ಅತಿಯಾಗಿ ಭಯ ಹುಟ್ಟಿಸಬೇಡಿ, ನಿಮ್ಮ ಹೆದರಿಕೆಗೆ ಬಗ್ಗಲ್ಲ: ಗಾಯದ Video ಶೇರ್​ ಮಾಡಿ ಪೊಲೀಸರಿಗೆ ಆಮೀರ್ ಖಾನ್ ಸೊಸೆ ತಿರುಗೇಟು!

ಝೈನ್ ಮೇರಿ ಖಾನ್ ಅವರು ಸಿಜೆಪಿ ಪ್ರತಿಭಟನೆಯ ವೇಳೆ ಪೊಲೀಸರು ನಡೆಸಿದ ಲಾಠಿಚಾರ್ಜ್​ನಿಂದ ತಮ್ಮ ಮೈಮೇಲೆ ಆದ ಗಾಯದ ಗುರುತುಗಳನ್ನು ಇನ್​ಸ್ಟಾಗ್ರಾಂ ವಿಡಿಯೋದಲ್ಲಿ ಹಂಚಿಕೊಳ್ಳುವ ಮೂಲಕ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
Acto Aamir Khan's niece Zayn Marie shows injury marks after detention at CJP protest
ಝೈನ್ ಮೇರಿ ಖಾನ್
Updated on: 

ಮುಂಬೈ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಒತ್ತಾಯಿಸಿ ಮುಂಬೈನಲ್ಲಿ ಶನಿವಾರ ನಡೆದ 'ಕಾಕ್ರೋಚ್ ಜನತಾ ಪಾರ್ಟಿ'(CJP) ಪ್ರತಿಭಟನೆಯ ವೇಳೆ ಮುಂಬೈ ಪೊಲೀಸರು ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಬಾಲಿವುಡ್ ಖ್ಯಾತ ನಟ ಆಮೀರ್ ಖಾನ್ ಅವರ ಸೊಸೆ ಝೈನ್ ಮೇರಿ ಖಾನ್ ಅವರು ಆರೋಪಿಸಿದ್ದಾರೆ.

ಝೈನ್ ಮೇರಿ ಖಾನ್ ಅವರು ಪ್ರತಿಭಟನೆಯ ವೇಳೆ ಪೊಲೀಸರು ನಡೆಸಿದ ಲಾಠಿಚಾರ್ಜ್​ನಿಂದ ತಮ್ಮ ಮೈಮೇಲೆ ಆದ ಗಾಯದ ಗುರುತುಗಳನ್ನು ಇನ್​ಸ್ಟಾಗ್ರಾಂ ವಿಡಿಯೋದಲ್ಲಿ ಹಂಚಿಕೊಳ್ಳುವ ಮೂಲಕ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಪ್ರತಿಭಟನೆ ವೇಳೆ ಪೊಲೀಸರು ನಡೆಸಿದ ಲಾಠಿಚಾರ್ಜ್​ನಿಂದ ತಮ್ಮ ತೋಳು, ಬೆರಳುಗಳು ಮತ್ತು ಕಾಲುಗಳ ಮೇಲೆ ಗಾಯವಾಗಿರುವುದನ್ನು ತೋರಿಸುವ ವಿಡಿಯೋವನ್ನು ಝೈನ್, ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ ಮಾಡಿದ್ದಾರೆ.

Acto Aamir Khan's niece Zayn Marie shows injury marks after detention at CJP protest
Chalo Supreme Court: ಭೇಟಿ ಮನವಿ ತಿರಸ್ಕರಿಸಿದ CJI ಸೂರ್ಯಕಾಂತ್; ಸುಪ್ರೀಂ ಕೋರ್ಟ್‌ನತ್ತ ಇಂಡಿಯಾ ಬ್ಲಾಕ್ ಮೆರವಣಿಗೆ!

ಇನ್‌ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ಝೈನ್ ಅವರು, "ನಮಗೆ ಅತಿಯಾಗಿ ಭಯ ಹುಟ್ಟಿಸಬೇಡಿ; ನಾವು ಯಾವುದಕ್ಕೂ ಬಗ್ಗಲ್ಲ, ಭಯವೇ ಉಳಿಯದ ಹಂತಕ್ಕೆ ನಮ್ಮನ್ನು ಹೆದರಿಸಬೇಡಿ ಎಂದಿದ್ದಾರೆ" ಎಂದು ಮುಂಬೈ ಪೊಲೀಸರಿಗೆ ತಿರುಗೇಟು ನೀಡಿದ್ದಾರೆ.

ಘಟನೆಯ ದಿನದಂದು ಝೈನ್ ಮೇರಿ ಅವರು ತಮ್ಮ ಬಂಧನದ ಘಟನೆಯನ್ನು ಇನ್‌ಸ್ಟಾಗ್ರಾಮ್ ಸ್ಟೋರೀಸ್ ಮೂಲಕ ಲೈವ್ ಆಗಿಯೇ ಹಂಚಿಕೊಂಡಿದ್ದರು. ಪೊಲೀಸರು ತಮ್ಮನ್ನು ಹಾಗೂ ಇತರರನ್ನು ಹೇಗೆ ಬಲವಂತವಾಗಿ ಪೊಲೀಸ್ ವಾಹನಕ್ಕೆ ಹತ್ತಿಸುತ್ತಿದ್ದಾರೆ ಎಂಬುದರ ವಿಡಿಯೋ ತುಣುಕುಗಳನ್ನು ಬಿಡುಗಡೆ ಮಾಡುವ ಮೂಲಕ ಜೈನ್​ ಅವರು ಸಾರ್ವಜನಿಕರ ಗಮನ ಸೆಳೆದಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com