ದೇಶ

ಲಂಕಾ ಅಧ್ಯಕ್ಷರ ಹತ್ಯೆಗೆ ಸಂಚು: ಭಾರತೀಯನ ಬಂಧನ!

Srinivas Rao BV
ಶ್ರೀಲಂಕಾ: ಶ್ರೀಲಂಕಾ ಅಧ್ಯಕ್ಷರ ಹತ್ಯೆಗೆ ಸಂಚು ರೂಪಿಸಿದ್ದ ಪ್ರಕರಣದಲ್ಲಿ ಭಾರತೀಯ ಪ್ರಜೆಯನ್ನು ಬಂಧಿಸಲಾಗಿದೆ. 
ಲಂಕ ಮಾಧ್ಯಮಗಳು ವರದಿ ಮಾಡಿರುವ ಪ್ರಕಾರ, ಭಾರತೀಯ ಪ್ರಜೆಯಾದ ಎಂ ಥಾಮಸ್ ಎಂಬುವವರನ್ನು ಭ್ರಷ್ಟಾಚಾರ ವಿರೋಧಿ ಆಂಧೋಲನ ಕಾರ್ಯಾಚರಣೆಯ ನಿರ್ದೇಶಕ ನಮಲ್ ಕುಮಾರಾ ನಿವಾಸದಿಂದ  ಬಂಧಿಸಲಾಗಿದ್ದು, ಸಿಐಡಿ ಮುಖ್ಯಸ್ಥ ರಂಜಿತ್ ಮುನಾಸಿಂಘೆ ಫೋರ್ಟ್ ಮ್ಯಾಜಿಸ್ಟ್ರೇಟ್ ಕೋರ್ಟ್ ಗೆ ಮಾಹಿತಿ ನೀಡಿದ್ದಾರೆ.
ಥಾಮಸ್ ನ್ನು ಹೆಚ್ಚಿನ ವಿಚಾರಣೆಗೊಳಪಡಿಸಲು ಮ್ಯಾಜಿಸ್ಟ್ರೇಟ್ ಜಯರತ್ನೆ ಸೂಚನೆ ನೀಡಿದ್ದಾರೆ. ಭಯೋತ್ಪಾದಕ ತನಿಖಾ ವಿಭಾಗದ ಮಾಜಿ ಉಸ್ತುವಾರಿಯಾಗಿದ್ದ ಡಿಐಜಿ ನಲಕ ಡೆ ಸಿಲ್ವ ಕುಮಾರ ಜೊತೆಗೆ ಸಿರಿಸೇನಾ ಅವರನ್ನು ಹತ್ಯೆ ಮಾಡುವ ಯೋಜನೆ ಬಗ್ಗೆ ಚರ್ಚೆ ನಡೆಸಿದ್ದರು ಎಂಬ ಮಾಹಿತಿ ಬಹಿರಂಗವಾಗಿದೆ.  ಈ ವಿಚಾರದ ಬಗ್ಗೆ ಹೆಚ್ಚಿನ ತನಿಖೆ ನಡೆಸಿದಾಗ ಥಾಮಸ್ ಹೆಸರೂ ಹೊರಬಂದಿದ್ದು ಸಂಚಿನ ಭಾಗವಾಗಿದ್ದ ಹಿನ್ನೆಲೆಯಲ್ಲಿ ಆತನನ್ನು ಬಂಧಿಸಲಾಗಿದೆ.
SCROLL FOR NEXT