ನಾಚಿಕೆ ಇಲ್ಲದ ಕಾಂಗ್ರೆಸ್ ಪಟೇಲರನ್ನು ಚೀನಾ ಶೂ, ಶರ್ಟ್ ಗಳಿಗೆ ಹೋಲಿಕೆ ಮಾಡುತ್ತಿದೆ: ಮೋದಿ 
ದೇಶ

ನಾಚಿಕೆ ಇಲ್ಲದ ಕಾಂಗ್ರೆಸ್ ಪಟೇಲರನ್ನು ಚೀನಾ ಶೂ, ಶರ್ಟ್ ಗಳಿಗೆ ಹೋಲಿಕೆ ಮಾಡುತ್ತಿದೆ: ಮೋದಿ

ಗುಜರಾತ್ ನ ನರ್ಮದಾ ನದಿ ತೀರದಲ್ಲಿ ನಿರ್ಮಾಣವಾಗುತ್ತಿರುವ ಸರ್ದಾರ್ ಪಟೆಲ್ ಅವರ ಏಕತೆಯ ಪ್ರತಿಮೆಯ ಹಿಂದೆ ಮೇಡ್ ಇನ್ ಚೀನಾ ಎಂದು ಬರೆಯಲಾಗಿದೆ ಎಂಬ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ

ನವದೆಹಲಿ: ಗುಜರಾತ್ ನ ನರ್ಮದಾ ನದಿ ತೀರದಲ್ಲಿ ನಿರ್ಮಾಣವಾಗುತ್ತಿರುವ ಸರ್ದಾರ್ ಪಟೆಲ್ ಅವರ  ಏಕತೆಯ ಪ್ರತಿಮೆಯ ಹಿಂದೆ ಮೇಡ್ ಇನ್ ಚೀನಾ ಎಂದು ಬರೆಯಲಾಗಿದೆ ಎಂಬ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿಕೆಗೆ ಮೋದಿ ತಿರುಗೇಟು ನೀಡಿದ್ದಾರೆ. 
"ಕಳೆದ 70 ವರ್ಷಗಳ ತನ್ನ ಆಡಳಿತಾವಧಿಯಲ್ಲಿ ಕಾಂಗ್ರೆಸ್ ಸರ್ದಾರ್ ಪಟೇಲರನ್ನು ಗೌರವಿಸಿಲ್ಲ. ಈಗ ಪಟೇಲರ ಪರಂಪರೆಯ ಮೇಲೆ ಹಕ್ಕು ಪ್ರತಿಪಾದನೆ ಮಾಡಲು ಕಾಂಗ್ರೆಸ್ ಕೆಳದರ್ಜೆ ರಾಜಕೀಯ ಮಾಡುತ್ತಿದೆ" ಎಂದು ಮೋದಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 
ಗುಜರಾತ್ ನಲ್ಲಿ ನಿರ್ಮಾಣವಾಗುತ್ತಿರುವ ಪಟೆಲರ್ ಅವರ ಬೃಹತ್ ಪ್ರತಿಮೆ ಮೇಡ್ ಇನ್ ಚೀನಾ ಎಂಬ ರಾಹುಲ್ ಗಾಂಧಿ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಮೋದಿ, ಉಕ್ಕಿನ ಮನುಷ್ಯ ಎಂಬ ಬಿರುದು ಹೊಂಡಿದ್ದ ಪಟೇಲ್ ಅವರೆಡೆಗೆ ಕಾಂಗ್ರೆಸ್ ಹಾಗೂ ಎಐಸಿಸಿ ಅಧ್ಯಕ್ಷರು ಹಗೆತನ ಹೊಂದಿದ್ದಾರೆ. ಸರ್ದಾರ್ ಪಟೆಲರ ವಿಷಯವನ್ನು ರಾಜಕೀಯ ಕೆಸೆರೆರೆಚಾಟಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದಿದ್ದಾರೆ. 
ವಿಡಿಯೋ ಕಾನ್ಫರೆನ್ಸ್ ಮೂಲಕ  ಚತ್ತೀಸ್ ಗಢದ ಬಿಜೆಪಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿರುವ ಮೋದಿ, ಸರ್ದಾರ್ ಪಟೇಲರನ್ನು ಕಾಂಗ್ರೆಸ್ ನವರು ಚೀನಾ ಉತ್ಪಾದಿತ ಶೂ ಮತ್ತು ಶರ್ಟ್ ಗಳಿಗೆ ಹೋಲಿಕೆ ಮಾಡುತ್ತಿದ್ದು, ನಾಚಿಕೆಗೇಡಿನ ಸಂಗತಿ ಎಂದು ಹೇಳಿದ್ದಾರೆ. 
"ಪ್ರಧಾನಿ ಮೋದಿ ಅವರು ಗುಜರಾತ್ ನಲ್ಲಿ ಸರ್ದಾರ್ ಪಟೆಲ್ ಅವರ ಬೃಹತ್ ಪ್ರತಿಮೆಯನ್ನು ನಿರ್ಮಾಣ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ ನಂತರ ತಿಳಿದಿದ್ದೇನೆಂದರೆ ಅದರ ಮೇಲೆ ಮೇಡ್ ಇನ್ ಚೀನಾ ಎಂದು ಬರೆದಿತ್ತು, ಇದು ಸರ್ದಾರ್ ಪಟೇಲರಿಗೆ ಮಾಡಿರುವ ಅವಮಾನ ಎಂದು ಎಂದು ರಾಹುಲ್ ಗಾಂಧಿ ಆರೋಪಿಸಿದ್ದರು. ನರ್ಮದಾ ನದಿಯ ತೀರದಲ್ಲಿ ನಿರ್ಮಾಣವಾಗುತ್ತಿರುವ ಸರ್ದಾ ಪಟೇಲ್ ಅವರ ಏಕತೆಯ ಪ್ರತಿಮೆ ಕಾಮಗಾರಿ ಪೂರ್ಣಗೊಂಡಿದ್ದು ಅ.31 ರಂದು ಲೋಕಾರ್ಪಣೆಗೆ ಸಿದ್ಧವಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Super Emergency: ತಾರಕಕ್ಕೇರಿದ ದೆಹಲಿ ಪ್ರತಿಭಟನೆ, ಬರೊಬ್ಬರಿ 3 ಸಾವಿರ ಮಂದಿ ವಶಕ್ಕೆ, ವಿಪಕ್ಷಗಳ ಆಕ್ರೋಶ!

