ದೇಶ

ತನ್ನ ಸಲಿಂಗಿ ಸಹವರ್ತಿಯೊಡನೆ ವಾಸಿಸಲು ಮಹಿಳೆಗೆ ಕೇರಳ ಹೈಕೋರ್ಟ್ ಅನುಮತಿ

Raghavendra Adiga
ತಿರುವನಂತಪುರ: ಸಮಾನ ಲಿಂಗಿಗಳ ಜತೆ ಲೈಂಗಿಕ ಜೀವನ ನಡೆಸುವುದು ಅಪರಾಧವೆಂದಿದ್ದ ಭಾರತೀಯ ದಂಡ ಸಂಹಿತೆಯ 377 ನೇ ವಿಭಾಗವನ್ನು ರದ್ದುಗೊಳಿಸಿ ಸುಪ್ರೀಂ ಕೋರ್ಟ್ ತೀರ್ಪು ಪ್ರಕಟಿಸಿದ ವಾರಗಳ ತರುವಾಯ ಕೇರಳ ನ್ಯಾಯಾಲಯ  40 ವರ್ಷದ ಮಹಿಳೆಗೆ 24 ವರ್ಷದ ತನ್ನ ಸಹವರ್ತಿಯೊಡನೆ ಜೀವನ ಸಾಗಿಸಲು ಅನುಮತಿ ನೀಡಿದೆ.
ಕೇರಳ ಹೈಕೋರ್ಟ್ ವಿಭಾಗೀಯ ಪೀಠ ಈ ಅನುಮತಿ ಕೊಟ್ಟಿದ್ದು ಕೊಲ್ಲಂ ನ ಪಶ್ಚಿಮ ಕಲ್ಲಾಡಾ ನಿವಾಸಿ ಎಸ್. ಶ್ರೀಜಾ (40) ಸಲ್ಲಿಸಿದ ಹೆಬಿಯಸ್ ಕಾಕಾರ್ಪಸ್ ಅರ್ಜಿ ಕುರಿತ ತೀರ್ಪನ್ನು ನ್ಯಾಯಾಲಯ ಪ್ರಕಟಿಸಿದೆ. ನ್ಯಾಯಾಧೀಶರಾದ ಸಿ. ಕೆ. ಅಬ್ದುಲ್ ರಹೀಮ್ ಮತ್ತು ನಾರಾಯಣ ಪಿಶರಾಡಿ ಅವರನ್ನೊಳಗೊಂಡ ಪೀಠ ಈ ವಿಚಾರಣೆ ನಡೆಸಿತ್ತು.
ಅರ್ಜಿಯಲ್ಲಿ ಶ್ರೀಜಾ ತಮ್ಮ ಸಹವರ್ತಿ ನಯ್ಯತಿಂಕರ ನಿವಾಸಿ ಅರುಣಾ(24) ಅವರೊಡನೆ ತಾವು ವಾಸಿಸಲು ಬಯಸಿದ್ದು ಅರುಣಾಳನ್ನು ಆಕೆಯ ಪೋಷಕರು ಅಕ್ರಮ ಬಂಧನದಲ್ಲಿರಿಸಿದ್ದಾರೆ ಎಂದು ಆರೋಪಿಸಿದ್ದರು.
ಕಳೆದ ಆಗಸ್ಟ್ ತಿಂಗಳಿನಿಂದ ಇಬ್ಬರೂ ಒಟ್ಟಾಗಿ ಜೀವನ ನಡೆಸಲು ಪ್ರಾರಂಭಿಸಿದಾಗ ಅರುಣಾ ಪೋಷಕರು ಆಕೆಯ ವಿರುದ್ಧ ನಾಪತ್ತೆ ಪ್ರಕರಣ ದಾಖಲಿಸಿದ್ದರು. ಬಳಿಕ ಆಕೆಯನ್ನು ತಿರುವನಂತಪುರದ ನಯ್ಯಂತಿಕರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಆಗ ನ್ಯಾಯಾಲಯ ಅರುಣಾಗೆ ತನ್ನೊಡನಿರಲು ಮುಕ್ತ ಸ್ವಾತಂತ್ರ ನೀಡಿತ್ತು,. ಆದರೂ ಆಕೆಯ ಪೋಷಕರು ಮತ್ತೆ ಅವಳನ್ನು ಬಲವಂತವಾಗಿ ಕರೆದೊಯ್ದರು ಎಂದು ಶ್ರೀಜಾ ನ್ಯಾಯಾಲಯಕ್ಕೆ ವಿವರಿಸಿದ್ದಾರೆ.
ಅರುಣಾ ಮಾನಸಿಕ ಆಸ್ಪತ್ರೆಗೆ ದಾಖಲಾಗಿದ್ದು ಅಲ್ಲಿನ ವೈದ್ಯಾಧಿಕಾರಿಗಳಿಗೆ ಅರುಣಾ ಶ್ರೀಜಾ ಜತೆ ವಾಸಿಸುವುದು ಇಷ್ಟವಿರಲಿಲ್ಲ. ಆಕೆ ಅರುಣಾಳನ್ನು ಭೇಟಿಯಾಗದಂತೆ ಅವರು ತಡೆದಿದ್ದರು. ಹೀಗಾಗಿ ಶ್ರೀಜಾ  ಹೈಕೋರ್ಟ್ ನಲ್ಲಿ ಹೆಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ಇದರಂತೆ ಪೋಲೀಸರು ಅರುಣಾಳನ್ನು ನ್ಯಾಯಾಲಯಕ್ಕೆ ಹಜರುಪಡಿಸಿದ್ದರು.
ಮಂಗಳವಾರ ನ್ಯಾಯಾಲಯಕ್ಕೆ ಹಾಜರಾದ ಅರುಣಾ ತಾವು ಶ್ರೀಜಾ ಜತೆ ವಾಸಿಸುವ ಇಚ್ಚೆ ವ್ಯಕ್ತಪಡಿಸಿದ್ದರು. ಇದಕ್ಕೆ ಸಮ್ಮತಿಸಿದ ನ್ಯಾಯಾಲಯ ಇತ್ತೀಚಿನ ಸುಪ್ರೀಂ ತೀರ್ಪಿನ ಹಿನ್ನೆಲೆಯಲ್ಲಿ ಇಬ್ಬರೂ ಸಹಜೀವನ ನಡೆಸಲು ಅನುಮತಿಸಿದೆ,
SCROLL FOR NEXT