ದೇಶ

ಆರ್ಟಿಕಲ್ 35ಎ ರದ್ದಾದರೆ ಭಾರತದೊಡನೆ ಜಮ್ಮು ಕಾಶ್ಮೀರ ಸಂಬಂಧ ಅಂತ್ಯ: ಮೆಹಬೂಬಾ ಮುಫ್ತಿ

Raghavendra Adiga
ಶ್ರೀನಗರ: ಒಂದೊಮ್ಮೆ ನಿಯಮಗಳು ಹಾಗೂ ಪರಿಸ್ಥಿತಿಗಳು ಬದಲಾದದ್ದಾದರೆ ಭಾರತ ಒಕ್ಕೂಟದೊಂದಿಗಿನ ಜಮ್ಮು ಮತ್ತು ಕಾಶ್ಮೀರದ ಸಂಬಂಧ ಶೀಘ್ರವೇ ಕೊನೆಗೊಳ್ಳಲಿದೆ ಎಂದು ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ  ಹೇಳಿದ್ದಾರೆ. ಆರ್ಟಿಕಲ್  35 ಎ ವಿಚಾರದಲ್ಲಿ ಅಮಿತ್ ಶಾ ನೀಡಿದ್ದ ಹೇಳಿಕೆಗೆ ಮುಫ್ತಿ ಈ ಪ್ರತಿಕ್ರಿಯೆ ನೀಡಿದ್ದಾರೆ.
ಜಮ್ಮು ಕಾಶ್ಮೀರದ ಅನಂತ್ ನಾಗ್ ಲೋಕಸಭೆ ಕ್ಷೇತ್ರದಿಂಡ ಕಣಕ್ಕಿಳಿಯಲಿರುವ ಮುಫ್ತಿ ಬುಧವಾರ ತಮ್ಮ ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಸಿದ ನಂತರ ಸುದ್ದಿಗಾರರೊಡನೆ ಮಾತನಾಡಿದ ಮುಫ್ತಿ "ಭಾರತ ಸರ್ಕಾರ ಸಧ್ಯ ಜಾರಿಯಲ್ಲಿರುವ ನಿಯಮ ಹಾಗೂ ಪರಿಸ್ಥಿತಿಗಳನ್ನು ಬದಲಾಯಿಸಿದ್ದಾದರೆ ಕಾಶ್ಮೀರವು ಭಾರತ ಒಕ್ಕೂಟದೊಂದಿಗೆ ಹೊಂದಿರುವ ಸಂಬಂಧ ಕೊನೆಗೊಳ್ಳಲಿದೆ. ಜಮ್ಮು ಮತ್ತು ಕಾಶ್ಮೀರವನ್ನು ಭಾರತದೊಡನೆ ಸೇರ್ಪಡಿಸಿದ ಅವಧಿಯಲ್ಲಿ ಮಾಡಿಕೊಳ್ಲಆಗಿರುವ ನಿಯಮ ಹಾಗೂಷರತ್ತುಗಳಲ್ಲಿ ಮಾರ್ಪಾಡುಗಳೇನಾದರೂ ಆದಲ್ಲಿ ದೇಶದೊಂದಿಗಿನ ಸಂಬಂಧ ಕೊನೆಯಾಗಲಿದೆ" ಎಂದಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ನಿವಾಸಿಗಳ  ಹಕ್ಕುಗಳ ವಿಷಯದಲ್ಲಿ ಜಾರಿಯಲ್ಲಿರುವ ವಿಶೇಷ ಸ್ಥಾನಮಾನವನ್ನು ಖಾತರಿಪಡಿಸುವ ಆರ್ಟಿಕಲ್  35 ಎ  ಅನ್ನು 2020 ರೊಳಗೆ ರದ್ದುಪಡಿಸಲಾಗುವುದು ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹೇಳಿದ್ದರು.
ಮೆಹಬೂಬಾ ಹೇಳುವಂತೆ 2015 ರಲ್ಲಿ ಜಮ್ಮು ಮತ್ತು ಕಾಶ್ಮೀರ ಸರ್ಕಾರ ರಚನೆಯ ಸಮಯದಲ್ಲಿ ನ್ನ ತಂದೆ ಮುಫ್ತಿ ಮೊಹಮ್ಮದ್ ಸಯೀದ್ ಮತ್ತು ಬಿಜೆಪಿ ನಡುವೆ ಆಗಿರುವ ಒಪ್ಪಂದದ ನಕಲನ್ನೇ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಬಳಸಿಕೊಂಡಿದೆ."ಕಾಂಗ್ರೆಸ್ ಪ್ರಣಾಳಿಕೆ  ಮುಫ್ತಿ ಮೊಹಮ್ಮದ್ ಸಯೀದ್ ಬಿಜೆಪಿ ಜೊತೆಗಿನ ಒಪ್ಪಂದದ ನಕಲಾಗಿದೆ.ನಾಗರಿಕ ಪ್ರದೇಶಗಳಲ್ಲಿನ ಸೇನೆಯ ಪ್ರಮಾಧಿಕಾರವನ್ನು ಹಿಂಪಡೆಯುವುದು, ಎ ಎಫ್ ಎಸ್ ಪಿಎ ಮಾರ್ಪಾಡು ಸೇರಿ ಎಲ್ಲಾ ಅಂಶಗಳೂ ಮುಫ್ತಿ ಹಾಗೂ ಬಿಜೆಪಿ ನಡುವೆ ಆಗಿರುವ ಒಪ್ಪಂದದಲ್ಲಿದ್ದಂತೆಯೇ ಇದೆ." ಅವರು ಹೇಳಿದ್ದಾರೆ.
SCROLL FOR NEXT