'vote chori' ಹೇಗಿರತ್ತೆ ನಮ್ಗೆ ಗೊತ್ತು, ಸಿನಿಮಾದಲ್ಲಿ ತೋರಿಸಿದ್ದ ರಿಗ್ಗಿಂಗ್ ವಾತಾವರಣ ನಿಜವಾಗಿಯೂ ನೋಡಿದ್ದೇವೆ: SIR ಗೆ 124 ಮಾಜಿ ಅಧಿಕಾರಿಗಳು, ರಾಜತಾಂತ್ರಿಕರಿಂದ ಬೆಂಬಲ

'ನಿಮಗೆ ನಾಚಿಕೆಯಾಗಬೇಕು': CJP ನಾಯಕರ ವಿರುದ್ಧ ವಿಮಾನದಲ್ಲಿ ಪ್ರಯಾಣಿಕರ ಆಕ್ರೋಶ, Video!

ಅಭಿಜೀತ್ ದೀಪ್ಕೆ ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ; ಅಜ್ಜಿ ಸಾವಿನ ಸುದ್ದಿ ತಿಳಿಸುವುದು ಹೇಗೆ? ಪೊಲೀಸ್ ಕ್ರಮಕ್ಕೆ ಪೋಷಕರ ಆಕ್ರೋಶ

ದೇಶವಿರೋಧಿ ಶಕ್ತಿಗಳಿಂದ ಅಶಾಂತಿ ಸೃಷ್ಟಿಗೆ ಯತ್ನ; CJP ಪ್ರತಿಭಟನೆಯಿಂದ ದೂರವಿರಿ: ಮುಸ್ಲಿಮರಿಗೆ ಇಮಾಮ್‌ ಮುಖ್ಯಸ್ಥ ಕರೆ