ಪುರಿ ಜಗನ್ನಾಥ ದೇವಾಲಯ 
ದೇಶ

ಇನ್ನು ಮುಂದೆ ಪುರಿ ಜಗನ್ನಾಥನನ್ನ ಕಾಣಲು ಕ್ಯೂನಲ್ಲಿ ಬನ್ನಿ! ಅಕ್ಟೋಬರ್ 1ರಿಂದ ಹೊಸ ವ್ಯವಸ್ಥೆ

ವಿಶ್ವವಿಖ್ಯಾತ ಒಡಿಶಾದ ಪುರಿ ಜಗನ್ನಾಥ ದೇವಾಲಯದಲ್ಲಿ ಅಕ್ಟೋಬರ್ 1 ರಿಂದ ಕ್ಯೂ ವ್ಯವಸ್ಥೆಯನ್ನು ಜಾರಿಗೆ ಬರಲಿದೆ. ಸುಪ್ರೀಂಕೋರ್ಟ್ ಸೂಚನೆ ಮೇರೆಗೆ ದೇವಸ್ಥಾನದಲ್ಲಿ ಕ್ಯೂ ವ್ಯವಸ್ಥೆಯನ್ನು....

ಪುರಿ: ವಿಶ್ವವಿಖ್ಯಾತ ಒಡಿಶಾದ ಪುರಿ ಜಗನ್ನಾಥ ದೇವಾಲಯದಲ್ಲಿ ಅಕ್ಟೋಬರ್ 1 ರಿಂದ  ಕ್ಯೂ ವ್ಯವಸ್ಥೆಯನ್ನು ಜಾರಿಗೆ ಬರಲಿದೆ. ಸುಪ್ರೀಂಕೋರ್ಟ್ ಸೂಚನೆ ಮೇರೆಗೆ  ದೇವಸ್ಥಾನದಲ್ಲಿ ಕ್ಯೂ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಜಾರಿಗೆ ತರಲು  ಶ್ರೀ ಜಗನ್ನಾಥ ದೇವಾಲಯದ ಆಡಳಿತ (ಎಸ್ಜೆಟಿಎ) ತೀರ್ಮಾನಿಸಿದೆ.
ದೇವಾಲಯದ ವ್ಯವಹಾರಗಳನ್ನು ಸುಗಮಗೊಳಿಸಲು ಸುಪ್ರೀಂ ಕೋರ್ಟ್ ನೀಡಿರುವ 12  ಸೂಚನೆಗಳ ಪೈಕಿ 10 ಸೂಚನೆಗಳನ್ನು ಜಾರಿಗೆ ತರಲು ನಾವು ತೀರ್ಮಾನಿಸಿದ್ದೇವೆ ಎಂದು ಎಸ್ಜೆಟಿಎ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರದೀಪ್ತ ಮಹಾಪಾತ್ರ ಹೇಳಿದ್ದಾರೆ.
ವರದಿಗಳ ಪ್ರಕಾರ, ಭಕ್ತರು ಸಿಂಹದ್ವಾರದಿಂದ ಕ್ಯೂ ನಲ್ಲಿ ಆಗಮಿಸಲಿದ್ದಾರೆ.ಹಾಗೂ ಬ್ಯಾರಿಕೇಡ್ ಗಳ ಮೂಲಕ ದೇವಾಲಯಕ್ಕೆ ತೆರಳಲಿದ್ದಾರೆ .ದರ್ಶನದ ನಂತರ, ಭಕ್ತರು ಉತ್ತರಾದ್ವಾರ ಮೂಲಕ ಭಕ್ತರು ಹೊರಬರಲಿದ್ದಾರೆ.ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ಕ್ಯೂ ಇರಲಿದೆ.
ಇದೇ ವೇಳೆ ಜನರ ಗುಂಪುಗಳನ್ನು ನಿಯಂತ್ರಿಸುವ ಸಲುವಾಗಿ ಅಲ್ಲಲ್ಲಿ ಹೆಚ್ಚುವರಿ ಸ್ಥಳಾವಕಾಶ ಸಹ ಇರಲಿದೆ.
ಜಗದನ್ನಾಥ ದೇವಸ್ಥಾನ ನಿರ್ವಹಣಾ ಸಮಿತಿಯ ಸಭೆಯಲ್ಲಿ, ಗಜಪತಿ ಮಹಾರಾಜ ದಿಬ್ಯಾಸಿಸ್ ದೇಬ್ ನೇತೃತ್ವ ವಹಿಸಿದ್ದು ದೇವಾಲಯಕ್ಕೆ ಸಂದಾಯವಾಗುವ ಎಲ್ಲಾ ಬೆಳ್ಳಿ, ಚಿನ್ನಗಳನ್ನು ಪ್ರತಿ ಸೋಮವಾರ ಬ್ಯಾಂಕ್ ಲಾಕರ್ ನಲ್ಲಿ ಇರಿಸುವ ವ್ಯವಸ್ಥೆ ತರಲಾಗುತ್ತದೆ. ಅಲ್ಲದೆ ಎಲಾ ಬೆಲೆಬಾಳುವ ವಸ್ತುಗಳನ್ನು ಎಸ್ಜೆಟಿಎ ಚಿನ್ನದ ಬಾಂಡ್ ಆಗಿ ಪರಿವರ್ತಿಸಬೇಕು ಎಂದು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT