ಚಂಡೀಘಢ: ಗುರುದ್ವಾರದಲ್ಲಿ ಖಲಿಸ್ಥಾನ ನಾಯಕನ ಭಾವಚಿತ್ರವಿದ್ದದ್ದಕ್ಕೆ ಹರಿಯಾಣ್ದ ಕರ್ನಲ್ ಪ್ರದೇಶದಲ್ಲಿನ ದಾಚಾರ್ ಗ್ರಾಮದ ಸಿಖ್ಖ್ ಗುರುದ್ವಾರಕ್ಕೆ ನಿಗದಿಯಾಗಿದ್ದ ಭೇಟಿಯನ್ನು ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ರದ್ದುಗೊಳಿಸಿದ್ದಾರೆ.
ಗುರುದ್ವಾರದಲ್ಲಿದ್ದ ಜಮಾಲೆ ಸಿಂಗ್ ಬಂದ್ರೇವಾಲೆ ಭಾವಚಿತ್ರವನ್ನು ತೆಗೆದು ಹಾಕಲು ಗುರುದ್ವಾರದ ಆಡಳಿತ ಮಂಡಳು ಸದಸ್ಯರು ಒಪ್ಪದ ಕಾರಣ ಖಟ್ಟರ್ ತಮ್ಮ ನಿಯೋಜಿತ ಭೇಟಿಯನ್ನು ರದ್ದುಗೊಳಿಸಿದ್ದ್ದಾರೆ.
ತನ್ನ ಕ್ಷೇತ್ರವಾದ ಕರ್ನಲ್ ನಲ್ಲಿ ಶುಕ್ರವಾರ 13 ತೀರ್ಥಸ್ಥಳಗಳಿಗೆ ಭೇಟಿ ನೀಡುವ ಉದ್ದೇಶದೊಡನೆ ಹೊರಟಿದ್ದ ಖಟ್ಟರ್ ಇದೇ ವೇಳೆ ದಾಚಾರ್ ಗ್ರಾಮದ ಗುರುದ್ವಾರಕ್ಕೆ ಭೇಟಿ ಕೊಡುವವರಿದ್ದರು.
"ಗುರುದ್ವಾರಕ್ಕೆ ಭೇಟಿ ನೀಡಲು ನಾನು ಸಮಯವನ್ನು ನಿಗದಿಗೊಳಿಸಿದ್ದೆ. ಆದರೆ ನನಗೆ ಅಲ್ಲಿದ್ದ ಬಂದ್ರೇವಾಲೆ ಭಾವಚಿತ್ರದ ಬಗೆಗೆ ಮಾಹಿತಿ ಸಿಕ್ಕಿದೆ. ಅದನ್ನು ತೆಗೆದು ಹಾಕಲು ನಾನು ಗುರುದ್ವಾರದ ಆಡಳಿತ ಮಂಡಳಿಯಲ್ಲಿ ಕೇಳಿದೆ.ಈ ಚಿತ್ರವನ್ನು ತೆಗೆದುಹಾಕಿದರೆ ನಾನು ಖಂಡಿತವಾಗಿ ಭೇಟಿ ನೀಡುತ್ತೇನೆ ಆದರೆ ಅವರು ಇದಕ್ಕೆ ನಿರಾಕರಿಸಿದ್ದಾರೆ. ಹೀಗಾಗಿ ಗುರುದ್ವಾರಕ್ಕೆ ನನ್ನ ಭೇಟಿ ರದ್ದಾಗಿದೆ"ಖಟ್ಟರ್ ತಿಳಿಸಿದ್ದಾರೆ
ಕಾನೂನು ಕೈಗೆ ತೆಗೆದುಕೊಳ್ಳುವವರ ವಿರುದ್ಧ ಕಾನೂನಿನ ಪ್ರಕಾರವೇ ಕ್ರಮ ಜರುಗಿಸುತ್ತೇವೆ ಎಂದು ಖಟ್ಟರ್ ಹೇಳಿದ್ದಾರೆ. ಖಟ್ಟರ್ ಜತೆ ಇದ್ದ ಬಿಜೆಪಿ ಶಾಸಕ ಬಕ್ಷ್ಶಿಶ್ ಸಿಂಗ್ ಮಾತನಾಡಿ ಗ್ರಾಮಸ್ಥರಿಗೆ ಶಾಂತಿ ಕಾಪಾಡಲು ಮನವಿ ಮಾಡಿದ್ದಾರೆ.
ಖಟ್ಟರ್ ಭೇಟಿ ಕಡೆ ಘಳಿಗೆಯಲ್ಲಿ ರದ್ದಾಗಿರುವುದು ತಮಗೆ ಆಶ್ಚರ್ಯ ತಂದಿದೆ ಎಂದು ಪ್ರತಿಭಟನಾಕಾರರು ಹೇಳಿದ್ದಾರೆ.
ಪ್ರತ್ಯೇಕ ಖಲಿಸ್ಥಾನ್ ಬೆಂಬಲಿತ ಸಂಘಟನೆ ನಾಯಕನಾದ ಜಮಾಲೆ ಸಿಂಗ್ ಬಂದ್ರೇವಾಲೆ ಭಾವಚಿತ್ರ ತೆಗೆದು ಹಾಕುವಂತೆ ಮುಖ್ಯಮಂತ್ರಿ ಖಟ್ಟರ್ ಅವರ ಕಡೆಯಿಂದ ನಮಗೆ ಆದೇಶ ಬಂದಿತ್ತು. ಆದರೆ ಹಾಗೆ ಮಾಡಿದಲ್ಲಿ ಗ್ರಾಮದಲ್ಲಿ ಉದ್ವಿಗ್ನ ವಾತಾವರಣ ಸೃಷ್ಟಿಯಾಗುತ್ತದೆ ಎಂದು ನಾವು ಹೇಳಿದ್ದೆವು. ಆದರೆ ಮುಖ್ಯಮಂತ್ರಿಗಳು ಗುರುದ್ವಾರ ಭೇಟಿ ರದ್ದಾಗಿರುವ ಬಗೆಗೆ ನಮಗೆ ಮಾಹಿತಿ ಇರಲಿಲ್ಲ ಎಂದು ಗುರುದ್ವಾರ ಆಡಳಿತ ಮಂಡಳಿ ಸದಸ್ಯರು ಹೇಳಿದ್ದಾರೆ.