ರಾಜ್ಯ

ಯಲಹಂಕ ಪ್ಯಾಲೇಸ್ ನಿರಾಕರಿಸಿದ ಜಗನ್; ಬೆಂಗಳೂರಿನ ಲೀಲಾ ಪ್ಯಾಲೇಸ್‌ನಲ್ಲಿ ನಡೆದ YS ಶರ್ಮಿಳಾ ಪುತ್ರಿ ಮದುವೆ!

ಯಲಹಂಕ ಪ್ಯಾಲೇಸ್ ನಿರಾಕರಿಸಿದ ಜಗನ್; ಬೆಂಗಳೂರಿನ ಲೀಲಾ ಪ್ಯಾಲೇಸ್‌ನಲ್ಲಿ ನಡೆದ YS ಶರ್ಮಿಳಾ ಪುತ್ರಿ ಮದುವೆ!
YS ಶರ್ಮಿಳಾ ಪುತ್ರಿ ಮದುವೆ
Published On :

ಬೆಂಗಳೂರು: ಆಂಧ್ರಪ್ರದೇಶ ಕಾಂಗ್ರೆಸ್ ಸಮಿತಿ(APCC) ಅಧ್ಯಕ್ಷೆ ವೈ.ಎಸ್. ಶರ್ಮಿಳಾ ಅವರ ಪುತ್ರಿ ಅಂಜಲಿ ರೆಡ್ಡಿ ಮತ್ತು ಡಾ. ಸೋಮಲ ರಘುರಾಮ್ ರೆಡ್ಡಿ ಅವರು ಗುರುವಾರ ದಾಂಪತ್ಯ ಜೀವನಕ್ಕೆ ಕಾಲಿಟಿದ್ದಾರೆ.

ಆಂಧ್ರ ಪ್ರದೇಶ ಮಾಜಿ ಮುಖ್ಯಮಂತ್ರಿ ದಿವಂಗತ ವೈ.ಎಸ್‌. ರಾಜಶೇಖರ ರೆಡ್ಡಿ ಅವರ ಪುತ್ರಿ ಶರ್ಮಿಳಾ ಅವರು ತಮ್ಮ ಮಗಳ ಮದುವೆಯನ್ನು ಜಂಟಿ ಒಡೆತನದಲ್ಲಿರುವ ‘ಯಲಹಂಕ ಪ್ಯಾಲೇಸ್‌’ನಲ್ಲಿ ನಡೆಸಲು ತೀರ್ಮಾನಿಸಿದ್ದರು.

ಆದರೆ ಇದಕ್ಕ ಅವರ ಸಹೋದರ ಆಂಧ್ರ ಪ್ರದೇಶ ಮಾಜಿ ಮುಖ್ಯಮಂತ್ರಿ ಜಗನ್‌ ಮೋಹನ್‌ ರೆಡ್ಡಿ ಅವರು ವಿರೋಧ ವ್ಯಕ್ತಪಿಸಿದ್ದರು. ಹೀಗಾಗಿ ಶರ್ಮಿಳಾ ಅವರ ಪುತ್ರಿಯ ಮದುವೆಯನ್ನು ಬುಧವಾರ, ನವೆಂಬರ್ 25, 2026 ರಂದು ಬೆಂಗಳೂರಿನ ಲೀಲಾ ಪ್ಯಾಲೇಸ್‌ನಲ್ಲಿ ಅದ್ಧೂರಿಯಾಗಿ ನೆರವೇರಿಸಲಾಗಿದೆ.

YS ಶರ್ಮಿಳಾ ಪುತ್ರಿ ಮದುವೆ
YS ಶರ್ಮಿಳಾ ಪುತ್ರಿ ಮದುವೆ

ಬೆಂಗಳೂರಿನ ಯಲಹಂಕ ಪ್ಯಾಲೇಸ್‌ನಲ್ಲಿ ತಮ್ಮ ಸೋದರ ಸೊಸೆ ಅಂಜಲಿ ರೆಡ್ಡಿ ಅವರ ಮದುವೆ ಸಮಾರಂಭವನ್ನು ನಡೆಸಲು ಅನುಮತಿ ನೀಡಲು, ಭದ್ರತಾ ಕಾರಣಗಳನ್ನು ಉಲ್ಲೇಖಿಸಿ ಜಗನ್ ಮೋಹನ್ ರೆಡ್ಡಿ ಇತ್ತೀಚೆಗೆ ನಿರಾಕರಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.