ದೇಶ

ಅನೈತಿಕ ಸಂಬಂಧ: 158 ವರ್ಷ ಹಳೇಯ ಐಪಿಸಿ ಸೆಕ್ಷನ್ 497 ಏನು ಹೇಳುತ್ತೆ?

Srinivas Rao BV
ನವದೆಹಲಿ: ಅನೈತಿಕ ಸಂಬಂಧ ಕ್ರಿಮಿನಲ್ ಅಪರಾಧ ಅಲ್ಲ ಎಂಬ ಮಹತ್ವದ ತೀರ್ಪು ಪ್ರಕಟಿಸಿರುವ ಸುಪ್ರೀಂ ಕೋರ್ಟ್,  158 ವರ್ಷಗಳ ಹಳೆಯ ಬ್ರಿಟಿಷ್ ಕಾಲದ ಕಾನೂನನ್ನು ಅಸಿಂಧುಗೊಳಿಸಿದೆ. 
ಹಾಗಾದರೆ 158 ವರ್ಷ ಹಿಂದಿನ ಸೆಕ್ಷನ್ 497 ಏನು ಹೇಳುತ್ತದೆ ಎಂಬುದನ್ನು ನೋಡೋಣ.  ಪರ ಪುರುಷನ ಪತ್ನಿಯೊಂದಿಗೆ ಮತ್ತೋರ್ವ ವಿವಾಹಿತ ಪುರುಷ ಲೈಂಗಿಕ ಸಂಬಂಧ ಹೊಂದಿದ್ದರೆ ಅದು ಅತ್ಯಾಚಾರವಾಗುವುದಿಲ್ಲ, ಬದಲಾಗಿ ವ್ಯಭಿಚಾರವಾಗುತ್ತದೆ, ಈ ರೀತಿಯ ಪ್ರಕರಣದಲ್ಲಿ ದೋಷಿಯೆಂದು ಸಾಬೀತಾದ ಪುರುಷನಿಗೆ ಐಪಿಸಿ ಸೆಕ್ಷನ್ 497 ರ ಪ್ರಕಾರ  5 ವರ್ಷ ಜೈಲು ಶಿಕ್ಷೆ, ದಂಡ ಅಥವಾ ಎರಡನ್ನೂ ವಿಧಿಸಲಾಗುತ್ತಿತ್ತು. ಆದರೆ ಇದಕ್ಕೆ ಉತ್ತೇಜನ ನೀಡಿದ್ದಕ್ಕಾಗಿ ಮಹಿಳೆಗೆ ಶಿಕ್ಷೆ ವಿಧಿಸುವಂತಿಲ್ಲ. ಇದು ಸೆಕ್ಷನ್ 497 ರಲ್ಲಿರುವ ಪ್ರಮುಖ ಅಂಶ. 
ಸೆಕ್ಷನ್ 497 ರಲ್ಲಿರುವ ಈ ಅಂಶವನ್ನು ಪ್ರಶ್ನಿಸಿ ಜೋಸೆಫ್ ಶೈನ್ ಅರ್ಜಿ ಸಲ್ಲಿಸಿದ್ದರು. ಅಷ್ಟೇ ಅಲ್ಲದೇ ಸಿಆರ್ ಪಿಸಿ ಸೆಕ್ಷನ್ 198 ರ ಪ್ರಕಾರ ಅಕ್ರಮ ಸಂಬಂಧ ಹೊಂದಿದ್ದ ಮಹಿಳೆಯ ಪತಿಗೆ ದೂರು ನೀಡಲು ಅವಕಾಶವಿದ್ದು, ಅಕ್ರಮ ಸಂಬಂಧ ಹೊಂದಿದ್ದ ಪುರುಷನ ಪತ್ನಿಗೆ ಈ ಅವಕಾಶ ಇಲ್ಲದಿರುವುದನ್ನೂ ಅರ್ಜಿಯಲ್ಲಿ ಪ್ರಶ್ನಿಸಲಾಗಿದೆ.  1954 ರಲ್ಲಿ ಇದೇ ವಿಷಯಕ್ಕೆ ಸಂಬಂಧಿಸಿದಂತೆ ತೀರ್ಪು ಪ್ರಕಟಿಸಿದ್ದ ಸುಪ್ರೀಂ ಕೋರ್ಟ್ ಸೆಕ್ಷನ್ 497 ನ್ನು ಎತ್ತಿ ಹಿಡಿದಿತ್ತು. ಆದರೆ ಈಗ ಸೆಕ್ಷನ್ 497 ನ್ನು ಅಸಿಂಧುಗೊಳಿಸಿದೆ. 
ಸೆಕ್ಷನ್ 497 ರ ಸಂಬಂಧ ಸುಪ್ರೀಂ ಕೋರ್ಟ್ ಗೆ ಪ್ರತಿಕ್ರಿಯೆ ನೀಡಿದ್ದ ಕೇಂದ್ರ ಸರ್ಕಾರ ವಿವಾಹದ ಪಾವಿತ್ರ್ಯತೆ ಉಳಿಯಬೇಕಾದರೆ ವಿವಾಹೇತರ ಸಂಬಂಧ ಶಿಕ್ಷಾರ್ಹವಾಗಿರಬೇಕು ಎಂದು ಹೇಳಿತ್ತು.  ವಿವಾಹೇತರ ಸಂಬಂಧ ಪ್ರಕರಣದಲ್ಲಿ ಪುರುಷ ಹಾಗೂ ಮಹಿಳೆ ಇಬ್ಬರನ್ನೂ ಸಮಾನ ಹೊಣೆಗಾರರು ಎಂದು ಪರಿಗಣಿಸಬೇಕೆಂಬ ಜೋಸೆಫ್ ಶೈನ್ ಅರ್ಜಿ ಸಲ್ಲಿಸಿದ್ದರು. 
SCROLL FOR NEXT