ಕುರುಕ್ಷೇತ್ರ: ಮದುವೆಯಾಗಿ ಮಾರನೇ ದಿನವೇ ಆಕೆಯ ಪತ್ಯೂ ಸೇರಿ 7 ಜನರು ಬರ್ಬರ ಸಾಮೂಹಿಕ ಅತ್ಯಾಚಾರ ನಡೆಸಿರುವ ಘಟನೆ ಹರಿಯಾಣದ ಕುರುಕ್ಷೇತ್ರದಲ್ಲಿ ನಡೆದಿದೆ.
ಕುರುಕ್ಷೇತ್ರದ ಬಾಬೈನ್ ಪ್ರದೇಶದಲ್ಲಿ ನಡೆದ ಅಮಾನವೀಯ ಕೃತ್ಯದಲ್ಲಿ ನವವಿಹಾಇತೆಯ ಪತಿಯೇ ಪ್ರಮುಖ ಆರೋಪಿಯಾಗಿದ್ದಾನೆ.
ವವಧುವಿನ ತಂದೆ ಈ ಸಂಬಂಧ ಕುರುಕ್ಷೇತ್ರ ಮಹಿಲಾ ಪೋಲೀಸ್ ಠಾಣೆಯಲ್ಲಿ ಸೆಪ್ಟೆಂಬರ್ 26ರಂದು ಪ್ರಕರಣ ದಾಕಲಿಸಿದ್ದರೂ ಪೋಲೀಸರು ಮಾತ್ರ ಇದುವರೆಗೆ ಯಾವ ಕ್ರಮ ತೆಗೆದುಕೊಂಡಿಲ್ಲ ಎನ್ನುವುದು ಗಮನಾರ್ಹ.
ಸಂತ್ರಸ್ಥೆಯು 22 ವರ್ಷದವಳಾಗಿದ್ದು ಸೆಪ್ಟೆಂಬರ್ 12ರಂದುಯಮುನಾನಗರ ನಿವಾಸಿಯೊಡನೆ ಮದುವೆಯಾಗಿದ್ದಳು. ಆದರೆ ಹೀಗೆ ಮದುವೆಯಾದ ಎರಡು ದಿನಗಳ ಬಳಿಕ ವರನ ತಂದೆಯು "ನಿಮ್ಮ ಮಗಳು ಂಆನಸಿಕ ಅಸ್ವಸ್ಥಲಾಗಿದ್ದು ಆಕೆಯನ್ನು ಇಲ್ಲಿಂದ ಕರೆದೊಯ್ಯಿರಿ" ಎಂದು ವಧುವಿನ ತಂದೆಗೆ ಕರೆ ಮಾಡಿದ್ದಾರೆ. ತಕ್ಷಣ ಆಕೆಯ ತಂದೆ ಪತಿಯ ಮನೆಗೆ ಧಾವಿಸಿ ಬಂದಾಗ ಮಗಳು ಪ್ರಜ್ಞಾಹೀನಳಾಗಿ ನೆಲದ ಮೇಲೆ ಬಿದ್ದಿರುವುದು ಕಂಡಿದೆ.
ಆಕೆಯನ್ನು ಮನೆಗೆ ಕರೆದೊಯ್ದ ಬಳಿಕ ಆಕೆ ತನ್ನ ತಂದೆಯ ಬಳಿ ತನಗಾದ ಆಘಾತಕರ ಅನುಭವದ ಕುರಿತು ವಿವರಿಸಿದ್ದಾಳೆ.
ಮದುವೆಯಾದ ಮರುದಿನ ಸೆಪ್ಟೆಂಬರ್ 13ರ ರಾತ್ರಿ ಪತಿ ಹಾಗು ಅತ್ತೆ, ನಾದಿನಿಯರು ತನಗೆ ಮತ್ತು ಬರುವ ಪದಾರ್ಥ ಬೆರೆಸಿ ಹಾಲನ್ನು ಕುಡಿಯಲು ನೀಡಿದ್ದಾರೆ.ನಾನು ಅದನ್ನು ಕುಡಿದು ಪ್ರಜ್ಞೆ ಕಳೆದುಕೊಂಡಾಗ ಕೋಣೆಯೊಳಗೆ ಕರೆದೊಯ್ದ ಪತಿ ಅಲ್ಲಿ ಅವರ ಸೋದರ, ಅವರ ತಂಗಿಯ ಗಂಡ ಸೇರಿ ನನ್ನ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂದು ಆಕೆ ವಿವರಿಸಿದ್ದಾಳೆ.
ಇದಾಗಿ ಮರುದಿನ ಸೆಪ್ಟೆಂಬರ್ 14ಕ್ಕೆ ಮನೆಗೆ ಪೂಜಾ ವಿಧಿ ನೆರವೇರಿಸಲು ಬಂದ ನಾಲ್ವರು ಅಪರಿಚಿತರು ಸಹ ಸಹ ನನ್ನನ್ನು ಬಲಾತ್ಕರಿಸಿದ್ದಾರೆ. ಅತ್ತೆ, ಮಾವ, ನಾದಿನಿಯರು ಸಂಚು ರೂಪಿಸಿ ನನ್ನ ಅತ್ಯಾಚಾರಕ್ಕೆ ಕುಮ್ಮಕ್ಕು ನೀಡಿದ್ದಾರೆ ಎಂದು ಆಕೆ ಆರೋಪಿಸಿದ್ದಾಳೆ.
ಘಟನೆ ಸಂಬಂಧ ಪ್ರತಿಕ್ರಿಯೆ ನೀಡಿರುವ ಕುರುಕ್ಷೇತ್ರ ಮಹಿಳಾ ಠಾಣೆ ಇನ್ಸ್‌ಪೆಕ್ಟರ್ ಶೀಲವಂತಿ "ಸಂತ್ರಸ್ಥೆಯನ್ನು ಪರೀಶ್ಖಿಸಲಾಗಿದ್ದು ಪರೀಕ್ಷಾ ವರದಿ ಇನ್ನಷ್ಟೇ ಬರಬೇಕಿದೆ. ಪ್ರಕರಣಕ್ಕೆ ಸಂಬಂಧಿಸಿ ಎಫ್ಐಆರ್ ದಾಖಲಾಗಿದ್ದು ಹೆಚ್ಚಿನ ತನಿಖೆಗಾಗಿ ಯುಮುನಾ ನಗರ ಪೊಲೀಸ್ ಠಾಣೆಗೆ ಪ್ರಕರಣ ವರ್ಗಾಯಿಸಲಾಗಿದೆ ಎಂದರು.