ಲಖನೌ: ದೇಶ ಕಾಯುವ ವೀರ ಯೋಧರು ಹುತಾತ್ಮರಾದ ದಿನ ನಮಗೆ ಕರಾಳ ರಾತ್ರಿಯಾಗಿರುತ್ತದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಹೇಳಿದ್ದಾರೆ.
ಉತ್ತರಪ್ರದೇಶದಲ್ಲಿ ಬಿಜೆಪಿ ಕಾರ್ಯಕರ್ತರು ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅವರು, ದೇಶ ಕಾಯುವ ವೀರ ಯೋಧರು ಹುತಾತ್ಮರಾದ ದಿನ ನಮಗೆ ನಿದ್ರೆ ಬರುವುದಿಲ್ಲ. ಆ ದಿನ ನಮಗೆ ಕರಾಳ ರಾತ್ರಿಯಾಗಿರುತ್ತದೆ ಎಂದು ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ಗಡಿಯಲ್ಲಿ ಪಾಕಿಸ್ತಾನ ನಡೆಸಿದ್ದ ಅಪ್ರಚೋದಿತ ಗುಂಡಿನ ದಾಳಿಗೆ ಇತ್ತೀಚೆಗಷ್ಟೇ ಬಿಎಸ್ಎಫ್ ಯೋಧರೊಬ್ಬರು ಹುತಾತ್ಮರಾಗಿದ್ದರು.
ಈ ಹಿನ್ನಲೆಯಲ್ಲಿ ಮಾತನಾಡಿರುವ ಅವರು, ಜನರಿಗೆ ಬಹುಶಃ ಗೊತ್ತಿರುವುದಿಲ್ಲ. ಆದರೆ, ಯೋಧರು ಹುತಾತ್ಮರಾದ ದಿನ ನಮಗದು ಕರಾಳ ರಾತ್ರಿಯಾಗಿರುತ್ತದೆ. ನಮ್ಮ ಯೋಧರು ದೇಶ ಹೆಮ್ಮೆ ಎಂದು ಹೇಳಿದ್ದಾರೆ.