ಸಂಗ್ರಹ ಚಿತ್ರ 
ದೇಶ

ಮುಂಬೈ: ಪೋಲೀಸರನ್ನೇ ಮಕ್ಕಳ ಕಳ್ಳರೆಂದು ಹೇಳಿ ತಾನು ಬಂಧನದಿಂದ ಪಾರಾದ ಚಾಲಾಕಿ ಕಳ್ಳ!

ಕಳ್ಳನನ್ನು ಹಿಡಿಯಲೆಂದು ಮುಫ್ತಿಯಲ್ಲಿ ಬಂದಿದ್ದ ಪೋಲೀಸರರನ್ನೇ ಮಕ್ಕಳ ಕಳ್ಳ ಎಂದು ಭಾವಿಸಿ ಜನರ ಗುಂಪೊಂದು ಹಿಗ್ಗಾ ಮುಗ್ಗಾ ಥಳಿಸಿದ ಘಟನೆ ಮುಂಬೈನಲ್ಲಿ ನಡೆದಿದೆ.

ಮುಂಬೈ: ಕಳ್ಳನನ್ನು ಹಿಡಿಯಲೆಂದು ಮುಫ್ತಿಯಲ್ಲಿ ಬಂದಿದ್ದ ಪೋಲೀಸರರನ್ನೇ ಮಕ್ಕಳ ಕಳ್ಳ ಎಂದು ಭಾವಿಸಿ ಜನರ ಗುಂಪೊಂದು ಹಿಗ್ಗಾ ಮುಗ್ಗಾ ಥಳಿಸಿದ ಘಟನೆ ಮುಂಬೈನಲ್ಲಿ ನಡೆದಿದೆ.
ಮುಂಬೈ ಶಿವಾಜಿ ನಗರ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.
ಘಟನೆ ವಿವರ
ಕಳ್ಳರನ್ನು ಹಿಡಿಯಲು ಮುಫ್ತಿಯಲ್ಲಿ ಬಂದಿದ್ದ ಇಬ್ಬರುಪೋಲೀಸರಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದ ಕಳ್ಳನೊಬ್ಬ ಪೋಲೀಸರನ್ನೇ ತೋರಿಸಿ "ಇವರು ಮಕ್ಕಳ ಕಳ್ಳರು" ಎಂದು ವದಂತಿ ಹರಡಿದ್ದಾನೆ.ಜನರು ಕಳ್ಳನ ಮಾತನ್ನು ನಂಬಿ ಮುಫ್ತಿಯಲ್ಲಿದ್ದ ಪೋಲೀಸರ ಮೇಲೆ ಹಲ್ಲೆ ನಡೆಸುತ್ತಾರೆ.ಈ ವೇಳೆ ನಿಜವಾದ ಕಳ್ಳ ಗುಂಪಿನಿಂದ ತಪ್ಪಿಸಿಕೊಂಡು ಪರಾರಿಯಾಗಲು ಯಶಸ್ವಿಯಾಗುತ್ತಾನೆ.
ಇತ್ತ ಘಟನೆ ವಿವರ ತಿಳಿದ ಶಿವಾಜಿ ನಗರ ಠಾಣೆಯ ಪಿಸಿಆರ್ ವ್ಯಾನ್ ಸ್ಥಳಕ್ಕಾಗಮಿಸಿ ಸ್ಥಳೀಯ ಜನರಿಂದ ಪೋಲೀಸರನ್ನು ರಕ್ಷಿಸಿದ್ದಾರೆ. ಹಲ್ಲೆಗೊಳಗಾದ ಪೋಲೀಸ್ ಸಿಬ್ಬಂದಿ ಅಪಾಯದಿಂದ ಪಾರಾಗಿದ್ದಾರೆ.
ಗಲಭೆಯನ್ನು ಹತೋಟಿಗೆ ತಂದಿರುವ ಪೋಲೀಸರು ಕಳ್ಳ ವದಂತಿ ಹಬ್ಬಿಸಿ ಪರಾರಿಯಾಗಲು ಸಹಕರಿಸಿದ್ದಾರೆ ಎನ್ನಲಾದ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ.
ಸ್ಥಳದಲ್ಲಿದ್ದ ಸಿಸಿಟಿವಿ ದೃಶ್ಯದ ಆಧಾರದ ಮೇಲೆ ತಪ್ಪಿಸಿಕೊಂಡ ಕಳ್ಳನನ್ನು ಹಿಡಿಯಲು ಪೋಲೀಸರು ವ್ಯಾಪಕ ಕ್ರಮ ತೆಗೆದುಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ತುಳು ಭಾಷೆಗೆ ಸಿಕ್ತು ಅಧಿಕೃತ ಸ್ಥಾನಮಾನ: ಕರ್ನಾಟಕದ 2ನೇ ಹೆಚ್ಚುವರಿ ಅಧಿಕೃತ ಭಾಷೆಯಾಗಿ ಘೋಷಣೆ, ಕರಾವಳಿಗೆ ಹೊಸ ಟೂರಿಸಂ ನೀತಿ!

‘ಪ್ರಜಾಪ್ರಭುತ್ವದ ಕರಾಳ ದಿನ’, 'ತಲೆ ಬಾಗಲ್ಲ, ಯಾರಿಗೂ ಶರಣಾಗಲ್ಲ'; ಮಮತಾ ಬ್ಯಾನರ್ಜಿ ಕೆಂಡಾಮಂಡಲ

ಪ್ರಧಾನಿ ಮೋದಿಗೆ UAE ಅಧ್ಯಕ್ಷ ನಹ್ಯಾನ್ ದೂರವಾಣಿ ಕರೆ: ಪಶ್ಚಿಮ ಏಷ್ಯಾದಲ್ಲಿನ ಬೆಳವಣಿಗೆ, ಕಾರ್ಯತಂತ್ರದ ಪಾಲುದಾರಿಕೆ ಕುರಿತು ಚರ್ಚೆ!

ದೀದಿ ಬಣಕ್ಕೆ ಫುಟ್‌ಬಾಲ್, ಬಂಡಾಯಗಾರರಿಗೆ ಲಕೋಟೆ: ಟಿಎಂಸಿ ಚಿಹ್ನೆ ಫ್ರೀಜ್ ಬೆನ್ನಲ್ಲೇ ಚುನಾವಣಾ ಆಯೋಗದಿಂದ ಮಹತ್ವದ ಆದೇಶ!

ಬಾಲಿವುಡ್ ನಟಿ ಕತ್ರೀನಾ ಕೈಫ್ ಬಾಡಿ ಶೇಮಿಂಗ್: ಟ್ರೋಲ್ ಮಾಡುವವರ ವಿರುದ್ಧ ನಟಿ ರಮ್ಯಾ ಕಿಡಿ!