ದೇಶ

ಜಮ್ಮು-ಕಾಶ್ಮೀರ: ಉಗ್ರರ ಶೋಧ ಕಾರ್ಯಾಚರಣೆ ವೇಳೆ ನಾಗರಿಕನ ಸಾವು

Shilpa D
ಶ್ರೀನಗರ: ಸೇನೆ ಮತ್ತು ಉಗ್ರರ ನಡುವೆ ನಡೆದ ಗುಂಡಿನ ಕಾಳಗದಲ್ಲಿ ಓರ್ವ ನಾಗರಿಕ ಮೃತಪಟ್ಟಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಮೂರು ಕಡೆ ಎನ್‌ಕೌಂಟರ್‌ ನಡೆದಿದೆ. ಅನಂತ್‌ನಾಗ್ ಜಿಲ್ಲೆಯ  ನೂರುಬಾಗ್ಸ ಮೀಪದಲ್ಲಿ ಗುಂಡಿನ ಚಕಮಕಿ ನಡೆದಿದ್ದು, ಈ ಪ್ರದೇಶದಲ್ಲಿ ಇನ್ನಷ್ಟು ಮಂದಿ ಉಗ್ರರು ಅಡಗಿರುವ ಶಂಕೆ ಮೇರೆಗೆ ಶೋಧ ಕಾರ್ಯಾಚರಣೆ ಪ್ರಗತಿಯಲ್ಲಿದೆ.
ಖಚಿತ ಮಾಹಿತಿ ಮೇರೆಗೆ ಸೇನೆಯು ಎನ್‌ಕೌಂಟರ್‌ ನಡೆಸಿದ್ದು ಒಬ್ಬ ನಾಗರಿಕ ಮೃತಪಟ್ಟಿದ್ದಾರೆ.
ಕಾರ್ಯಾಚರಣೆ ಹಿನ್ನಲೆಯಲ್ಲಿ ಅನಂತ್​ನಾಗ್, ಶ್ರೀನಗರ ಹಾಗೂ ಬುಡ್ಗಾಮ್ ಜಿಲ್ಲೆಯಲ್ಲಿ ಇಂಟರ್‌ನೆಟ್ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಶ್ರೀನಗರದ ನೂರಾಬಾಗ್ ಪ್ರದೇಶದಲ್ಲಿ ಉಗ್ರರು ಮನೆಗಳಲ್ಲಿ ಅಡಗಿರುವ ಕುರಿತು ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಭದ್ರತಾ ಪಡೆ ಕೈಗೊಂಡ ಹುಡುಕಾಟ ಕಾರ್ಯಾಚರಣೆ ವೇಳೆ ಉಗ್ರರು ಅಡಗಿದ್ದ ಮನೆಯ ಮಾಲಿಕ ಮೃತಪಟ್ಟಿದ್ದಾನೆ. 
ಮೃತನನ್ನು ಮೊಹಮದ್ ಸಲೀಂ ಎಂದು ಗುರುತಿಸಲಾಗಿದೆ, ಸಲೀಂ ಬುಲೆಟ್ ಗಳಿಂದಲೇ ಮೃತ ಪಟ್ಟಿದ್ದಾರೆಯೇ ಎಂಬುದು ಖಚಿತವಾಗಿಲ್ಲ, ಭದ್ರತಾ ಪಡೆ ಯೋಧರಿಂದಲೋ ಅಥವಾ ಉಗ್ರರ ಗುಂಡಿಗೆ ಬಲಿಯಾಗಿದ್ದಾರೋ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಭದ್ರತಾ ಪಡೆಯ ಗುಂಡಿಗೆ ಆತ ಸಾವನ್ನಪ್ಪಿದ್ದಾನೆ ಎಂದು ಸ್ಥಳೀಯರು ಹೇಳಿದ್ದಾರೆ. ಇದರಿಂದ ಕ್ರೋಧಗೊಂಡ ನಾಗರಿಕರು ಭದ್ರತಾ ಪಡೆಗಳು ಕಲ್ಲು ತೂರಾಟ ನಡೆಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
SCROLL FOR NEXT