ದೇಶ

'ಜನರ ಇಚ್ಚೆ'ಯಂತೆ ಆನೆಗಳ ಪ್ರತಿಮೆ ನಿರ್ಮಾಣವಾಗಿದೆ: ಸುಪ್ರೀಂಗೆ ಮಾಯಾವತಿ ಸ್ಪಷ್ಟನೆ

Raghavendra Adiga
ನವದೆಹಲಿ: "ಜನರ ಇಚ್ಚೆ"ಯ ಅನುಸಾರ ಉತ್ತರ ಪ್ರದೇಶದ ಅನೇಕಕಡೆ ನಮ್ಮ ಪಕ್ಷ ಬಹುಜನ ಸಮಾಜ ಪಕ್ಷದ ಚಿಹ್ನೆ "ಆನೆ"ಯ ಪ್ರತಿಮೆಯನ್ನು ಸ್ಥಾಪಿಸಲಾಗಿದೆ- ಹೀಗೆಂದು ಬಿಎಸ್ಪಿ ಅಧಿನಾಯಕಿ ಮಾಯಾವತಿ ಮಂಗಳವಾರ ಸುಪ್ರೀಂ ಕೋರ್ಟ್ ಗೆ ಅಫಿಡವಿಟ್ ಸಲ್ಲಿಸಿದ್ದಾರೆ. ರಾಜ್ಯದ ನಾನಾ ಕಡೆಗಳಲ್ಲಿ ಆನೆಯ ಪ್ರತಿನ್=ಮೆ ಸ್ಥಾಪನೆಗೆ ಮಾಡಿರುವ ವೆಚ್ಚದ ಕುರಿತು ಸುಪ್ರೀಂ ಕೋರ್ಟ್ ಪ್ರಶ್ನಿಸಿದ್ದು ಇದಕ್ಕೆ ಸಮರ್ಥನೆಯಾಗಿ ಮಾಯಾವತಿ ಈ ಅಫಿಡವಿಟ್ ಸಲ್ಲಿಸಿದ್ದಾರೆ.
2007 ರಿಂದ 2012ರ ನಡುವೆ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದ ಮಾಯಾವತಿ ರಾಜ್ಯದ ನಾನಾ ಕಡೆ ಆನೆಯ ಪ್ರತಿಮೆ ಸ್ಥಾಪಿಸಿದ್ದರು. ಈ ಸಂಬಂಧ 2009 ರಲ್ಲಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ನ್ಯಾಯಾಲಯ ಇಂದು ವಿಚಾರಣೆ ನಡೆಸಿದೆ. ಮಾಯಾವತಿ ಸರ್ಕಾರ 2,000 ಕೋಟಿ ರೂ. ಸಾರ್ವಜನಿಕ ಹಣವನ್ನು ಇದಕ್ಕಾಗಿ ವ್ಯಯೊಸೊದೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ.
ಇದೇ ವೇಳೆ "ಇತರೆ ರಾಜಕೀಯ ಪಕ್ಷಗಳು ತಮ್ಮ ನಾಯಕರ ಪ್ರತಿಮೆಗಳನ್ನು ಸ್ಥಾಪಿಸಿದ್ದಾರೆ" ಮಾಯಾವತಿ ಅಫಿಡವಿಟ್ ನಲ್ಲಿ ವಾದಿಸಿದ್ದಾರೆ.ಪ್ರತಿಮೆ ನಿರ್ಮಾಣದ ವಿರುದ್ಧದ ಅರ್ಜಿ ರಾಜಕೀಯ ಪ್ರಚೋದಿತವಾಗಿದ್ದು ಇದು ಸಾರ್ವಜನಿಕ ಕಾಳಜಿ ಹೊಂದಿಲ್ಲ ಎಂದು ಮಾಯಾವತಿ ಹೇಳೀದ್ದಾರೆ.ಅಷ್ಟೇ ಅಲ್ಲದೆ ಆನೆಗಳು ಕೇವಲ ಬಿಎಸ್ಪಿ ಪಕ್ಷದ ಚಿಹ್ನೆ ಮಾತ್ರವೇ ಆಲ್ಲ, ಭಾರತೀಯ ಪಾರಂಪರಿಕ ವಾಸ್ತುಶಿಲ್ಪದ ಸಂಕೇತವೂ ಹೌದು. 
ಮಾಯಾವತಿ ಸಾರ್ವಜನಿಕರ ಹಣ ಬಳಸಿ ಆನೆ ಪ್ರತಿಮೆಗಳ ನಿರ್ಮಾಣ ಮಾಡಿದ್ದಾರೆ. ಈ ಪ್ರತಿಮೆಗಳ ನಿರ್ಮಾಣಕ್ಕೆ ಖರ್ಚಾದ ಹಣವನ್ನು ಹಿಂತಿರುಗಿಸಬೇಕು ಎಂದು ವಕೀಲ ರವಿಕಾಂತ್​ ಸುಪ್ರೀಂ ಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.
SCROLL FOR NEXT