೆ ಎರಡೂ ಒಟ್ಟಿಗೆ ನಡೆಯುವುದಕ್ಕೆ ಸಾಧ್ಯವಿಲ್ಲ ಎಂದಿದ್ದಾರೆ. "ಸರ್ಕಾರದ ನೀತಿ ಸ್ಪಷ್ಟವಾಗಿದೆ. ನೀವು ಭಯೋತ್ಪಾದನೆಯನ್ನು ಬೆಂಬಲಿಸುತ್ತಿಲ್ಲ ಎಂಬುದನ್ನು ನಮಗೆ ಮನವರಿಕೆ ಮಾಡಿಕೊಡಲು ಯತ್ನಿಸುತ್ತೀರಿ, ಆದರೆ ಭಯೋತ್ಪಾದನೆ ಗಡಿ ಪ್ರದೇಶದಲ್ಲಿ ಮುಂದುವರೆಯುತ್ತಲೇ ಇದೆ. ಈ ರೀತಿಯ ಪರಿಸ್ಥಿತಿಯಲ್ಲಿ ಹೇಗೆ ದ್ವಿಪಕ್ಷೀಯ ಮಾತುಕತೆ ಸಾಧ್ಯ ಎಂದು ಬಿಪಿನ್ ರಾವತ್ ಪ್ರಶ್ನಿಸಿದ್ದಾರೆ.
ಪಾಕಿಸ್ತನ ಕದನ ವಿರಾಮ ಉಲ್ಲಂಘನೆಗೆ ಕರೆ ನೀಡಿದ ಬಳಿಕವೂ ಗಡಿ ಪ್ರದೇಶದಲ್ಲಿ ಒಳನುಸುಳುವಿಕೆ ಮುಂದುವರೆಯುತ್ತಲೇ ಇದೆ, ಪಾಕಿಸ್ತಾನ ಈ ರೀತಿ ಮಾಡುತ್ತಿರುವುದು ಇದೇ ಮೊದಲಲ್ಲ, ಎಂದು ಸೇನಾ ಮುಖ್ಯಸ್ಥ ರಾವತ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics